ಆಂಟಿಗೆ ಪಿಂಟಿಗೆ ಮಾಡಿ ಗ್ರಾಮದ ಅಭಿವೃದ್ಧಿಗೆ ಹಣ!
– ಕಲ್ಲುಕೊಡಿಗೆ ಶ್ರೀ ಧರ್ಮಶ್ರೀ ಯುವಕ ಸಂಘದ ಕೆಲಸ ಮಾದರಿ
– ಅಂಟಿಗೆ ಪಿಂಟಿಗೆ ಕಲಾವಿದರಿಗೆ ಸನ್ಮಾನದ ಗೌರವ
NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಆಂಟಿಗೆ ಪಿಂಟಿಗೆ ಮಲೆನಾಡಿನ ಪ್ರಸಿದ್ಧ ಕಲೆ. ಆಂಟಿಗೆ ಪೆಂಟಿಗೆಯನ್ನು ದೀಪಾವಳಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಜ್ಯೋತಿಯನ್ನು ಬೆಳಗಿಸಿ ಆಚರಣೆ ಮಾಡಲಾಗುತ್ತದೆ. ಇಂತಹ ಆಚರಣೆ ಇದೀಗ ಸಮಾಜದ ಅಭಿವೃದ್ಧಿ ಕೆಲಸಕ್ಕೂ ವೇದಿಕೆಯಾಗಿದೆ.
ಹೌದು. ತೀರ್ಥಹಳ್ಳಿ ತಾಲೂಕು ಹಾಗೂ ಕೊಪ್ಪ ತಾಲೂಕಿನ ಗಡಿ ಭಾಗವಾದ ಗಡಿಕಲ್ ಸಮೀಪದ ಕಲ್ಲುಕೊಡಿಗೆ -ಮುಸ್ಸಿನ ಕೊಪ್ಪದ
ಶ್ರೀ ಧರ್ಮಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಸುಧಾಕರ್ ಕುಪ್ಪಳ್ಳಿ ಇವರ ನೇತೃತ್ವದಲ್ಲಿ ಎಲ್ಲಾ ಸದಸ್ಯರು, ಗ್ರಾಮಸ್ತರ ಸಹಯೋಗದಲ್ಲಿ ನಡೆಸಲಾಯಿತು.
ಬೆಕ್ಕನೂರು ಗ್ರಾಮದ ಮುಸ್ಸಿನಕೊಪ್ಪದಲ್ಲಿ ನಿರ್ಮಾಣ ಆಗಿರುವ ನವೀಕೃತ ಸಮುದಾಯ ಭವನದ ಅಭಿವೃದ್ಧಿ ಕೆಲಸಗಳಿಗಾಗಿ ಸಂಘದ ಸದಸ್ಯರು ಮನೆ ಮನೆಗಳಿಗೆ ತೆರಳಿ ಸುಮಾರು ಐದು ದಿನಗಳ ಕಾಲ ಅಕ್ಕಿ, ತೆಂಗಿನ ಕಾಯಿ, ಅಡಿಕೆ ಸೇರಿ ಸುಮಾರು 90 ಸಾವಿರ ಹಣವನ್ನು ಒಟ್ಟುಗೂಡಿಸುವ ಮೂಲಕ ಮಾದರಿಯಾದರು.
ಸಮಾಜದ ಅಭಿವೃದ್ಧಿಯ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಈ ಯುವಕ ಸಂಘದ ಕೆಲಸ ಮಾದರಿಯಾಯಿತು. ಐದು ದಿನಗಳ ಕಾಲ ಪ್ರತಿದಿನ ಮನೆಗೆ ಜ್ಯೋತಿಯನ್ನು ಕೊಟ್ಟು ಜನರಿಂದ ಹಣವನ್ನು ಸಂಗ್ರಹ ಮಾಡಿ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಯಿತು. ಹಾಗೆ ಇತ್ತೀಚಿಗೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಕಲ್ಲು ಕೊಡಿಗೆ ವೆಂಕಟೇಶ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜ್ಯೋತಿಗೆ ವಿಶೇಷವಾಗಿ ಪೂಜೆಯನ್ನು ಮಾಡಲಾಯಿತು. ಸ್ಥಳೀಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಹಾಡುಗಾರರನ್ನು ಈ ಮೂಲಕ ಸನ್ಮಾನಿಸಲಾಯಿತು.
