ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ!
– ಅಡಿಕೆ ಫಸಲು ಕಡಿಮೆ ಇರುವುದರಿಂದ ಅಡಿಕೆ ಬೆಲೆ ಏರಿಕೆ
– ರಾಜ್ಯದಲ್ಲಿ ಎಲ್ಲಾ ಕಡೆ ಅಡಿಕೆ ದರ ಹೆಚ್ಚಳ
NAMMUR EXPRESS NEWS
ಮಂಗಳೂರು : ಚಾಲಿ ಅಡಕೆ (ಸಿಂಗಲ್ ಚೋಲ್) ಮಂಗಳವಾರ ಕೆ.ಜಿಗೆ 520 ರೂ.ಗೆ ಖರೀದಿಯಾಗಿದೆ. ಕಳೆದ ವಾರ 500 ರೂ. ಗಡಿ ತಲುಪಿತ್ತು. ಮುಂದಿನ ದಿನಗಳಲ್ಲಿ ಸಿಂಗಲ್ ಮಂಗಳೂರು ಚಾಲಿ ಅಡಕೆ 550 ರೂ. ಗಡಿ ಚೋಲ್ ದಾಟುವ ನಿರೀಕ್ಷೆ ಇದೆ.
ಸಿಂಗಲ್ ಜೋಲ್ ಅಡಕೆಗೆ ಕ್ಯಾಂಪ್ಲೋ 520 ರೂ. ನಿಗದಿ ಮಾಡಿದ ಬೆನ್ನಲ್ಲೇ ಕೆಲವು ಖಾಸಗಿ ವ್ಯಾಪಾರಸ್ಥರು ವರವನ್ನು ಕೊಂಚ ಏರಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಸಿಂಗಲ್ ಬೋಲ್ ಗೆ 480 ರೂ. ದರವಿತ್ತು. ಕರಿಕೋಕ ಅಡಕೆಗೆ ಕಳೆದ ವರ್ಷ ಬೇಡಿಕೆ ಇಲ್ಲದ ಕಾರಣ ಈ ಸಮಯಕ್ಕೆ ಕೆ.ಜಿಗೆ 70 ರೂ. ದರವಿತ್ತು. ಈ ಬಾರಿ 250 ರೂ. ದರವಿದೆ. ಉತ್ತರ ಭಾರತದಲ್ಲಿ ಅಡಕೆ ಬೇಡಿಕೆ ಹೆಚ್ಚುತ್ತಿದ್ದರೂ ಅವಕ ಕಡಿಮೆ ಇರುವ ಕಾರಣ ಧಾರಣೆ ಜಿಗಿದಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಈ ಸಾಲಿನ ಅಡಕೆ ಮಾರುಕಟ್ಟೆಗೆ ಅವಕವಾಗುತ್ತಿದ್ದು, ಇದು ಕೆ.ಜಿಗೆ 380 ರೂ.ಗೆ ಖರೀದಿಯಾಗುತ್ತಿದೆ. ಕಳೆದ ವಾರ ಇದರ ದರ 360 ರೂ. ಇತ್ತು.
ಕಳೆದ ಸಾಲಿನಲ್ಲಿ ಅಡಕೆ ಇಳುವರಿ ಕಡಿಮೆಯಿದ್ದು, ಕೊಳೆರೋಗವೂ ಬಾಧಿಸಿತ್ತು. ಸಣ್ಣ ರೈತರು ಜೂನ್ ವೇಳೆ ಮಾರಾಟ ಮಾಡಿದ್ದರೆ, ದೊಡ್ಡ ರೈತರು ಮಾತ್ರ ದಾಸ್ತಾನು ಇರಿಸಿಕೊಂಡಿದ್ದಾರೆ. ಅರ್ಧಕ್ಕರ್ಧ ಬೆಳೆ ನಷ್ಟ ಪ್ರಸ್ತುತ ಸಾಲಿನಲ್ಲೂ ವ್ಯಾಪಕ ಕೊಳೆರೋಗವಿದ್ದು ಮಳೆಗಾಲದಲ್ಲಿ ಅರ್ಧಕರ್ಧ ಅಡಕೆ ಎಳತಿನಲ್ಲೇ ಮರದಿಂದ ಉದುರಿವ ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಫಸಲು ನಷ್ಟವಾಗ ಸಾಧ್ಯತೆ ಇದೆ.
ಅಡಕೆ ಫಸಲು ಕಡಿಮೆ ಇದ್ದು, ಉತ್ಪಾದನಾ ವೆಚ್ಚ ಅಧಿಕವಿದೆ. ದರ ಏರಿಕೆಯಾದಲ್ಲಿ ಮಾತ್ರ ಕೃಷಿಕರಿಗೆ ಅನುಕೂಲವಾಗುತ್ತದೆ.
ಅರ್ಧ ಲಕ್ಷ ರೂ. ತಲುಪಿದ ಚಾಲಿ ದರ :-
ರಾಜ್ಯದ ಅಡಕೆ ಮಾರುಕಟ್ಟೆಯಲ್ಲಿ ಈಗ ಚಾಲಿ ಅಡಕೆ ದರ ಹಂತಹಂತವಾಗಿ ಏರಿಕೆ ಆಗುತ್ತಿದ್ದು ಈಗ ಕ್ವಿಂಟಾಲ್ಗೆ ಅರ್ಧ ಲಕ್ಷ ರೂ. ತಲುಪಿದೆ. 3 ತಿಂಗಳ ಹಿಂದಿನ ದರಕ್ಕೆ ಹೋಲಿಸಿದಲ್ಲಿ ಈಗ ಕ್ವಿಂಟಾಲ್ಗೆ 8 ಸಾವಿರ ರೂ. ಏರಿಕೆ ಕಂಡಿದೆ. ಶಿರಸಿ ಸೇರಿ ಉತ್ತರ ಕನ್ನಡದ ನಾನಾ ಕಡೆಗಳಲ್ಲಿ ಬಹುಪಾಲು ಬೆಳೆಗಾರರ ಬಳಿ ಅಡಕೆ ಬೆಳೆ ದಾಸ್ತಾನು ಕಡಿಮೆ ಇರುವುದು ದರ ಹೆಚ್ಚಳ ಆಗುವುದಕ್ಕೆ ಮುಖ್ಯ ಕಾರಣವಾಗಿದೆ. ಸಹಕಾರ ಸಂಸ್ಥೆಗಳು ಪ್ರಬಲವಾಗಿರುವ ಕಡೆಗಳಲ್ಲಿ ಅಡಕೆ ಬೆಳೆಗಾರರು ಬೆಳೆಯನ್ನು ದಾಸ್ತಾನು ಮಾಡುವ ಪದ್ಧತಿ ಇದೆ. ಆದರೆ ಈ ದಾಸ್ತಾನು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಕಡಿಮೆ ಇದೆ. ಹೊಸ ಕೆಂಪಡಿಕೆ ಇನ್ನೆರಡು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಬಹುದಾದರೂ ಚಾಲಿ ಅಡಕೆ ಹಂಗಾಮು ಪ್ರಾರಂಭವಾಗಿ ಬೆಳೆ ಮಾರಾಟಕ್ಕೆ ಬರುವುದಕ್ಕೆ ಇನ್ನೂ ನಾಲೈದು ತಿಂಗಳು ಕಾಯಬೇಕು. ಆದರೆ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಸ್ಥರು ಈಗಲೇ ಖರೀದಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ದರ ಏರಿಕೆ ಆಗುತ್ತಿದೆ.







