ರಾಷ್ಟ್ರ ಮಟ್ಟದಲ್ಲಿ ಸಂಹಿತ ಉಡುಪ ಸಾಧನೆ
– ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ
– ತೀರ್ಥಹಳ್ಳಿ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಅಸ್ಸಾಂ ನ ದಿಮಾಜಿಯಲ್ಲಿ ನಡೆದ 14 ವರ್ಷದೊಳಗಿನ ವಿಭಾಗದ ಯೋಗ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸೋಲೊ ಹಾಗೂ ಆರ್ಟಿಸ್ಟಿಕ್ ಗ್ರೂಪ್ ವಿಭಾಗದಲ್ಲಿ ಕುರುವಳ್ಳಿಯ ಶಂಕರ್ ವುಡ್ ಇಂಡಸ್ಟ್ರೀಸ್ ಮಾಲೀಕರಾದ ಶಿವರಾಮ ಉಡುಪ ಅವರ ಕುಟುಂಬದ ನಟೇಶ್ ಉಡುಪ ಮತ್ತು ಶ್ರೀಪದ ದಂಪತಿಗಳ ಪುತ್ರಿ ಹಾಗೂ ವಾಗ್ದೇವಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಂಹಿತ ಉಡುಪ ಅವರು ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.








