ಕೋಣಂದೂರಲ್ಲಿ ಅದ್ದೂರಿ ಹಿಂದೂ ಸಂಗಮ!
– ಶೋಭಾ ಯಾತ್ರೆಯಲ್ಲಿ ಜನವೋ ಜನ…ಸಾಂಸ್ಕೃತಿಕ ಕಲರವ
– ಸಂಸದ ರಾಘವೇಂದ್ರ, ಶಾಸಕ ಆರಗ ಸೇರಿ ಅನೇಕ ಗಣ್ಯರು ಹಾಜರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ದ ಬೃಹತ್ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಭಾರೀ ಜನಸಾಗರ, ಶಿಸ್ತುಬದ್ಧ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು. ಸಂಘಶತಾಬ್ಧಿ ಸಂಭ್ರಮದ ಭಾಗವಾಗಿ ನಡೆದ ಈ ಕಾರ್ಯಕ್ರಮ ಕೋಣಂದೂರು ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವಂತಾಯಿತು.
ಸಂಸದ ಬಿ. ವೈ. ರಾಘವೇಂದ್ರ, ಶ್ರೀ ಬೃಹನ್ಮಠ ಮಹಾ ಸ್ವಾಮೀಜಿ, ಶಾಸಕರಾದ ಆರಗ ಜ್ಞಾನೇಂದ್ರ, ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ಪ್ರಮುಖರಾದ ಹೆದ್ಧೂರ್ ನವೀನ್, ಉದ್ಯಮಿಗಳಾದ ಸದಾಶಿವ ,ಕೆ ಆರ್ ಪ್ರಕಾಶ್ ,ಕೆ ಆರ್ ಪ್ರಸಾದ್ ,ಮಂಗಳ ಗೋಪಿ , ಸುಧೀರ್ ಶೆಟ್ಟಿ (ದುರ್ಗಾ ಕ್ಯಾಶೇವ್) ,ಸೋಮಶೇಖರ್ ಚಂದವಳ್ಳಿ, ಅಂಜೂರ, ಸತೀಶ್ ಶೆಟ್ಟಿ , ಅನಿಲ್ , ದೇವರಾಜ್ ಶೆಟ್ಟಿ ,ಪ್ರವೀಣ್,ಮತ್ತು ಇನ್ನಿತರ ಬಿ ಜೆ ಪಿ ಮತ್ತು ಆರ್ ಎಸ್ ಎಸ್ ಮುಖಂಡರು ಮತ್ತು ಇತರೆ ಗಣ್ಯರು ಇದ್ದರು.
ದಿಕ್ಸೂಚಿ ಭಾಷಣವನ್ನು ಸುನೀಲ್ ಕೆ ಆರ್ ಮಾಡಿದರು. ಭವ್ಯ ಶೋಭಾಯಾತ್ರೆ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ಭಜನಾ ತಂಡಗಳು, ಡೊಳ್ಳು ಕುಣಿತ ಕಲಾವಿದರು, ದೇಶಭಕ್ತಿಯನ್ನು ಸಾರುವ ವೈವಿಧ್ಯಮಯ ಟ್ಯಾಬ್ಲೋಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ವಿಶೇಷವಾಗಿ ಕೋಣಂದೂರಿನ ಆಟೋ, ಟ್ರ್ಯಾಕ್ಟರ್ ಹಾಗೂ ಪಿಕಪ್ ವಾಹನಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದದ್ದು ಎಲ್ಲರ ಗಮನ ಸೆಳೆದ ವಿಶೇಷ ಕ್ಷಣವಾಯಿತು.
ಸಾಲೂರು ನರಟೂರು ಅಲ್ಲಿ ನಡೆದ ಹಿಂದೂ ಸಂಗಮದಲ್ಲಿ ಯೋಧರಿಗೆ ನಮನ ಸಲ್ಲಿಸಲಾಯಿತು.








