ಮಳೆಗಾಲಕ್ಕೆ ಸಿದ್ಧವಾದ ವಿದ್ಯುತ್ ಇಲಾಖೆ! ಮಲೆನಾಡಲ್ಲಿ ಮಳೆಗಾಲ ಬಂದ್ರೆ ವಿದ್ಯುತ್ ಸಮಸ್ಯೆ ವಿದ್ಯುತ್ ಲೈನ್ ಬಳಿ ಮರಗಳ ಹರೆ ಕಡಿತಲೆ ಮಳೆಗಾಲ ಎದುರಿಸಲು ಸನ್ನದ್ಧರಾದ ಸಿಬ್ಬಂದಿ ತೀರ್ಥಹಳ್ಳಿ: ಮಳೆಗಾಲ ಸೂಚನೆ ನೀಡುತ್ತಿದ್ದಂತೆ ವಿದ್ಯುತ್ ಇಲಾಖೆ ಕಾರ್ಯತಂತ್ರವನ್ನು ರೂಪಿಸಿದೆ. ಮಳೆಗಾಲದಲ್ಲಿ ವಿದ್ಯುತ್ ಇಲಾಖೆಗೆ ಬಿಡುವಿಲ್ಲದ ಕೆಲಸವಾಗುತ್ತಿದೆ. ಜೊತೆಗೆ ಜೀವದ ಹಂಗು ತೊರೆದು ಕೂಡ ಲೈನ್ ಮೆನ್ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇಂಥ ಸಮಯದಲ್ಲಿ ಲೈನ್ ಗಳಿಗೆ ಚಿಕ್ಕ ಚಿಕ್ಕ ಮರದ ಹೆರೆಗಳು ತಾಗಿಕೊಂಡಿದ್ದು ಎಲ್ಲಾ ಭಾಗದಲ್ಲಿ ಕಡಿತಲೆ ಮಾಡಲಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿರುವಂತಹ ದುರಸ್ತಿ ಮಾಡಲಾಗಿದೆ. ಮಲೆನಾಡಿನಲ್ಲಿ ಬಾರಿ ಮಳೆ ಗಾಳಿಗೆ ಪದೇಪದೇ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವಾರಗಟ್ಟಲೆ ಇರುವುದಿಲ್ಲ ಹೀಗಾಗಿ ಈ ಬಾರಿ ವಿದ್ಯುತ್ ಇಲಾಖೆಯ ಸಿಬ್ಬಂದಿ ಮೊದಲೇ ಸಿದ್ಧತೆ ನಡೆಸಿ ಎಲ್ಲಾ ಕಾರ್ಯತಂತ್ರ ರೂಪಿಸಿದ್ದಾರೆ. ಸಮಸ್ಯೆ ಎದುರಾಗದಂತೆ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಎಲ್ಲಾ ಭಾಗದಲ್ಲೂ ಮಳೆ ಈ ಬಾರಿ ತಡವಾಗಿ ಶುರುವಾಗಿದ್ದರಿಂದ…
Author: Nammur Express Admin
ರಾಜಸ್ಥಾನದ ದೌಸಾದಲ್ಲಿ ನಡೆದ ಘಟನೆ ನಾಲ್ವರು ಸಾವು ಕಂಡಿರುವ ಶಂಕೆ ನವದೆಹಲಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವನೆ ಮಾಡಿದ ನಂತರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ದೌಸಾದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಸುಭಾಷ್ ಬಿಲೋನಿಯಾ ತಿಳಿಸಿದ್ದಾರೆ. ರಾಜಸ್ಥಾನದ ಪಖರ್ ಗ್ರಾಮದಲ್ಲಿ ರಾತ್ರಿ ಮಂದಾವ ಪ್ರದೇಶದಲ್ಲಿ ಧಾರ್ಮಿಕ ಸಮಾರಂಭವೊಂದು ನಡೆದಿದೆ. ಧಾರ್ಮಿಕ ಕಾರ್ಯದ ನಂತರ ಎಲ್ಲರೂ ಊಟ ಮಾಡಿದ್ದಾರೆ. ಈ ಪೈಕಿ 300 ಜನರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ಮಾಂದವಾರ, ಮಹುವಾ, ದೌಸಾ ಮತ್ತು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ ಹಲವರು ಪ್ರಥಮ ಚಿಕಿತ್ಸೆ ಪಡೆದು ಬಿಡುಗಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಹರ್ಷಿತ್ ಗೋಸಾವಿ ಅವರ ಪ್ರಕಾರ ಸಮಾರಂಭದಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಇದಲ್ಲದೆ, ನಾಲ್ವರು ಅಸ್ವಸ್ಥರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು…
