ಕೋಣಂದೂರು ನವಜ್ಯೋತಿ ಶಾಲೆಗೆ ಬೆಳ್ಳಿ ಹಬ್ಬ ಸಂಭ್ರಮ!
– ಮಕ್ಕಳಲ್ಲಿ ಹಬ್ಬದ ವಾತಾವರಣ: ಬೆಳಕಿನ ರಂಗಲ್ಲಿ ಅಲಂಕಾರಗೊಂಡ ಶಾಲೆ: ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
– ಗಣ್ಯರ ಸಮಾಗಮ: ಮಕ್ಕಳು, ಶಿಕ್ಷಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ
NAMMUR EXPRESS NEWS
ಕೋಣಂದೂರು: ಕೋಣಂದೂರು ಸಮೀಪದ ನವಜ್ಯೋತಿ ಶಾಲೆಗೆ ಬೆಳ್ಳಿ ಹಬ್ಬ ಸಂಭ್ರಮ!. 25 ವರ್ಷ ತುಂಬಿದ ಸಂಭ್ರಮವನ್ನು ಇತ್ತೀಚಿಗೆ ಸಡಗರದಿಂದ ಆಚರಣೆ ಮಾಡಲಾಯಿತು. ಮಕ್ಕಳಲ್ಲಿ ಹಬ್ಬದ ವಾತಾವರಣ ಕಂಡು ಬಂದರೆ ಬೆಳಕಿನ ರಂಗಲ್ಲಿ ಅಲಂಕಾರಗೊಂಡ ಶಾಲೆ ಎಲ್ಲರ ಗಮನ ಸೆಳೆಯಿತು. ಗಣ್ಯರ ಸಮಾಗಮ, ಮಕ್ಕಳು, ಶಿಕ್ಷಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ. ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ,
ಪ್ರತಿಭೆಗೆ ಜಾತಿ ,ಧರ್ಮ ಬೇಧ ಇಲ್ಲ. ತೀರ್ಥಹಳ್ಳಿಯಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ.ಶಾಲೆ ನಡೆದು ಬಂದ ದಾರಿಯನ್ನು ಹತ್ತಿರದಿಂದ ನೋಡಿದ್ದೇನೆ ’ಎಂದು ಶಾಲೆಯ ಬಗೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನವಜ್ಯೋತಿ ಶಾಲೆಗೆ 25 ವರ್ಷದ ಬೆಳ್ಳಿ ಹಬ್ಬ ತನ್ನ ಪ್ರಖರತೆಯನ್ನು ಹೆಚ್ಚು ಮಾಡುತ್ತಾ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಂತಾಗಿದೆ. ಎಲ್ಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಶಾಲೆಯ ಕಾರ್ಯವೈಖರಿಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಹರ್ಷ
ವ್ಯಕ್ತಪಡಿಸಿದರು. ಮಕ್ಕಳು ಭತ್ತ ತುಂಬುವ ಕಣಜಗಳಾಗದೇ, ಭತ್ತ ಬೆಳೆಯುವ ಗದ್ದೆಗಳಾಗಬೇಕು.ನಾಡಗೀತೆಯನ್ನು ಮಕ್ಕಳ ಮನದಲ್ಲಿ ತುಂಬುವ ಕೆಲಸ ಆಗಬೇಕು. ಸಂವಿಧಾನವದ ಪೀಠಿಕೆಯನ್ನು ಶಾಲೆಯಲ್ಲಿ ಅರ್ಥೈಸುವ ಕಾರ್ಯ ಆಗಬೇಕಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಫಾತಿಮಾ ಮೆಂಡೋಜಾ,ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ಸತೀಶ್,ಉಪಾಧ್ಯಕ್ಷೆ ಸುಜಾತಾ ಚೂಡಾಮಣಿ,ಸದಸ್ಯೆ ಲಕ್ಷ್ಮೀ ನಾಗರಾಜ್, ಶಿಕ್ಷಣ ಇಲಾಖೆಯ ನಾಗರಾಜ್,ಮಮತಾ, ಪೋಷಕರ ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ , ಜೋಸೆಪ್ ಅರುಮಚದತ್ ,ಫಾದರ್ ಬಿನೊಯ್ ಮಾಣಿಕ್ಕತ್ತುಕ್ಕುನ್ನೆಲ್ ,ಮದರ್ ಜ್ಯೋತಿ ಪುಲ್ಲೇಲತ್ ,ಸಿಸ್ಟರ್ ಅಲ್ಪೋನ್ಸಾ ,ಶಿಕ್ಷಕ ರಮೇಶ್ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ರಂಗು!
25 ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಸರ್ವಧರ್ಮ ಸಮನ್ವಯ, ಜಾನಪದ ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಹುಲಿಕುಣಿತ, ಮಹಾಭಾರತ ಪ್ರಸಂಗಗಳು, ಉಳುವ ಯೋಗಿಯ ನೆನಪು, ಮೊಬೈಲ್ ಸೃಷ್ಟಿಸಿದ ಅವಾಂತರಗಳು, ಆಹಾರವನ್ನು ಮುಂದಿನ ಪೀಳಿಗೆಗೂ ಉಳಿಸುವ ಸಂದೇಶಗಳನ್ನು ಸಾರುವ ವಿವಿಧ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿದವು. ಮಕ್ಕಳ ಪ್ರತಿಭೆಗೆ ಪೋಷಕರು ತಲೆದೂಗಿದರು.