ನಾಯಿಮರಿ-ಬೆಕ್ಕಿನ ಮರಿ ರಸ್ತೆ ಮೇಲೆ: ಮರೆಯಾದ ಮಾನವೀಯತೆ!
– ರಸ್ತೆಯಲ್ಲಿ ಬಿಡುವ ಬದಲು ನಿಮ್ಮ ಸ್ನೇಹಿತರ ಮನೆಗೆ ಕೊಡಿ ಪ್ಲೀಸ್
– ನಮ್ಮಂತೆ ಜೀವ ಇರುವ ಮರಿಗಳು ಅಪಘಾತಕ್ಕೆ ಬಲಿ
ಕಾಪಾಡಿ ಪ್ಲೀಸ್ ಅಭಿಯಾನ!
NAMMUR EXPRESS NEWS
ನಾಯಿ-ಬೆಕ್ಕುಗಳನ್ನು ಕಾಟಾಚಾರಕ್ಕೆ ಸಾಕಿ ಬಳಿಕ ಅವುಗಳ ಹಾಲು ಕುಡಿಯುವ ಚಿಕ್ಕ ಮರಿಗಳನ್ನು ರಸ್ತೆ, ಹಾಳು ಕಟ್ಟಡ, ನಿರ್ಜನ ಪ್ರದೇಶದಲ್ಲಿ ತಂದು ಬಿಟ್ಟು ಹೋಗುವ ನೀಚರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಯಾವುದೇ ರಸ್ತೆಗೆ ಹೋದರೂ ಅಲ್ಲಿ ನಾಲ್ಕಾರು ನಿರ್ಗತಿಕ ನಾಯಿ-ಬೆಕ್ಕಿನ ಮರಿಗಳ ದುರವಸ್ಥೆ ಕಣ್ಣಿಗೆ ಬೀಳುತ್ತದೆ. ಪಾರ್ಕ್, ನದಿ ತೀರ, ರಸ್ತೆ ಸೇರಿ ಎಲ್ಲಾ ಕಡೆ ಆಗಷ್ಟೇ ಹುಟ್ಟಿದ ಮರಿಗಳನ್ನು, ಹಾಲು ಕುಡಿವ ಮರಿಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇಂತವರ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಅನೇಕ ಕಡೆ ಇಂತಹ ಘಟನೆ ಬೆಳಕಿಗೆ ಬರುತ್ತಿದೆ. ಅನೇಕ ಭಾಗದಲ್ಲಿ ಬೋರ್ಡ್ ನೆಟ್ಟು ‘ನೀವು ಇಲ್ಲಿ ನಾಯಿ ಮರಿಗಳನ್ನು ಬಿಟ್ಟು ಹೋಗುವ ಬದಲು ನಿಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿ ನಾವು ಅವರನ್ನೂ ಸಾಕುತ್ತೇವೆ’ ಎಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶು ಇಲಾಖೆ ಕೂಡ ಯಾವ ಮನೆಯಲ್ಲಿ ನಾಯಿ, ಬೆಕ್ಕುಗಳಿಗೆ ಮರಿ ಬೇಡವೋ ಅಂತ ಮನೆಗಳಿಗೆ ಗರ್ಭ ನಿರೋಧಕ ಮಾತ್ರೆ ನೀಡುವ ಬಗ್ಗೆ ಗಮನಿಸಬೇಕಿದೆ.








