
ಶಿವಮೊಗ್ಗ ಬಿಜೆಪಿಗೆ ನೂತನ ಸಾರಥಿಗಳು!
– ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಎನ್.ಕೆ.ಜಗದೀಶ್
– ಪ್ರತಿ ತಾಲೂಕಿನ ಬಿಜೆಪಿ ಅಧ್ಯಕ್ಷರು ಯಾರು?
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರಾಗಿ ಈ ಹಿಂದೆ ನಗರ ಅಧ್ಯಕ್ಷರಾಗಿದ್ದ ಎನ್.ಕೆ.ಜಗದೀಶ್ ಆಯ್ಕೆಯಾಗಿದ್ದಾರೆ. ಜಿಲ್ಲಾಧ್ಯಕ್ಷರು, ಸಂಸದ, ಶಾಸಕರು, ಕೋರ್ ಕಮಿಟಿ ಸದಸ್ಯರು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಎನ್.ಕೆ.ಜಗದೀಶ್ ನೂತನ ಅಧ್ಯಕ್ಷರಾಗಿದ್ದಾರೆ. ರಾಜ್ಯಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ತಾಲೂಕು ಅಧ್ಯಕ್ಷರು ಯಾರು ಯಾರು?
ತೀರ್ಥಹಳ್ಳಿ ನವೀನ್ ಹೆದ್ದೂರು, ಹೊಸನಗರ ಕೆ.ವಿ.ಸುಬ್ರಹ್ಮಣ್ಯ, ಸಾಗರ ನಗರ ಕೆ.ಆರ್.ಗಣೇಶ್ ಪ್ರಸಾದ್, ಸಾಗರ ಗ್ರಾಮಾಂತರ ದೇವೇಂದ್ರ ಯಲಕುಂದ್ಲಿ, ಸೊರಬ ಪ್ರಕಾಶ್ ಅಗಸನಹಳ್ಳಿ, ಶಿಕಾರಿಪುರ ಹನುಮಂತಪ್ಪ.ಎಸ್, ಭದ್ರಾವತಿ ಜಿ.ಧರ್ಮಪ್ರಸಾದ್, ಹೊನ್ನೆಹೊಳೆನ್ನೂರು ಮಲ್ಲೇಶಪ್ಪ.ಎಂ, ಶಿವಮೊಗ್ಗ ಗ್ರಾಮಾಂತರ ಎಸ್.ಇ.ಸುರೇಶ್, ಶಿವಮೊಗ್ಗ ನಗರ ಡಿ.ಮೋಹನ್ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
