ಮತ್ತೊಮ್ಮೆ ಮೇಲುಗೈ ಸಾಧಿಸಿದ ಸಹ್ಯಾದ್ರಿ ಪಿಯು ಕಾಲೇಜು
– ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಶೇ.100 ಫಲಿತಾಂಶ
– ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶ ಪಡೆದ ವಿದ್ಯಾರ್ಥಿಗಳು
NAMMUR EXPRESS NEWS
2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಶೇಕಡಾ 100% ಫಲಿತಾಂಶ ಪಡೆದಿರುತ್ತದೆ. ಪರೀಕ್ಷೆ ಬರೆದ 96 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು, ಅತ್ಯುನ್ನತ ದರ್ಜೆ, ಹಾಗೂ 55 ವಿದ್ಯಾರ್ಥಿಗಳು ಪ್ರಥಮ ದರ್ಜೆಯನ್ನು ಪಡೆಯುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ಪಡೆದಿರುತ್ತದೆ. ಪ್ರೀತಂ ಎಮ್.ಎಸ್. ಶೇ. 97% ರಷ್ಟು ಅಂಕವನ್ನು ಪಡೆಯುವುದರ ಮೂಲಕ ಕಾಲೇಜ್ ಟಾಪರ್ ಆಗಿ ಹೊರಹೊಮ್ಮಿರುತ್ತಾನೆ. ಮತ್ತು ಕು। ಆಂಜನಾ ಜಿ.ಎನ್. ಶೇ 96.50% ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಟಾಪರ್ ಆಗಿ ಶಿಕ್ಷಣ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಉತ್ತಮ ಫಲಿತಾಂಶದೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುವ ಈ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.