ಧರ್ಮಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಸುಧಾಕರ್ ಕುಪ್ಪಳ್ಳಿ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಾಡುಗಾರರು, ಜನಪದ ತಜ್ಞರು, ಜನಪದ ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು. ಈ ಮೂಲಕ ಮಲೆನಾಡಿನ ಆಂಟಿಗೆ ಪಿಂಟಿಗೆ ವಿಶೇಷವಾದ ಗೌರವವನ್ನು ನೀಡಲಾಯಿತು.
ಹಾಡುಗಾರರಾದ ನಾಗರಾಜ್ ತಟ್ಟಾಪುರ, ಮುಕುಂದ ತಟ್ಟಾಪುರ, ವಾಸುದೇವ್ ತಟ್ಟಾಪುರ, ವಿಜೇತ ಬೆಕ್ಕನೂರು, ಸುಮಂತ ತಟ್ಟಾಪುರ, ಪ್ರದೀಪ್ ಕುಪ್ಪಳಿ, ಜ್ಯೋತಿ ಹಿಡಿದ ವೆಂಕಟೇಶ್ ಕಲ್ಲುಕೊಡಿಗೆ ಇವರನ್ನು ಗೌರವಿಸಲಾಯಿತು. ಧರ್ಮ ಶ್ರೀ ಯುವಕ ಸಂಘದ ಪದಾಧಿಕಾರಿಗಳು ಮತ್ತು ಊರಿನ ಗ್ರಾಮಸ್ಥರು ಇದ್ದರು. ಅಂಟಿಗೆ ಪಿಂಟಿಗೆಯಲ್ಲಿ ಸುರೇಂದ್ರ ಟಿಆರ್, ಮಂಜಪ್ಪ, ವಿಜೇಂದ್ರ,, ಅರುಣ ಕುಪ್ಪಳ್ಳಿ,ಸುರೇಶ ಗಡಿಕಲ್, ಕೃಷ್ಣಮೂರ್ತಿ, ಮಂಜು ಮತ್ತು ಮಿಥುನ, ನವೀನ್ ತಟ್ಟಾಪುರ, ಅಮೋಘ ಕಲ್ಲುಕೊಡಿಗೆ, ಸಮೃದ್ ಟಿ ಎಸ್ ಪ್ರಜ್ವಲ್, ಸುಶ್ವಿತ್, ಮನೋಜ್ ಇದ್ದರು.
ಸಂಘದ ಗೌರವ ಸಲಹೆಗಾರರು ಟಿ ಆರ್ ಸುರೇಂದ್ರ, ಉಪಾಧ್ಯಕ್ಷರಾದ ನವನೀತ್ ಸಿಡಿಯ, ಕಾರ್ಯದರ್ಶಿ ಶಶಿಕಾಂತ್ ಕುಪ್ಪಳಿ, ಉಮೇಶ್ ಕರ್ಕಿಬೈಲ್, ಸುಧನ್ವ ಗಡಿಕಲ್, ಗಾಯತ್ರಿ ಗಡಿಕಲ್ ಸೇರಿ ಅನೇಕರು ಹಾಜರಿದ್ದರು. ಈ ಧಾರ್ಮಿಕ ಹಾಗೂ ಸಮಾಜ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಸರ್ವರಿಗೂ ಸಂಘದ ಪದಾಧಿಕಾರಿಗಳು ಧನ್ಯವಾದ ಅರ್ಪಣೆ ಮಾಡಿದ್ದಾರೆ.








