
ದೀಪಾವಳಿ ಲಕ್ಷ್ಮಿ ಪೂಜೆ: ಪಟಾಕಿ ವ್ಯಾಪಾರ ಜೋರು!
– ಎಲ್ಲೆಡೆ ಅಂಗಡಿಗಳಲ್ಲಿ ಅಲಂಕಾರ: ಸಂಭ್ರಮ
– ಚಾಮುಂಡೇಶ್ವರಿ ಪಟಾಕಿ ಸೇಲಲ್ಸ್ ಅಲ್ಲಿ ಜನವೋ ಜನ
– ಮನೆ ಮನೆಯಲ್ಲಿ ಲಕ್ಷ್ಮಿ ಪೂಜೆ ಸಡಗರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅಂಗಡಿ, ಕಚೇರಿ, ವಾಹನ ಶೋ ರೂಮ್ ಸೇರಿ ಎಲ್ಲೆಡೆ ಲಕ್ಷ್ಮಿ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.ತೀರ್ಥಹಳ್ಳಿ ಪಟ್ಟಣ ಸೇರಿ ಹಳ್ಳಿ ಹಳ್ಳಿಗಳಲ್ಲಿ ದೀಪಾವಳಿ ರಂಗು ಶುರುವಾಗಿದೆ.
ಹೂವು, ತೋರಣ, ಲೈಟಿಂಗ್ ಅಲಂಕಾರ ಮಾಡಲಾಯಿತು. ಎಲ್ಲೆಡೆ ಪಟಾಕಿ ಹೊಡೆದು ಸಂಭ್ರಮಿಸಲಾಯಿತು.
ಸರ್ಕಾರಿ ಮೈದಾನದಲ್ಲಿ ಪಟಾಕಿ ಮಾರಾಟ
ತೀರ್ಥಹಳ್ಳಿ ಸರ್ಕಾರಿ ಮೈದಾನದಲ್ಲಿ ಪಟಾಕಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 5ಕ್ಕೂ ಹೆಚ್ಚು ಅಂಗಡಿಗಳು ಇವೆ. ನಾಗರಾಜ್ ಅವರ ಚಾಮುಂಡೇಶ್ವರಿ ಪಟಾಕಿ ಸ್ಟಾಲ್ಸ್ ಸೇರಿದಂತೆ ಅನೇಕ ಅಂಗಡಿಗಳಲ್ಲಿ ಜನ ಪಟಾಕಿ ಖರೀದಿ ಮಾಡುತ್ತಿರುವುದು ಕಂಡು ಬಂತು.
