ಗಾಯತ್ರಿ ಜ್ಯುವೆಲ್ಲರಿಗೆ 29ನೇ ವರ್ಷದ ಸಂಭ್ರಮ!
– ಸಮಾಜ ಸೇವಕರಿಗೆ ಗೌರವದ ಮೂಲಕ ಕಾರ್ಯಕ್ರಮ
– 29 ವರ್ಷಗಳಿಂದ ಉದ್ಯಮದ ಜತೆಗೆ ಸಾಮಾಜಿಕ ಕೆಲಸ
NAMMUR EXPRESS NEWS
ಮಲೆನಾಡಿನ ಪ್ರಸಿದ್ಧ ಜುವೆಲರ್ಸ್ ಗಳಲ್ಲಿ ಒಂದಾದ ಗಾಯತ್ರಿ ಜುವೆಲರ್ಸ್ 29ನೇ ವಾರ್ಷಿಕೋತ್ಸವ ಕಾರ್ಯಕ್ರಮ ತೀರ್ಥಹಳ್ಳಿಯ ಗಾಯತ್ರಿ ಜುವೆಲರ್ಸ್ನಲ್ಲಿ ಅಕ್ಟೋಬರ್ 17ರಂದು ನಡೆಯಿತು ಮಲೆನಾಡಿನ ಸಮಾಜ ಸೇವೆ, ಧಾರ್ಮಿಕ ಸೇವೆ, ಕೃಷಿ, ಸಹಕಾರ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಗೌರವಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಮಾಡಲಾಯಿತು. ಇದೇ ವೇಳೆ ಗಾಯತ್ರಿ ಜುವೆಲರ್ಸ್ ದೀಪಾವಳಿ ವಿಶೇಷ ಕೊಡುಗೆಗಳನ್ನು ಕೂಡ ಅನಾವರಣ ಮಾಡಲಾಯಿತು.
ಗಾಯತ್ರಿ ಜುವೆಲರ್ಸ್ ಉದ್ಯಮದ ಜೊತೆಗೆ ಕಳೆದ 29 ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲೂ ಕೂಡ ಮಲೆನಾಡಿಗೆ ತನ್ನ ಅಪಾರ ಕೊಡುಗೆಯನ್ನು ನೀಡಿದೆ. ಕಾರ್ಯಕ್ರಮದಲ್ಲಿ ಗಾಯತ್ರಿ ಜುವೆಲರ್ಸ್ ಮಾಲೀಕರಾದ ಅನಂತ ಪದ್ಮನಾಭ, ಅವರ ಪತ್ನಿ ಮೋಹಿನಿ ಸೇರಿದಂತೆ ಸ್ಥಳೀಯ ಗಣ್ಯರು, ಸಿಬ್ಬಂದಿ ಗ್ರಾಹಕರು ಉಪಸ್ಥಿತರಿದ್ದರು.
ಸಾಧಕರು, ಸೇವಕರಿಗೆ ಸನ್ಮಾನ
ನಾಗರಾಜ್ ಏಲಕ್ಕಿ ಕೊಪ್ಪ (ಪ್ರಗತಿಪರ ಕೃಷಿಕರು ) ವೀಣಾ ಕಣಿವೆ (ಪ್ರಗತಿಪರ ಕೃಷಿಕರು) ಮಂಜುನಾಥ್ ಚಿಡುವ (ಹಿರಿಯ ಸಹಕಾರಿ ಮುಖಂಡರು ) ಸುಮಿತ್ರ (ಸಮಾಜ ಸೇವಕರು ಹರಿಹರಪುರ) ಲಲಿತ (ಹರಿಹರಪುರ) ಶಶಿಧರ್ ಹಂದೆ, (ರಾಮೇಶ್ವರ ದೇವಸ್ಥಾನದ ನಿರ್ದೇಶಕರು) ಇವರೆಲ್ಲರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ
ಗಾಯತ್ರಿ ಜ್ಯುವೆಲ್ಲರ್ಸ್ 29ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರಿಗೆ ವಿಶೇಷವಾದ ಕೊಡುಗೆಯನ್ನು ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಮುಖ್ಯಸ್ಥರು ವಿನಂತಿಸಿಕೊಂಡಿದ್ದಾರೆ.
