ತೀರ್ಥಹಳ್ಳಿಯಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ತಪಾಸಣೆ
– ನಯನಾ ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಿಬಿರ
– ಮಹಿಳೆಯರಿಗೆ ಆಸರೆಯಾದ ಮಲೆನಾಡು ಮಹಿಳಾ ಟ್ರಸ್ಟ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಲೆನಾಡು ಮಹಿಳಾ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ ನಯನ ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸ್ತ್ರೀಯರಲ್ಲಿ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮನೆ ಮನೆಗೆ ತೆರಳಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಈ ಶಿಬಿರಕ್ಕೆ ಕರೆ ತರಲು ಮಲೆನಾಡು ಮಹಿಳಾ ಟ್ರಸ್ಟ್ ತುಂಬಾ ಶ್ರಮಿಸಿದ್ದು, ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯರಿಗೆ ಈ ರೋಗ ಕಂಡು ಬಂದಲ್ಲಿ ಅವರು ಧೈರ್ಯವಾಗಿ ಹಾಸ್ಪಿಟಲ್ ನಲ್ಲಿ ಹೋಗಿ ರೋಗಕ್ಕೆ ಔಷಧೋಪಚಾರ ಮಾಡಲು ಹಿಂಜರಿಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ರೋಗ ಕಂಡು ಬರುತ್ತಿದೆ. ಇದನ್ನು ಹೋಗಲಾಡಿಸುವ ಸಲುವಾಗಿ ಮಲೆನಾಡು ಮಹಿಳಾ ಟ್ರಸ್ಟ್ ಈ ಶಿಬಿರ ಹಮ್ಮಿಕೊಂಡಿದೆ.
ಶುಕ್ರವಾರ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಅಂಗನವಾಡಿಯಲ್ಲಿ ನಡೆದ ಈ ಶಿಬಿರದಲ್ಲಿ ಶಿವಮೊಗ್ಗದ ನಾರಾಯಣ ಹೃದಯಾಲಯ ಹಾಸ್ಪಿಟಲ್ ನುರಿತ ತಜ್ಞ ವೈದ್ಯರು ತಪಾಸಣೆ ನಡೆಸಿದರು. ಈ ಶಿಬಿರಕ್ಕೆ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಯುವ ಮುಖಂಡ ವಿಕ್ರಂ ಶೆಟ್ಟಿ, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ. ಶಿಬಿರದಲ್ಲಿ ಮಲೆನಾಡು ಮಹಿಳಾ ಟ್ರಸ್ಟಿನ ಸಂಸ್ಥಾಪಕ ಸದಸ್ಯರುಗಳಾದ ಟ್ರಸ್ಟಿನ ಉಪಾಧ್ಯಕ್ಷರಾದ ಸ್ಮಿತಾ ಹುಲಿರಾಜ್, ಕಾರ್ಯದರ್ಶಿ ಸ್ಮಿತಾ ಮೋಹನ್, ಖಜಾಂಚಿ ವೀಣಾ ಗಿರೀಶ್, ಹಾಗೂ ಟ್ರಸ್ಟಿಗಳಾದ ಜ್ಯೋತಿ ದಿಲೀಪ್, ವಿಜಯ ಪದ್ಮನಾಭ, ಆಶಾ ಡೆನಿಯಲ್, ಸಹನಾ ಕಿಶೋರ್, ಶೃತಿ ಆದರ್ಶ್ ಹಾಗೂ ನೇತ್ರಾವತಿ ಚಂದ್ರಹಾಸ್ ಉಪಸ್ಥಿತಿ ಇದ್ದರು.








