ಟಿಎಸ್ಡಿ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ಕಾಫಿನಾಡ ಕುವರರ ಸಾಧನೆ
* ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ರ್ಯಾಲಿ
* ಮಹೀಂದ್ರಾ ಥಾರ್ ಕೆಟಗರಿಯಲ್ಲಿ ಮೊದಲನೇ ಸ್ಥಾನ,ಇತರೆ ವಿಭಾಗದಲ್ಲಿ ಪ್ರಶಸ್ತಿ
NAMMMUR EXPRESS NEWS
ಚಿಕ್ಕಮಗಳೂರು: ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ರಾಷ್ಟ್ರಮಟ್ಟದ 7000kms ನಾಲ್ಕು ಚಕ್ರದ ಟೈಮ್ ಸ್ಪೀಡ್ ಡಿಸ್ಟೆನ್ಸ್ ರ್ಯಾಲಿ(TDS – rally)ಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಮನು ಗೌಡ ಎ.ಕೆ ಹಾಗೂ ಸಮೃದ್ಧ್ ಪೈ ಜೋಡಿ ಭಾಗವಹಿಸಿ ಮಹೀಂದ್ರಾ ಥಾರ್ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಗೆದ್ದು ಪ್ರಶಸ್ತಿ ಪಡೆದುಕೊಂಡಿದ್ದು, ಇಂಡಿಯನ್ ನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟೆನ್ಸ್ -2 ಕ್ಯಾಟಗರಿಯಲ್ಲಿ (INTSDRC-2) ಎರಡನೇ ಸ್ಥಾನ ಹಾಗೂ Highland Extreme pro expert ಕ್ಯಾಟಗರಿಯಲ್ಲಿ ಮೂರನೇ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಹಲವು ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡ ತಂಡವು ಈಗ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ.








