ಮೂವರು ಗೋ ಕಳ್ಳರು ಅರೆಸ್ಟ್!
– ಕಟ್ಟೆಹಕ್ಕಲಲ್ಲಿ ಕಾರಲ್ಲಿ ಕಳ್ಳತನ ಪ್ರಕರಣದಲ್ಲಿ ಮೂವರ ಬಂಧನ
– ಶಿವಮೊಗ್ಗದಿಂದ ಕಾರಲ್ಲಿ ಬಂದು ತೀರ್ಥಹಳ್ಳಿಯಲ್ಲಿ ಕಳ್ಳತನ
– ಕಾರು ವಶ: ತೀರ್ಥಹಳ್ಳಿ ಪೋಲಿಸರ ಕೆಲಸಕ್ಕೆ ಜನರ ಮೆಚ್ಚುಗೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆ ಹಕ್ಕಲು ಗ್ರಾಮದಲ್ಲಿ ದನ ಕಳ್ಳತನ ಪ್ರಕರಣ ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದ ಸರ್ಕಲ್ ಅಲ್ಲಿ ಜ. 25ರ ಬೆಳಗಿನ ಜಾವ 03.00 ಗಂಟೆಯ ಸಮಯದಲ್ಲಿ ದೇವರಾಜ ಎಂ.ಎಸ್ ಬಿನ್ ಎಂ.ವಿ ಶ್ರೀನಿವಾಸ ಗೌಡ ವಾಸ ತುಂಬ್ರಿಮನೆ ಗ್ರಾಮ ರವರು ತಮಗೆ ಸೇರಿದ ಸುಮಾರು 12,000/- ರೂ ಮೌಲ್ಯದ ಹಸುವನ್ನು ಕಾರಿನಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ತೀರ್ಥಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಅರವಿಂದ ಕಲಗುಂಜಿ, ಡಿವೈಎಸ್ ಪಿ ತೀರ್ಥಹಳ್ಳಿ ಉಪವಿಭಾಗ ರವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಿ ಅದರಂತೆ ತೀರ್ಥಹಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಲಿಂಗೇಗೌಡ, ಕುಮಾರ್, ವಿಜಯ್, ಸಿಪಿಸಿ ವೀರೇಂದ್ರ, ಪ್ರಸಾದ್, ದೀಪಕ್, ಮಂಜುನಾಥ ಹಂಪಿಹೊಳಿ, ಮಂಜುನಾಥ ದೋಣಿಕಲ್, ಮೋಹನ, ವಿಜಯ ಕುಮಾರ್ ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿ, ಕಳ್ಳತನ ನಡೆಸಿದ ಆರೋಪಿತರಾದ ಮುಬಾರಕ್ ತಂದೆ ಖಾಜೀಮ್ ಸಾಬ್, 25 ವರ್ಷ, ಮುಸ್ಲಿಂ ಜನಾಂಗ, ವಾಸ 7 ನೇ ಕ್ರಾಸ್ ಆರ್.ಎಂ.ಎಲ್. ನಗರ, ಶಿವಮೊಗ್ಗ, ಅಹ್ಮದ್ ಬೇಗ್ ತಂದೆ ಚಾಂದ್ ಪಾಷ, 25 ವರ್ಷ, ಮುಸ್ಲಿಂ ಜನಾಂಗ, ಫರ್ನಿಚರ್ ಕೆಲಸ, ವಾಸ ಟಿಪ್ಪುನಗರ 02 ನೇ ಕ್ರಾಸ್ ಎಡಭಾಗ, ಶಿವಮೊಗ್ಗ, 3) ಮುಕ್ರಮ ವುಲ್ಲಾ ತಂದೆ ಹಬೀಬುಲ್ಲಾ, 21 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ವಾಸ ಟಿಪ್ಪುನಗರ 2 ನೇ ಕ್ರಾಸ್ ಎಡಭಾಗ, ಶಿವಮೊಗ್ಗ ಈ ಆರೋಪಿಗಳನ್ನು 06-02-2026 ರಂದು ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಕೃತ್ಯಕ್ಕೆ ಬಳಸಿದ 2,00,000/- ರೂ ಮೌಲ್ಯದ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಆಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಧೀಕ್ಷಕರು ಅಭಿನಂದಿಸಿದ್ದಾರೆ.








