ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ
– ತೀರ್ಥಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಭರವಸೆ
– ತಾಲೂಕಿನ ಹಲವು ಸಮಸ್ಯೆಗಳ ಚರ್ಚೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಎಲೆಚುಕ್ಕೆ ರೋಗ ಬಂದಿದ್ದರಿಂದ ರೈತರಿಗೆ ಸಮಸ್ಯೆ ಆಗಿದೆ. ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕಿ ರೋಗಕ್ಕೆ ವಿಜ್ಞಾನಿಗಳನ್ನು ಕಳುಹಿಸಿ ಸಂಶೋಧನೆ ಮಾಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ತೀರ್ಥಹಳ್ಳಿ ತಾಲೂಕುಗಳ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ತೀರ್ಥಹಳ್ಳಿಯ 5 ಗ್ರಾಮಗಳಲ್ಲಿ ಫ್ಲೋರೇಡ್ ಮತ್ತು ಹೊಸನಗರದಲ್ಲಿ ಫ್ಲೋರೈಡ್ ಅಂಶ ಇದೆ ಎಂದು ತಿಳಿದು ಬಂದಿರುವುದರಿಂದ ಪ್ರತಿಯೊಂದು ಗ್ರಾಮಗಳಲ್ಲಿ ಪರೀಕ್ಷೆ ನಡೆಸಿ ಎಂದು ತಿಳಿಸಿದರು.
ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ನೀರಿನ ಟ್ಯಾಂಕ್ ಹಾಕಲು ಬಿಡುವುದಿಲ್ಲ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು ಎಂದಾಗ ನನ್ನ ಪ್ರಕಾರ ಎಲ್ಲದಕ್ಕೂ ಪರ್ಮಿಷನ್ ತಗೊಂಡೆ ಮಾಡಲಾಗುವುದಿಲ್ಲ ಕೆಲವು ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.
ಸಭೆಯಲ್ಲಿ ವಿವಾದಿತ ಕುಡಿಯುವ ನೀರು ಯೋಜನೆ ಪ್ರಸ್ತಾಪ!
ಜೆಜೆಎಮ್ ವಿಷಯದಲ್ಲಿ ಸ್ವಲ್ಪ ಬೇಜವಾಬ್ದಾರಿತನ ಕಾಣಿಸುತ್ತಿದೆ. ಜೆಜೆಎಂ ಸಮಸ್ಯೆ ನನಗೆ ಗೊತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ರಿಪೋರ್ಟ್ ಕಳುಹಿಸಿಕೊಡಿ ಎಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡದಿದ್ದರೆ ತೊಂದರೆ ಆಗುತ್ತದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಬರುವ ಮಾರ್ಚ್ ನಲ್ಲಿ ಕೆಲಸ ಶುರುಮಾಡದೇ ಹೋದರೆ ಈ ಸ್ಟೀಮ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ಕುಡಿಯುವ ನೀರಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಎಲೆ ಚುಕ್ಕಿ ರೋಗಕ್ಕೆ ಪರಿಹಾರ ಕೂಡ ನೀಡಬೇಕು ಎಂದು ಮನವಿ ಮಾಡಿದರು. ಹೊಸನಗರದ ರಾಮಚಂದ್ರಪುರದಲ್ಲಿ ಸರ್ಕಾರ ವತಿಯಿಂದ ಗೋಶಾಲೆ ನಿರ್ಮಾಣವಾಗಿದೆ ಅದರ ನಿರ್ವಹಣೆಗೆ ಸುಮಾರು 60 ಲಕ್ಷ ರೂಪಾಯಿ ಬೇಕೆಂದು ಪಶು ಸಂಗೋಪನ ಇಲಾಖೆಯ ಅಧಿಕಾರಿಗಳು ಅಧಿಕಾರಿಗಳು ಉಸ್ತುವಾರಿ ಮಂತ್ರಿಗಳಿಗೆ ತಿಳಿಸಿದರು. ಇದಕ್ಕೆ ಆದಷ್ಟು ಬೇಗ ಹಣ ಬಿಡುಗಡೆ ಮಾಡಿಸುವುದಾಗಿ ಸಚಿವರು ತಿಳಿಸಿದರು.
ಕಾಟಾಚಾರಕ್ಕೆ ಕನಕ ದಾಸ ಜಯಂತಿ!
ಪಟ್ಟಣ ಪಂಚಾಯತಿ ಸದಸ್ಯರಾದ ಗಣಪತಿಯವರು ಗುರುವಾರ ದಿವಸ ಕನಕದಾಸ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಮಂತ್ರಿಗಳ ಮುಂದೆ ತಿಳಿಸಿದಾಗ ಇಲ್ಲಿ ಜಾತಿಯಾಧರಿತ ಆಚರಣೆಗಿಂತ ಎಲ್ಲರೂ ಒಟ್ಟು ಸೇರಿ ಮಹಾತ್ಮರ ಜಯಂತಿಯನ್ನು ಮಾಡಬೇಕಿದೆ. ನಾನು ಈ ಹಿಂದೆ ಮುಖ್ಯಮಂತ್ರಿಗಳಿಗೆ ಯಾವುದೇ ಜಯಂತಿಗಳಿಗೆ ದಯಮಾಡಿ ರಜೆಯನ್ನು ಕೊಡಬೇಡಿ. ಹೇಳಿದ್ದೆ. ಇನ್ನು ಮುಂದೆಯಾದರೂ ಎಲ್ಲರನ್ನು ಒಗ್ಗೂಡಿಸಿ ಆಚರಣೆ ಮಾಡಿ ಎಂದು ತಿಳಿಸಿದರು.
ತೀರ್ಥಹಳ್ಳಿಯಲ್ಲಿ ಅದ್ದೂರಿ ಸ್ವಾಗತ..!
ತೀರ್ಥಹಳ್ಳಿ ತಾಲ್ಲೂಕಿನ ಬರಗಾಲ ಮತ್ತು ಪ್ರಗತೀಪರಿಶೀಲನಾ ಸಭೆಗೆ ಆಗಮಿಸಿದ ಸಚಿವ ಮಧು ಬಂಗಾರಪ್ಪ ಅವರನ್ನು ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರು ದತ್ತಣ್ಣ ಅವರು ಹಾರ ಹಾಕಿ ಸ್ವಾಗತಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಡಾ.ಸುಂದರೇಶ್, ಕುರುವಳ್ಳಿ ನಾಗರಾಜ್, ಶ್ರೀಕಾಂತ್ ಬೆಟ್ಟಮಕ್ಕಿ ಇತರರು ಇದ್ದರು.







