ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಜ್ಜು!
– ಫೆ.17ರಿಂದ 25ರವರೆಗೆ ಮಾರಿಕಾಂಬಾ ಅಮ್ಮನವರ ಜಾತ್ರೆ
– 2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸರ್ವರಿಗೂ ಸ್ವಾಗತ
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಜಾತ್ರೆ ಹಾಗೂ ಕಾರ್ಯಕ್ರಮಗಳಲ್ಲಿ ಒಂದಾದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಶುರುವಾಗಿದೆ.
ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೋತ್ಸವ ಇದೇ ಫೆಬ್ರವರಿ 17ರಿಂದ 25ರವರೆಗೆ 9 ದಿನಗಳ ಕಾಲ ವೈಭವದಿಂದ ಜರುಗಲಿದೆ.
ದೇವಸ್ಥಾನ ಆಡಳಿತ ಸಮಿತಿ ಜಾತ್ರೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ಆರಂಭಿಸಿದೆ. ಅಲ್ಲದೆ ಸಮಸ್ತ ಭಕ್ತವೃಂದವನ್ನು ಸ್ವಾಗತಿಸಿದೆ.
ಯಾವತ್ತು ಏನೇನು?
ಫೆಬ್ರವರಿ 17ರಂದು ಜಾತ್ರೆ ಸಾರಲಾಗುತ್ತಿದೆ. 9 ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಅನ್ನಸಂತರ್ಪಣೆ ಜರುಗುವುದು. ಶ್ರೀ ಅಮ್ಮನವರ ಜಾತ್ರಾ ಉತ್ಸವಕ್ಕೆ ಹೊರೆಕಾಣಿಕೆ ಸ್ವೀಕರಿಸಲಾಗುತ್ತದೆ.
ಫೆ.17ರಂದು ಮಹಾಪೂಜೆ, ಮಹಾಮಂಗಳಾರತಿ, ದೇವಿ ದರ್ಶನ, ಜಾತ್ರೆ ಸಾರುವುದು, ಫೆ.18ರಂದು ಸಂಜೆ 6ರಿಂದ ಸುಮುಖ ಸಂಗೀತ ನೃತ್ಯ ಶಾಲೆ ಮತ್ತು ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ಸಂಗಮ ನಡೆಯಲಿದೆ.
ಫೆ.19ರಂದು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತಪಡಿಸುವ ಕಾಲಮಿತಿ ಯಕ್ಷಗಾನ ಶ್ರೀ ಸಂಪೂರ್ಣ ದೇವಿ ಮಹಾತ್ಮಜರುಗಲಿದೆ.
ಫೆ.20ರಂದು ಕಾವ್ಯ ಸಂಗೀತ ಕಲಾಕುಂಚ ಸುಶ್ರಾವ್ಯ ಸಂಗೀತ ದೊಂದಿಗೆ ಬಣ್ಣದ ಚಿತ್ತಾರದ ಅನಾವರಣ.
ಫೆ.21ರಂದು ಮಧ್ಯಾಹ್ನ 12ಕ್ಕೆ ಚಂಡಿಕಾ ಹೋಮದ ಪೂರ್ಣಾ ಹುತಿ, ಸಂಜೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಲರವ, ಡ್ಯಾನ್ಸ್ ಪ್ಯಾಲೆಸ್ ಕಲಾವಿದರಿಂದ ನೃತ್ಯ ಸಂಭ್ರಮ, ಸ್ಥಳೀಯ ಗಾಯಕರಿಂದ ಸಂಗೀತ ಸುಧೆ ನಡೆಯಲಿದೆ.
ಫೆ.22ರಂದು ಖ್ಯಾತ ಗಾಯಕ ರಾಜಗುರು ಹೊಸಕೋಟೆ ಬೆಂಗಳೂರು ಮತ್ತು ಬಳಗದ ಪ್ರಸ್ತುತಿಯಲ್ಲಿ ಜಾನಪದ ಸಂಗೀತ. ಫೆ.23ರಂದು ಸಂಗೀತ ಗಾನ ಸಂಭ್ರಮ, ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಭಕ್ತಿ-ಭಾವ-ಚಿತ್ರಗೀತೆಗಳ ಸಮ್ಮಿಲನ.
ಫೆ.24ರಂದು ಜಾತ್ರಾ ವಿಶೇಷ ಪೂಜೆಗಳು, ಮಹಾಮಂಗಳಾ ರತಿ, ಎಣ್ಣೆಭಂಡಾರ ಪೂಜೆ, ಸಂಪ್ರದಾಯದಂತೆ ಗೊಂಬೆ ಪೂಜೆ, ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಟಾಪಿಸಲಾಗುವುದು.
ಫೆ.25ರಂದು ರಾಜಬೀದಿ ಉತ್ಸವದೊಂದಿಗೆ ಗೊಂಬೆ ವಿಸರ್ಜನೆ ನಡೆಯಲಿದೆ.








