ತೀರ್ಥಹಳ್ಳಿ ಲೋಕಲ್ 3 ನ್ಯೂಸ್
- ಕಟ್ಟೆಹಕ್ಕಲಿನ ಅನು-ಪ್ರತಿಕ್ಷಾ ಕ್ರೀಡಾರಂಗದಲ್ಲಿ ಸಾಧನೆ
- ಜಿಲ್ಲಾ ಕ್ರೀಡಾಕೂಟಕ್ಕೆ ಅನು, ಪ್ರತಿಕ್ಷಾ ಸಾಧನೆ
- ಕೈಮರ ಬಳಿ ಕೊಟ್ಟಿಗೆಗೆ ಬಂತು ಕಾಳಿಂಗ ಹಾವು!
- ಆವಿಶ್ವಾಸ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ!
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಕಲು ವಿದ್ಯಾರ್ಥಿಗಳು ಕೀರ್ತಿ ತಂದಿದ್ದಾರೆ. 9ನೇ ತರಗತಿಯ ಅನು ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ, ಪ್ರತಿಕ್ಷಾ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರೀಡಾ ಪಟುತನ ತೋರಿಸಿದ್ದಾರೆ. ಇಬ್ಬರೂ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದು.
ಇದಕ್ಕೆ ಸೇರ್ಪಡೆಯಾಗಿ ಇಂಪನ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, ತೇಜಸ್ವಿ 100 ಮೀ. ಹಾಗೂ 200 ಮೀ. ಓಟಗಳಲ್ಲಿ ತೃತೀಯ ಸ್ಥಾನ, ಮತ್ತು ಅಭಿದಿತ್ ಗೌಡ ಹ್ಯಾಮರ್ ಥ್ರೋ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಗೆ ಮೆರಗು ತುಂಬಿದ್ದಾರೆ. ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ಪೋಷಕರು,ಊರ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಮಟ್ಟದಲ್ಲಿ ಇನ್ನೂ ಉನ್ನತ ಯಶಸ್ಸು ಗಳಿಸಲು ಶುಭಾಶಯ ಕೋರಿದ್ದಾರೆ.
ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ!
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರೆಹಮತ್ ಉಲ್ಲಾ ಅಸಾದಿ ಯಾನೆ ಅಸಾದಿರವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ವಿಚಾರ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಯಾನೆ ಅಸಾದಿಯವರ ವಿರುದ್ದ ಈಗಾಗಲೇ ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿಚಾರವಾಗಿ ಅಕ್ಟೋಬರ್ 18 ರ ಶನಿವಾರ ಪಟ್ಟಣ ಪಂಚಾಯ್ತಿ ತೀರ್ಥಹಳ್ಳಿ ಕಛೇರಿಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ರಮೇಶ್ ಇವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಅವಿಶ್ವಾಸ ಗೊತ್ತುವಳಿ ಸಭೆಯನ್ನು ಕರೆದಿರುತ್ತಾರೆ,
ಸದರಿ ಸಭೆಯಲ್ಲಿ ನಮ್ಮ ಪಕ್ಷದ ಪಟ್ಟಣ ಪಂಚಾಯ್ತಿ ಸದಸ್ಯರುಗಳು ತೆಗೆದುಕೊಳ್ಳಬೇಕಾದ ತೀರ್ಮಾನದ ಬಗ್ಗೆ ಚರ್ಚಿಸಲು, ಮತ್ತು ಪಕ್ಷ ನೀಡುವ ಲಿಖಿತ ನಿರ್ದೇಶನವನ್ನು ನಿಮಗೆ ತಲುಪಿಸುವ ಸಲುವಾಗಿ
ದಿನಾಂಕ: 15-10-2025 ರ ಬುಧವಾರ, ಸಂಜೆ 5:00 ಗಂಟೆಗೆ
ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ (ಗಾಂಧೀ ಭವನ) ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ನೀವುಗಳು ಕಡ್ಡಾಯವಾಗಿ ಹಾಜರಿರಲು ಕೆಸ್ತೂರು ಮಂಜುನಾಥ್, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ, ತೀರ್ಥಹಳ್ಳಿ ಕೋರಿದ್ದಾರೆ.
ಮನೆಯ ಕೊಟ್ಟಿಗೆಯಲ್ಲಿತ್ತು ಕಾಳಿಂಗ ಹಾವು!
ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಣ್ಣಧಮನೆಯ ಲಲಿತಮ್ಮ ಎಂಬುವವರ ಮನೆಯ ಕೊಟ್ಟಿಗೆ ಯಲ್ಲಿ ಅವಿತು ಕುಳಿತಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಉರಗ ಪ್ರೇಮಿ ಚಂದ್ರು ಅವರು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದು ಉರಗ ಪ್ರೇಮಿ ಆಗಿರುವ ಚಂದ್ರು ಅವರು ತೀರ್ಥಹಳ್ಳಿ ತಾಲೂಕು ಹಾಗೂ ಇತರೆ ಪ್ರದೇಶಗಳಲ್ಲಿಯೂ ಕೂಡ ಮನೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಳಿಂಗ ಸರ್ಪ ಅಥವಾ ಯಾವುದೇ ಅಪಾಯಕಾರಿ ಹಾವುಗಳ ಬಗ್ಗೆ ಮಾಹಿತಿ ತಿಳಿಸಿದರು ತಕ್ಷಣ ಸ್ಥಳಕ್ಕೆ ಭೇಟಿ ಅವುಗಳನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಇವರ ಕಾರ್ಯ ಯೋಜನೆ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ







