ರಾಷ್ಟ್ರ ಮಟ್ಟಕ್ಕೆ ‘ನಿರಂತರ’ ಚೆಸ್ ತರಬೇತಿ ಕೇಂದ್ರದ ಮಕ್ಕಳು
– ವಾಗ್ದೇವಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಆದ್ಯ
ಸತತ ಮೂರನೇ ಬಾರಿಗೆ, ಪ್ರಥಮ್ ರಾವ್ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ
ಅಭಿನಂದನೆಗಳು
ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ‘ನಿರಂತರ’ ಚೆಸ್ ತರಬೇತಿ ಕೇಂದ್ರದ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಂಡ್ಯದಲ್ಲಿ ನಡೆದ ಯು – 14 ಬಾಲಕಿಯರ ವಿಭಾಗದಲ್ಲಿ ಪ್ರತಿಸ್ಪರ್ಧಿಗೆ ಪೈಪೋಟಿ ನೀಡುವ ಮೂಲಕ, ವಾಗ್ದೇವಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಆದ್ಯ ಎ.ಎಚ್ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದ ಈ ಸ್ಪರ್ಧೆಯು ಜಾರ್ಖಂಡ್ ನಲ್ಲಿ ನಡೆಯಲಿದೆ.
ಯಾದಗಿರಿಯಲ್ಲಿ ನಡೆದ ಯು-17 ಬಾಲಕರ ವಿಭಾಗದಲ್ಲಿ ವಾಗ್ದೇವಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಥಮ್ ರಾವ್ ಅವರು ಉತ್ತಮ ರೀತಿಯಲ್ಲಿ ಆಡುವ ಮೂಲಕ ಸತತ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಬಾಲಕರ ವಿಭಾಗದ ಚೆಸ್ ಪಂದ್ಯಾವಳಿಯು ತ್ರಿಪುರದಲ್ಲಿ ನಡೆಯಲಿದೆ. ಈ ಮೂಲಕ ತೀರ್ಥಹಳ್ಳಿಯ ವಾಗ್ದೇವಿ ಪ್ರೌಢಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಸಂಸ್ಥೆ ವತಿಯಿಂದ ಅಭಿನಂದನೆಗಳು
ಚೆಸ್ ತರಬೇತಿ ಕೇಂದ್ರಕ್ಕೆ ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತಂದಿರುವ ವಿದ್ಯಾರ್ಥಿಗಳಿಗೆ ಚೆಸ್ ತರಬೇತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ಕೆ ಮತ್ತು ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








