ಶೃಂಗೇರಿಯಲ್ಲಿ ಕಾಡು ಆನೆ ದಾಳಿಗೆ ಇಬ್ಬರು ಬಲಿ!
– ಸಹೋದರರನ್ನು ತುಳಿದು ಸಾಯಿಸಿದ ಕಾಡು ಆನೆ
– ಸ್ಥಳದಲ್ಲಿ ಬಿಗುವಿನ ವಾತಾವರಣ: ಜನರ ಆಕ್ರೋಶ
NAMMUR EXPRESS BREAKING NEWS
ಶೃಂಗೇರಿ: ಕಾಡಾನೆ ದಾಳಿಗೆ ಇಬ್ಬರು ರೈತರ ದುರ್ಮರಣವಾಗಿದೆ.
ಶೃಂಗೇರಿಯ ಕೆರೆಕಟ್ಟೆಯಲ್ಲಿ ಕಾಡಾನೆಯ ಭೀಕರ ದಾಳಿಗೆ ಇಂದು ಮುಂಜಾನೆ ಉಮೇಶ್ ಮತ್ತು ಹರೀಶ್ ಎಂಬ ಇಬ್ಬರು ಸಹೋದರರು ರೈತರು ದುರ್ಮರಣ ಹೊಂದಿದ್ದಾರೆ. ಅರಣ್ಯ ಸಚಿವರು ಹಾಗೂ ಶಾಸಕರು ಸ್ಥಳಕ್ಕೆ ಆಗಮನ ಮಾಡಲೇಬೇಕು ಎಂದು ಜನ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮಂದಿ ಕಾಡು ಆನೆ ದಾಳಿಗೆ ಈ ವರೆಗೆ ಬಲಿ ಆಗಿದ್ದಾರೆ. ಆಗುಂಬೆ ಬಳಿ ಪ್ರತ್ಯಕ್ಷ ಆಗಿದ್ದ ಆನೆ ಇದು ಎನ್ನಲಾಗಿದೆ.








