ತೀರ್ಥಹಳ್ಳಿ ಭೂ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿ ಬಸಪ್ಪ
– ರೈತ ಪರವಾಗಿ ಉತ್ತಮ ಕೆಲಸ ಮಾಡಿದ್ದ ಹಿನ್ನೆಲೆ ಆಯ್ಕೆ
– ಸಮಸ್ತ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ ಬಸಪ್ಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
ಬ್ಯಾಂಕಿನ ವೃತ್ತಿಪರ ನಿರ್ದೇಶಕರನ್ನಾಗಿ ಅಂದಗೆರೆ ಬಸಪ್ಪರವರನ್ನು ಕೋ ಆಪ್ ಮಾಡಿಕೊಳ್ಳಲಾಗಿದೆ. ಅಂದಗೆರೆ ಬಸಪ್ಪ ಹಿಂದಿನ ಅವಧಿಯಲ್ಲಿ ತೀರ್ಥಹಳ್ಳಿ ಭೂ ಬ್ಯಾಂಕ್ನ ನಿರ್ದೇಶಕರಾಗಿ ರೈತ ಪರವಾಗಿ ಉತ್ತಮ ಕೆಲಸ ಮಾಡಿದ್ದರು. ಇವರ ಈ ಕಾಳಜಿಯನ್ನು ಗಮನಿಸಿ ತೀರ್ಥಹಳ್ಳಿ ಭೂ ಬ್ಯಾಂಕಿನ ಆಡಳಿತ ಮಂಡಳಿ ಬಸಪ್ಪ ಇವರನ್ನು ಬ್ಯಾಂಕಿನ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದೆ ಎಂದು ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾದ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.
ಹಿರಿಯ ರೈತ ಪರ, ಜನಪರ ನಾಯಕರು ಆಗಿರುವ ಬಸಪ್ಪ ಅವರಿಗೆ ಗ್ರಾಮಸ್ತರು, ಸ್ನೇಹಿತರು ಕೂಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಾಳೂರು ವ್ಯವಸಾಯ ಸೊಸೈಟಿ ನಿರ್ದೇಶಕರು, ಮಲ್ನಾಡ್ ಕ್ರೆಡಿಟ್ ಕೋ ಆಪರೇಟಿವ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಆಡಳಿತ ಮಂಡಳಿಗೆ ಧನ್ಯವಾದ ಅರ್ಪಣೆ
ತನ್ನ ಸೇವೆಯನ್ನು ಗಮನಿಸಿ ತನ್ನನ್ನು ತೀರ್ಥಹಳ್ಳಿ ಭೂ ಬ್ಯಾಂಕಿನ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿರುವುದಕ್ಕೆ ಭೂ ಬ್ಯಾಂಕಿನ ಆಡಳಿತ ಮಂಡಳಿಗೆ ಅಂದಗೆರೆ ಬಸಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.








