![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ತೀರ್ಥಹಳ್ಳಿ ಟಿ.ಎಸ್.ಟಿ ಹೈಪರ್ ಮಾರ್ಟ್ ಲಕ್ಕಿ ಡ್ರಾ
– ವಿಜೇತರ ಪಟ್ಟಿ ಬಿಡುಗಡೆ: ಸಂತೃಪ್ತರಾದ ಗ್ರಾಹಕರು
– ಪ್ರವೀಣ್ ತೀರ್ಥಹಳ್ಳಿಗೆ ಮೊದಲ ಬಹುಮಾನ ವಾಷಿಂಗ್ ಮಷಿನ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಹೈಪರ್ ಮಾರ್ಟ್ ಟಿಎಸ್ ಟಿ ಹೈಪರ್ ಮಾರ್ಟ್ ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಲಕ್ಕಿ ಡ್ರಾ ಆಯೋಜನೆ ಮಾಡಿದ್ದು, ಗ್ರಾಹಕರಿಗೆ ಕನಿಷ್ಠ ರೂ 1999ರ ಖರೀದಿಗೆ ಒಂದು ಲಕ್ಕಿ ಕೂಪನ್ ಕೊಡಲಾಗಿದೆ. ಈಗ ಲಕ್ಕಿ ಡ್ರಾ ವಿಜೇತರ ಪಟ್ಟಿ ಬಿಡುಗಡೆಗೊಳಿಸಿದ್ದು ಮೊದಲ ಬಹುಮಾನ ವಾಷಿಂಗ್ ಮಷಿನ್ ಅನ್ನು ಕೂಪನ್ ಸಂಖ್ಯೆ 1078 ಪ್ರವೀಣ್ ತೀರ್ಥಹಳ್ಳಿ ಪಡೆದುಕೊಂಡಿದ್ದಾರೆ. ಎರಡನೇ ಬಹುಮಾನ 32 ಇಂಚಿನ ಎಲ್ಇಡಿ ಟಿವಿಯನ್ನು ಕೂಪನ್ ಸಂಖ್ಯೆ 233 ಸತೀಶ್ ಜಿಗಳಗೋಡು ಪಡೆದುಕೊಂಡಿರುತ್ತಾರೆ. ಮೂರನೇ ಬಹುಮಾನ ಏರ್ ಕೂಲರ್ ಕೂಪನ್ ಸಂಖ್ಯೆ 804 ಮಧುರಾಜ್ ತೀರ್ಥಹಳ್ಳಿ ಪಡೆದುಕೊಂಡಿರುತ್ತಾರೆ. ನಾಲ್ಕನೇ ಬಹುಮಾನ 2 ಬರ್ನರ್ ಗ್ಯಾಸ್ ಸ್ಟವ್ ಕುಪನ್ ಸಂಖ್ಯೆ 520 ಸಂತೋಷ್ ಶೆಟ್ಟಿ ಹೊರಬೈಲು ಪಡೆದುಕೊಂಡಿರುತ್ತಾರೆ.
ಐದನೇ ಬಹುಮಾನ ಕಿಚನ್ ಸೆಟ್ ಅನ್ನು ಕೂಪನ್ ಸಂಖ್ಯೆ 2034 ನೀಲಕಂಠ ಜಿಆರ್ ತೀರ್ಥಹಳ್ಳಿ ಪಡೆದುಕೊಂಡಿರುತ್ತಾರೆ. ಐದನೇ ಬಹುಮಾನವನ್ನು ಇನ್ನೊಬ್ಬರು ಪಡೆದುಕೊಂಡಿದ್ದು ಕೂಪನ್ ಸಂಖ್ಯೆ 892 ರ ಸೂರಜ್ ಕುಶಾವತಿ ಪಡೆದುಕೊಂಡಿರುತ್ತಾರೆ. 6ನೇ ಬಹುಮಾನ ಹಾಟ್ ಬಾಕ್ಸ್ ಸೆಟ್ ಕೂಪನ್ ಸಂಖ್ಯೆ 159 ಖಲೀಲ್ ಕೋಣಂದೂರು ಪಡೆದುಕೊಂಡಿದ್ದಾರೆ. ಹಾಗೂ 6ನೇ ಬಹುಮಾನ ಹಾಟ್ ಬಾಕ್ಸ್ ಸೆಟ್ ಇನ್ನೊಬ್ಬರೂ ಕೂಡ ಪಡೆದುಕೊಂಡಿದ್ದು ಕೂಪನ್ ಸಂಖ್ಯೆ 040 ಅಮೃತ ಎಟಿ ಬೆಂಗಳೂರು ಪಡೆದುಕೊಂಡಿರುತ್ತಾರೆ.
ಸಂಸ್ಥೆಯ ಒಂದು ವರ್ಷ ಪೂರೈಸಿ ಗ್ರಾಹಕರ ಮೆಚ್ಚುಗೆ
ಸಂಸ್ಥೆಯ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆಯವರು ಮಾತನಾಡಿ ಟಿ ಎಸ್ ಟಿ ಹೈಪರ್ ಒಂದು ವರ್ಷದಿಂದ ನಡೆದುಕೊಂಡು ಬಂದಿದೆ. ಬಹುಶಃ ಗ್ರಾಹಕರು ಇಟ್ಟಿರುವಂತಹ ನಂಬಿಕೆ, ವಿಶ್ವಾಸದಿಂದ ಒಂದು ವರ್ಷ ಪೂರೈಸಿದೆ. ದಿನ ದಿನ ನಮ್ಮ ವ್ಯಾಪಾರ ಹೆಚ್ಚಾಗುತ್ತಿದೆ. ನಮ್ಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿ ಬರುತ್ತಿದೆ. ಈ ಸಂಸ್ಥೆಯಿಂದ ಏನಾದರೂ ಕುಂದು ಕೊರತೆಗಳಿದ್ದರೆ ಅಥವಾ ಸಲಹೆ ಸೂಚನೆಗಳಿದ್ದರೆ ಗ್ರಾಹಕರು ಯಾವತ್ತೂ ಕೂಡ ಹೇಳಬಹುದು. ನಿಮ್ಮ ಸಲಹೆ ಸೂಚನೆಗಳನ್ನು ಪ್ರೀತಿಯಿಂದ ನಾವು ಖಂಡಿತವಾಗಿಯೂ ಸ್ವೀಕರಿಸುತ್ತೇವೆ ಎಂದು ಹೇಳಿದರು. ತೀರ್ಥಹಳ್ಳಿಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಸಂಸ್ಥೆಯ ನಿರ್ದೇಶಕರಾದ ಪುಟ್ಟಪ್ಪ, ಲಕ್ಷ್ಮಣ್, ಸಂತೋಷ್, ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನ ವಿತರಣೆ
ಶುಕ್ರವಾರ ಸಂಜೆ ಟಿ ಸ್ ಟಿ ಹೈಪರ್ ಮಾಟಿನ ಕಚೇರಿಯಲ್ಲಿ ಕಚೇರಿಯ ಮ್ಯಾನೇಜರ್ ಹಾಗೂ ಸಿಬ್ಬಂದಿ ವರ್ಗದವರು ಲಕ್ಕಿ ಡ್ರಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹೈಪರ್ ಮಾರ್ಟ್ ಮ್ಯಾನೇಜರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)