ತೀರ್ಥಹಳ್ಳಿ ಪಟ್ಟಣದಲ್ಲಿ ದೀಪೋತ್ಸವ ರಂಗು..!
– ಬೆಟ್ಟಮಕ್ಕಿ, ಇಂದಾವರ, ಮಿಲ್ಕೆರಿಯಲ್ಲಿ ದೀಪಕ್ಕೆ ಜನವೋ ಜನ
– ಇಂದು ತುಡ್ಕಿ -ಬದನೆಹಿತ್ಲು ದೀಪ : ಗಮನ ಸೆಳೆದ ವಿದ್ಯುತ್ ಅಲಂಕಾರ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ದೀಪಗಳಾದ ಬೆಟ್ಟಮಕ್ಕಿ, ಇಂದಾವರ, ಮಿಲ್ಕೆರಿ ದೀಪೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಟ್ಟಮಕ್ಕಿ ಭೂತರಾಯ ಸ್ವಾಮಿ ದೇಗುಲದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಿತು. ದೀಪದ ಬಳಿಕ ಅನ್ನದಾನ ನಡೆಯಿತು. ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ನವೀನ್, ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಅಶೋಕ್ ಶೆಟ್ಟಿ ಸೇರಿ ಅನೇಕ ಪ್ರಮುಖರು ಹಾಜರಿದ್ದರು. ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆಯಿತು.
ಮಿಲ್ಕೆರಿ ಭೂತ ರಾಯ ಸ್ವಾಮಿ ದೀಪೋತ್ಸವ
ಕೊಪ್ಪ ರಸ್ತೆಯ ವಾಗ್ದೇವಿ ಶಾಲೆ ಪಕ್ಕದ ಭೂತರಾಯ ಸ್ವಾಮಿ ದೇವರ ದೀಪೋತ್ಸವ, ಸತ್ಯ ನಾರಾಯಣ ವೃತ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ದೇವರ ಅಲಂಕಾರ, ಪಟಾಕಿಗಳ ಚಿತ್ತಾರ ಗಮನ ಸೆಳೆಯಿತು. ಪ್ರಮುಖರಾದ ಹರೀಶ್, ಸುಮಂತ್, ಅನಿಲ್ ಸೇರಿ ಹಲವರು ಇದ್ದರು. ಸಹಕಾರ ನಾಯಕರಾದ ಮಂಜುನಾಥ ಗೌಡ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಇಂದಾವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
ತೀರ್ಥಹಳ್ಳಿಯ ಇಂದಾವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವಂಬರ್ 16ರ ಭಾನುವಾರ ರಾತ್ರಿ ಸಾರ್ವಜನಿಕ ಕಾರ್ತಿಕ ದೀಪೋತ್ಸವ ಅದ್ದೂರಿಯಾಗಿ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಭಾಗಿಯಾಗಿದ್ದರು.
ಇಂದು ತುಡ್ಕಿ -ಬದನೆಹಿತ್ಲು ಭೂತರಾಯಸ್ವಾಮಿ ದೀಪೋತ್ಸವ
ಶ್ರೀ ಭೂತರಾಯಸ್ವಾಮಿ ಸೇವಾ ಸಮಿತಿ ತುಡ್ಕಿ -ಬದನೆಹಿತ್ಲು ಆನಂದಗಿರಿ, ಇಲ್ಲಿ ದಿನಾಂಕ 18-11-2025 ನೇ ಮಂಗಳವಾರ ಬೆಳಿಗ್ಗೆ 10-30 ಕೈ ಹಾಗೂ ಶ್ರೀ ನಾಗರಬನ ಸನ್ನಿಧಿಯಲ್ಲಿ ಬೆಳಿಗ್ಗೆ 8-೦೦ ಘಂಟೆಗೆ
ಪಂಚಾಮೃತ ಅಭಿಷೇಕ ನಡೆದಿದೆ. ಶ್ರೀ ಭೂತರಾಯಸ್ವಾಮಿ ಹಾಗೂ ಪರಿವಾರ ದೇವರುಗಳ ಸಾನಿಧ್ಯದಲ್ಲಿ ಬೆಳಿಗ್ಗೆ 10 ಘಂಟೆಯಿಂದ ಅಧಿವಾಸ ಹೋಮ, ಕಲಶಾಭಿಷೇಕ ಹಾಗೂ ಸಂಜೆ 6-30 ರಿಂದ ಕಾರ್ತಿಕ ದೀಪೋತ್ಸವ ಹಾಗೂ ರಾತ್ರಿ 8.00 ಘಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಸರ್ವರಿಗೂ ಆದರದ ಸುಸ್ವಾಗತವನ್ನು ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಭೂತರಾಯಸ್ವಾಮಿ ಸೇವಾ ಸಮಿತಿ ತುಡ್ಕಿ ಬದನೇಹಿತ್ಲು ಇವರು ಕೋರಿದ್ದಾರೆ.