ಕಾರ್ಕಳ: ಮಳೆಗಾಲ ಆರಂಭವಾಗಿರುವ ಸಮಯದಲ್ಲೇ ಕೋಳಿಮಾಂಸ ,ಹಾಗೂ ಮೊಟ್ಟೆಯ ಬೆಲೆ ಗಗನಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಬೆಲೆ ಎಷ್ಟಿದೆ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬಾಯ್ಲರ್ ಕೋಳಿ ಮಾಂಸ ರೀಟೈಲ್ ವ್ಯಾಪಾರ ದಲ್ಲಿ ಕೆಜಿ ಯೊಂದಕ್ಕೆ 220-240 ರೂ , ರಖಂ ಕೆಜಿಯೊಂದಕ್ಕೆ 210-230ರೂ,ಟೈಸನ್ ಕೋಳಿ ಕೆಜಿ ಯೊಂದಕ್ಕೆ 230-250ರೂ , ರಖಂ ಕೆಜಿಯೊಂದಕ್ಕೆ 220-240 ರೂ ದರದಲ್ಲಿ ಮಾರಾಟ ವಾಗುತ್ತಿದೆ . ಇಡೀ ಕೋಳಿ ಖರೀದಿಸುವವರು ಬಾಯ್ಲರ್ ಕೆಜಿಯೊಂದಕ್ಕೆ ರೂ.170 , ಟೈಸನ್ ರೂ180 ಅದರ ಭಾರಕ್ಕೆ ತಕ್ಕಂತೆ ಬದಲಾಗುತ್ತಿದೆ .ಕೋಳಿ ಮೊಟ್ಟೆಯೊಂದಕ್ಕೆ 6.50- 7 ರೂ ವರೆಗೆ ಮಾರಟ ವಾಗುತ್ತಿದೆ. ಕಳೆದ ವರ್ಷ 2022 ರಲ್ಲಿ ಬಾಯ್ಲರ್ ಕೋಳಿ ಮಾಂಸ ಬೆಲೆ 160 -180 ರೂ ನಡುವೆ ಸ್ಥಿರವಾಗಿತ್ತು. ಟೈಸನ್ ಕೋಳಿಮಾಂಸ ರೂ. 190- 200 ರ ನಡುವೆ ಸ್ಥಿರವಾಗಿತ್ತು. 2022 ರಲ್ಲಿ ಮೊಟ್ಟೆ ಗೆ ರೂ .5- 5.30 ರ ವರೆಗೆ ಸ್ಥಿರವಾಗಿತ್ತು.…
ಹುಡುಗಿಯರ ಬದುಕಿನಲ್ಲಿ ಚೆಲ್ಲಾಟ: ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್? ಹಿಂದೂ ಸಂಘಟನೆ ಹೆಸರಲ್ಲಿ ಅನೈತಿಕತೆ?! ತೀರ್ಥಹಳ್ಳಿ: ಹಿಂದೂ ಸಂಘಟನೆ ಹೆಸರು ಬಳಸಿಕೊಂಡು ತಮ್ಮ ಶೋಕಿ ಜೀವನ ಮಾಡಿ ಅನೇಕ ಯುವತಿಯರ ಜತೆ ಅಸಭ್ಯ ಕಾಮದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ಇಡೀ ಸಮಾಜ ತಲೆ ತಗ್ಗಿಸುವಂತ ಪ್ರಕರಣ ತೀರ್ಥಹಳ್ಳಿಯಲ್ಲಿ ನಡೆದಿದೆ. ಪ್ರತಿಷ್ಠಿತ ಕಾಲೇಜು ಹುಡುಗನ ಕಾಮದಾಟದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿದ್ದು, ಈತ ತೀರ್ಥಹಳ್ಳಿಯ ವಿದ್ಯಾರ್ಥಿ ಹಿಂದೂ ಸಂಘಟನೆಯ ಅಧ್ಯಕ್ಷ ಆಗಿದ್ದು ರಾಜಕೀಯವಾಗಿ ಕೂಡ ಗುರುತಿಸಿಕೊಂಡಿದ್ದ. ಅಲ್ಲದೆ ಕಾಲೇಜಿನಲ್ಲಿ ಹಿಂದೂ ಸಂಘಟನೆ ಕಟ್ಟಿ ರಾಜಕೀಯ ಮಾಡುವ ಜತೆಗೆ ಬಡ ಯುವತಿಯರ ಪಾಲಿಗೆ ಕೀಚಕನಾಗಿದ್ದಾನೆ. ಹಿಂದೂ ಸಂಘಟನೆಯಲ್ಲಿ ಇದ್ದುಕೊಂಡು ಸಂಘಟನೆಯ ಹುಡುಗಿಯರನ್ನೇ ದುರ್ಬಳಕೆ ಮಾಡಿಕೊಂಡಿರುವುದು ಈ ಪ್ರಕರಣದಲ್ಲಿ ವಿವಾದಕ್ಕೆ ಗುರಿಯಾಗಿದೆ. ಅಲ್ಲದೆ ಆತ ಮತ್ತು ಯುವತಿಯರ ಜತೆಗಿನ ವಿಡಿಯೋ ವೈರಲ್ ಆಗಿದೆ. ಯುವತಿಯರು ಕೂಡ ಆ ಮಟ್ಟಕ್ಕೆ ಇಳಿದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ತೀರ್ಥಹಳ್ಳಿ ಪ್ರತಿಷ್ಠಿತ ಸರ್ಕಾರಿ ಕಾಲೇಜಿನ…
