ಆಟೋ ದಾಖಲೆ, ಸುರಕ್ಷತೆ, ನಿಯಮ ಪಾಲನೆ ಕಡ್ಡಾಯ!
– ತೀರ್ಥಹಳ್ಳಿಯಲ್ಲಿ ಆಟೋ ಚಾಲಕರ ಜತೆ ಪೊಲೀಸ್ ಸಭೆ
– ನಿಯಮ ಮೀರಿದ್ರೆ ಕಾನೂನು ಕ್ರಮ ಎಚ್ಚರಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ನಾಲೂರು ಬಳಿ ಆಟೋ ಅಪಘಾತದಲ್ಲಿ ಮಹಿಳೆ ಓರ್ವರು ಭೀಕರವಾಗಿ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಆಟೋ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ಆಟೋಗಳ ಬೇಕಾಬಿಟ್ಟಿ ಚಾಲನೆ ಕಡಿವಾಣ ಹಾಕಲು ನಿಯಮ ಬಿಗಿ ಮಾಡಿದ್ದು ಎಲ್ಲಾ ದಾಖಲೆ ಹಾಗೂ ವಾಹನ ಸುರಕ್ಷತೆಗೆ ಒಂದು ವಾರದ ಗಡುವು ನೀಡಲಾಗಿದೆ. ಪೊಲೀಸ್ ಇಲಾಖೆ ಈಗ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಎಲ್ಲಾ ದಾಖಲೆ ಸರಿ ಮಾಡಲು ಸೂಚಿಸಿದ್ದಾರೆ.
ಡಿವೈಎಸ್ಪಿ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಮಾಳೂರ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್, ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪಗೌಡ, ಆಗುಂಬೆ ಸಬ್ಇನ್ಸ್ಪೆಕ್ಟರ್ ಶಿವನಗೌಡ ಸೇರಿ ಪೊಲೀಸ್ ಅಧಿಕಾರಿಗಳು ಇದ್ದರು.
ಸೂಚನೆಗಳು ಏನೇನು?
1. ಕಡ್ಡಾಯವಾಗಿ ಲೈಸನ್ಸಸ್ ಹೊಂದುವುದು
2. ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು
3. FC ರಿನಿವಲ್ ಮಾಡಿಸಿಕೊಳ್ಳುವುದು
4. 5 km ಒಳಗೆ ಆಟೋ ಬಾಡಿಗೆ ಮಾಡಿಕೊಳ್ಳುಕದು
5. ಎಮಿಷನ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು
6. ಅಗತ್ಯಕಿಂತ ಹೆಚ್ಚಿನ ಬಾಡಿಗೆ ತೆಗಿದುಕೊಳ್ಳುವುದುನ್ನು ಕಂಡು ಬಂದರೆ ದೂರ ದಾಖಳಿಸಲಾಗುವುದು
7. ಹೆಚ್ಚಿನ ಮಕ್ಕಳನ್ನು ಶಾಲೆಗೆ ಬಿಡುವುದು ಅಥವಾ ಹೆಚ್ಚಿನ ಜನರನ್ನು ಹಾಕಿಕೊಂಡು ಹೋಗುವುದನ್ನು ತಡೆಯುವುದು
8. ನಿಗಿದಪಡಿಸಿಡ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಿದರೆ ಪ್ರಕರಣವನ್ನು ದಾಖಳಿಸಲಾಗುವುದು








