ಕೊರೆಕಲ್ಲು ಶ್ರೀಚಾಮುಂಡೇಶ್ವರಿ ದೇವಸ್ಥಾನಲ್ಲಿ ನವರಾತ್ರಿ ಉತ್ಸವ
* ಸೆ.22 ರಿಂದ ಅ.02 ರವರೆಗೆ ಅದ್ದೂರಿ ದಸರಾ,ವಿಶೇಷ ಪೂಜೆ
* ಸೆ.23 ರಿಂದ ಅ.01 ರವರೆಗೆ ಪವಿತ್ರ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ ಹಾಗೂ ಭಗವದ್ಗೀತಾ ಜ್ಞಾನ ಯಜ್ಞ
NAMMMUR EXPRESS NEWS
ಶೃಂಗೇರಿ: ತಾಲೂಕಿನ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ,ಕೊರೆಕಲ್ಲು ಇಲ್ಲಿ ಸೆ.22 ರಿಂದ ಅ.02 ವರೆಗೆ ನಡೆಯಲಿರುವ ಅದ್ದೂರಿ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನವರಾತ್ರಿ ಅಂಗವಾಗಿ ಈ ಬಾರಿ ವಿಶೇಶವಾಗಿ ಪರಮ ಮಂಗಳಕರವಾದ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ ಹಾಗೂ ಶ್ರೀಮದ್ ಭಗವದ್ಗೀತಾ ಜ್ಞಾನ ಯಜ್ಞಾ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಸೆ.23 ರಿಂದ ಅ.01 ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಭಜನೆ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಉಳುವೆ ಗಿರೀಶ್ ಭಟ್ ಅವರಿಂದ ಉಪನ್ಯಾಸ ಕಾರ್ಯಕ್ರಮ ಪ್ರತಿದಿನ ನೆರವೇರಲಿದೆ. ಸೆ.26 ರಂದು ಶ್ರೀಮದ್ ಭಾಗವತ ಪ್ರವಚನ ಸಪ್ತಾಹದಲ್ಲಿ ಶ್ರೀಕೃಷ್ಣಾವತಾರ ಹಿನ್ನೆಲೆ ಕುರಿತಂತೆ ಶ್ರೀಶಾಂಕರ ತತ್ವ ಪ್ರಸಾರ ಅಭಿಯಾನ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠದ ರಾಜ್ಯ ಸಂಚಾಲಕರಾದ ಶ್ರೀ ತೇಜಶಂಕರ ಸೋಮಯಾಜಿಯವರಿಂದ ಪ್ರವಚನ ನಡೆಯಲಿದೆ.
ದೇವಸ್ಥಾನದಲ್ಲಿ ನಡೆಯುವ ಈ ಎಲ್ಲಾ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.








