ಶ್ರೀ ಕ್ಷೇತ್ರ ನಾಗರಹಳ್ಳಿಯಲ್ಲಿ ನ.20ಕ್ಕೆ ದೀಪೋತ್ಸವ!
– ಕಾರ್ತೀಕ ಅಮಾವಾಸ್ಯೆ ದಿನ ಸಹಸ್ರ ದೀಪೋತ್ಸವ: ಸರ್ವರಿಗೂ ಸ್ವಾಗತ
ತೀರ್ಥಹಳ್ಳಿ: ನ. 22ಕ್ಕೆ ಪ್ರಸಿದ್ಧ ಶ್ರೀಸಿದ್ದೇಶ್ವರ ಸ್ವಾಮಿ ದೀಪೋತ್ಸವ
– ಬೆಟ್ಟದ ಮೇಲೆ ನಡೆದು ದೀಪ ಹಚ್ಚುವ ಧಾರ್ಮಿಕ ಕಾರ್ಯಕ್ರಮ
ಹೊಸನಗರ: ಪ್ರಸಿದ್ಧ ಕಾರಣಿಕ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕ ಅಮಾವಾಸ್ಯೆ ದಿನ ಸಾಮೂಹಿಕ ಸಹಸ್ರ ದೀಪೋತ್ಸವ ದಿನಾಂಕ 20 -11- 2025- ಗುರುವಾರ, ಸಂಜೆ 7.00ಕ್ಕೆ ನಡೆಯಲಿದೆ.
ಈ ಕಾರ್ತೀಕ ದೀಪೋತ್ಸವಕ್ಕೆ ಊರ – ಪರಊರ ಸದ್ಭಕ್ತರೆಲ್ಲಾ ಆಗಮಿಸಿ ಹೆಸರು ನೊಂದಾಯಿಸಿ. ಆ ಭಗವಂತನಿಗೆ ದೀಪ ಹಚ್ಚುವುದರ ಮೂಲಕ ಪಾಪಗಳೆಲ್ಲವೂ ಕಳೆದೂ ಸುಖಮಯವಾದ ನೆಮ್ಮದಿಯ ಜೀವನ ಅನುಗ್ರಹಿಸಲೆಂದು ಪ್ರಾರ್ಥಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ. ಪ್ರತಿ ವರ್ಷ ಸಾವಿರಾರು ಜನ ಈ ದೇವಾಲಯದ ಕಾರ್ತೀಕ ಅಮಾವಾಸ್ಯೆಯಲ್ಲಿ ಭಾಗಿಯಾಗುತ್ತಾರೆ.
ತೀರ್ಥಹಳ್ಳಿ: ನ. 22ಕ್ಕೆ ಪ್ರಸಿದ್ಧ ಶ್ರೀಸಿದ್ದೇಶ್ವರ ಸ್ವಾಮಿ ದೀಪೋತ್ಸವ
– ಬೆಟ್ಟದ ಮೇಲೆ ನಡೆದು ದೀಪ ಹಚ್ಚುವ ಧಾರ್ಮಿಕ ಕಾರ್ಯಕ್ರಮ
– ಶ್ರೀಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ, ಡಿಪಿಸಿ ನೇತೃತ್ವದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ತೀರ್ಥಹಳ್ಳಿ: ತೀರ್ಥಹಳ್ಳಿಯ ಬಾಳೆಬೈಲು ಸಿದ್ದೇಶ್ವರ ಬಡಾವಣೆಯ ಶ್ರೀಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿಯು ಶ್ರೀಸಂಧ್ಯಾಮಂಟಪ ಸಿದ್ದೇಶ್ವರ ದೇವರ ಸನ್ನಿಧಾನದಲ್ಲಿ ಮೂವತ್ತಮೂರನೇ ವರ್ಷದ ದೀಪೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ದಿನಾಂಕ 22 ನವೆಂಬರ್ 2025 ಶನಿವಾರ ಮತ್ತು 23 ನವೆಂಬರ್ 2025 ಭಾನುವಾರದಂದು ಹಮ್ಮಿಕೊಂಡಿದೆ. ದಿನಾಂಕ 22ರ ಶನಿವಾರದಂದು ಸಂಜೆ 6: 30ಕ್ಕೆ ಭಕ್ತರ ಶ್ರೇಯಸ್ಸಿಗಾಗಿ, ಆರೋಗ್ಯ ವಿದ್ಯೆ ಐಶ್ವರ್ಯಾದಿ ಬೇಡಿಕೆಗಳ ಪ್ರಾಪ್ತಿಗಾಗಿ ರುದ್ರಾಭಿಷೇಕ, ದೀಪೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ಶ್ರೀಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು. ಅಂದು ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಬಳಿಕ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ಹೆಗ್ಗೋಡಿನ ವಿದ್ವಾನ್ ರಾಘವೇಂದ್ರ ಭಟ್ ಮತ್ತು ಅವರ ತಂಡದಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ದಿನಾಂಕ 23ರ ಭಾನುವಾರದಂದು ಸಂಜೆ 6 ಗಂಟೆಗೆ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ತೀರ್ಥಹಳ್ಳಿಯ ಶ್ರೀಸಿದ್ದೇಶ್ವರ ಸೇವಾ ಸಮಿತಿ ಮತ್ತು ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಅವರ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಭಕ್ತಾದಿಗಳು ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು ಮನ ಧನದ ಸಹಕಾರದೊಂದಿಗೆ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಿ, ಸಂಗೀತ ಮತ್ತು ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಭ್ರಮ ಪಟ್ಟುಕೊಳ್ಳಬೇಕೆಂದು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಆದರದ ಸ್ವಾಗತವನ್ನು ಕೋರಿದ್ದಾರೆ.