1996ರಲ್ಲಿ ಆರಂಭ: 29 ವರ್ಷದ ವಿಶೇಷ ಪಯಣ
ಮಲೆನಾಡಿನ ಜನತೆಯ ಪ್ರೀತಿ, ವಿಶ್ವಾಸ ಪ್ರೋತ್ಸಾಹದಿಂದ 1996ರಲ್ಲಿ ಶ್ರೀ ಕ್ಷೇತ್ರ ಹೊರನಾಡು ಶ್ರೀ ಭೀಮೇಶ್ವರ ಜೋಶಿಯವರ ಅಮೃತ ಹಸ್ತದಿಂದ ಪ್ರಾರಂಭವಾದ ಮಲೆನಾಡಿನ ಮೊಟ್ಟಮೊದಲ ಚಿನ್ನಾಭರಣ ಮಳಿಗೆಗೆ ಇದೀಗ 29 ವರ್ಷದ ಸಂಭ್ರಮ. 1996ರಲ್ಲಿ ಆರಂಭವಾಗಿ ಅಂಬೆಗಾಲು ಇಡುತ್ತಿರುವಾಗ ಗಾಯತ್ರಿಯನ್ನು ನಿಮ್ಮ ಮನೆ ಮಗಳಾಗಿ ಪ್ರೀತಿಯಿಂದ ಇಷ್ಟು ಎತ್ತರಕ್ಕೆ ಏರಲು ಸಹಕರಿಸಿದ ಗ್ರಾಹಕರಿಗೆ ಧನ್ಯವಾದಗಳು.
ಅತ್ಯುತ್ತಮ ಗುಣಮಟ್ಟದ 916 ಹಾಲ್ ಮಾರ್ಕ್ ಮತ್ತು 92. 5 ಸಿಲ್ವರ್
ಪರಿಚಯಿಸಿ ಪ್ರಾಮಾಣಿಕವಾಗಿ ವ್ಯವಹಾರಿಸುತ್ತಿರುವ ಚಿನ್ನಾಭರಣ ಮಳಿಗೆ ಎಂಬ ಕೀರ್ತಿ ನಿಮ್ಮ ಗಾಯತ್ರಿ ಜುವೆಲ್ಲರ್ಸ್ ಗೆ ಸಲ್ಲುತ್ತದೆ.
ಈ ನಂಬಿಕೆಯನ್ನು ಉಳಿಸಿಕೊಂಡು ಬರುತ್ತಿರುವ ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬರುತ್ತಿದೆ. ಹಾಗೆ ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನ, ಬೆಳ್ಳಿ, ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿ ಹಾಗೂ ಅದನ್ನು ಯಶಸ್ವಿಗೊಳಿಸಿದ ಎಲ್ಲಾ ಗ್ರಾಹಕರಿಗೂ ಕೂಡ ಗಾಯತ್ರಿ ಜುವೆಲರ್ಸ್ ಅಭಾರಿಯಾಗಿದೆ.
ನಮಗೆ ಗ್ರಾಹಕರು ಕೊಟ್ಟ ಬಿರುದು ಚಿನ್ನಕ್ಕೆ ಮತ್ತೊಂದು ಹೆಸರೇ ಗಾಯತ್ರಿ, ಗಾಯತ್ರಿ ಎಂದರೆ ಚಿನ್ನ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿರಲು ಕಾರಣ ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆ.
ಇನ್ನು ಮುಂದೆಯೂ ಸಹ ನಿಮ್ಮ ಪ್ರೀತಿ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಗಾಯತ್ರಿ ಜುವೆಲರ್ಸ್ ಎಂದಿಗೂ ಚಿರಋಣಿ ಆಗಿರುತ್ತದೆ.
ಸರ್ವರಿಗೂ ಧನ್ಯವಾದ ಅರ್ಪಿಸುವವರು
ಗಾಯತ್ರಿ ಜುವೆಲರ್ಸ್ ಮಾಲೀಕರು ಹಾಗೂ ಸಿಬ್ಬಂದಿ ವರ್ಗ
ಗಾಂಧಿ ಚೌಕ, ತೀರ್ಥಹಳ್ಳಿ








