- 600 ಉದ್ಯೋಗಿಗಳನ್ನು ವಜಾಗೊಳಿಸಿದ ಕಾರ್ಸ್ 24
- ವೇದಾಂತು ಕಂಪನಿಯಿಂದಲೂ ಉದ್ಯೋಗಿಗಳ ವಜಾ
- ಸರ್ಕಾರ ಬಾಯಿ ಮಾತಲ್ಲಿ ಸುಳ್ಳು ಹೇಳುತ್ತಿದೆಯಾ..?
ಉದ್ಯಮಗಳಿಗೆ ಬೆಂಬಲ ಕೊಟ್ರೆ ಮಾತ್ರ ಉದ್ಯೋಗ ಸೃಷ್ಟಿ!
ಲಕ್ಷ ಲಕ್ಷ ಉದ್ಯೋಗ ಕುಸಿತ ಸಾಧ್ಯತೆ!?
NAMMUR EXPRESS NEWS
ಬೆಂಗಳೂರು: ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರಲ್ಲಿ ಸ್ಟಾರ್ಟ್ ಅಪ್ ಕರೋನಾ ಬಳಿಕ ಒಂದರ ಮೇಲೆ ಒಂದು ಬಾಗಿಲು ಹಾಕಿಕೊಳ್ಳುತ್ತಿವೆ. ಇದೀಗ ಒಂದರ ನಂತರ ಒಂದರಂತೆ ಸ್ಟಾರ್ಟ್ಅಪ್ ಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ, ಇದೀಗ ಕಾರ್ಸ್ 24 ಎಂಬ ಕಂಪನಿಯು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಗಳಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಾಫ್ಟ್ ಬ್ಯಾಂಕ್ ಮತ್ತು ಆಲ್ಫಾ ವೇವೆ ಗ್ಲೋಬಲ್ ಬೆಂಬಲಿತ, ಬಳಸಿದ ಕಾರುಗಳನ್ನು ಮಾರಾಟ ಮಾಡುವ ಈ ಕಂಪನಿಯಲ್ಲಿ 9000 ಉದ್ಯೋಗಿಗಳಿದ್ದಾರೆ,600 ಉದ್ಯೋಗಿಗಳ ವಜಾ ದೊಂದಿಗೆ ಕಾರ್ಸ್ 24 ಇತ್ತೀಚೆಗಷ್ಟೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದ ಆನ್ ಅಕಾಡೆಮಿ ವೇದಾಂತು ಮತ್ತು ಮಿಶೋಗಳನ್ನು ಸ್ಟಾರ್ಟಪ್ ಗಳ ಪಟ್ಟಿಗೆ ಸೇರಿದೆ. ದಿನದಿನಕ್ಕೂ ಈ ಪಟ್ಟಿ ಬೆಳೆಯುತ್ತಲೇ ಇದ್ದು ಸ್ಟಾರ್ಟ್ ಅಪ್ ಗಳಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಆತಂಕ ಮೂಡಿಸಿದೆ.
ಕಾರ್ಸ್ 24 ಡಿಸೆಂಬರ್ ನಲ್ಲಿ ಆಲ್ಫ ವೇವ್ ಗ್ಲೋಬಲ್ ನೇತೃತ್ವದಲ್ಲಿ 400 ದಶಲಕ್ಷ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿತ್ತು, ಇದರಲ್ಲಿ 100 ದಶಲಕ್ಷ ಡಾಲರ್ ಸಾಲವು ಸೇರಿತ್ತು, ಈ ಹೂಡಿಕೆಯ ಬಳಿಕ ಕಾರ್ಸ್ 24 ಕಂಪನಿಯ ಮಾರುಕಟ್ಟೆ ಮೌಲ್ಯವು ಮೂರುಪಟ್ಟು ಏರಿಕೆಯಾಗಿ 3.3 ಶತಕೋಟಿ ಡಾಲರ್ ಗೆ ತಲುಪಿತ್ತು.
ಹೊಸ ಉದ್ಯಮಗಳು ಕುಸಿಯುವ ಭೀತಿ!
ಕರೋನಾ ಬಳಿಕ ಹೊಸ ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಆದ್ರೆ ಸೂಕ್ತ ಹಣಕಾಸು ಕೊರತೆ, ಅಗತ್ಯ ವಸ್ತುಗಳ ಹೆಚ್ಚಳ, ಬಂಡವಾಳ ಕೊರತೆ, ಅತೀ ಹೆಚ್ಚಿನ ಸ್ಪರ್ಧೆ ಹಿನ್ನೆಲೆ ಸಾವಿರಾರು ಉದ್ಯಮಗಳು, ಸ್ಟಾರ್ಟ್ ಅಪ್ ಬಂದ್ ಆಗುವ ಭೀತಿಯಲ್ಲಿವೆ. ಸರಕಾರ ಕೈ ಹಿಡಿಯಬೇಕಿದೆ.