ಜೂನ್ 14 ಉಚಿತ ಅಪ್ಡೇಟ್ ಮಾಡಲು ಕೊನೆ ದಿನ ಆಗಿತ್ತು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ? ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಉಚಿತ ಆಧಾರ್ ನವೀಕರಣವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ ವಿಸ್ತರಿಸಿದೆ. ಅದರಂತೆ ಆಧಾರ್ ಆನ್‌ಲೈನ್ ನವೀಕರಣವು ಮುಂದಿನ 3 ತಿಂಗಳವರೆಗೆ ವಿಸ್ತರಣೆಯನ್ನು ಹೊಂದಿದೆ. ಮಾರ್ಚ್ 15, 2023 ರಿಂದ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಬಹುದು ಮತ್ತು ಅಪ್‌ಲೋಡ್ ಮಾಡಬಹುದು. ಈ ಮೊದಲು ದಿನಾಂಕ ಜೂನ್ 14, 2023 ಆಗಿತ್ತು. ಇದೀಗ ದೇಶದ ನಾಗರಿಕರಿಗಾಗಿ ಅವಧಿ ವಿಸ್ತರಣೆ ಮಾಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್‌ಸೈಟ್ ಪ್ರಕಾರ, “ಜನಸಂಖ್ಯಾ ಮಾಹಿತಿಯ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ. ಅದನ್ನು ನವೀಕರಿಸಲು, ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರಕಾರ,…
ಹೈಕಮಾಂಡ್ ಕಡೆಯಿಂದ ಅಂತಿಮ ಘೋಷಣೆ ಸಿಟಿ ರವಿ, ಅಶ್ವಥನಾರಾಯಣ ಹೆಸರು ಕೂಡ ಚಾಲ್ತಿ ಬೆಂಗಳೂರು: ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಹುತೇಕ ಫೈನಲ್ ಆಗಿದ್ದು, ಅಳೆದು ತೂಗಿ ಹೈಕಮಾಂಡ್ ವಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿಯವರ ಹೆಸರು ಫೈನಲ್ ಮಾಡಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್. ಅಶೋಕ್ ಹೆಸರು ಅಂತಿಮವಾಗಿದ್ದು, ಸಿದ್ದು, ಡಿಕೆ ಸರ್ಕಾರವನ್ನು ಸಮರ್ಥವಾಗಿ ಕಟ್ಟಿ ಹಾಕಲು ಹೈಕಮಾಂಡ್ ನಿಂದ ಮಹತ್ವದ ತೀರ್ಮಾನವಾಗಿದೆ. ಸರ್ಕಾರವನ್ನು ಪ್ರತಿ ಹಂತದಲ್ಲಿ ಕಟ್ಟಿ ಹಾಕಲು ವಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಅವರೇ ಸೂಕ್ತವಾಗಿದ್ದು, ನಿಕಟ ಪೂರ್ವ ಮುಖ್ಯಮಂತ್ರಿ ಕಾರಣ ಎಲ್ಲ ಇಲಾಖೆಗಳ ಆಗುಹೋಗುಗಳ ಅರಿವು, ಜೊತೆಗೆ ಸದನದ ಅನುಭವ ಆಡಳಿತದ ಅನುಭವದ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ಮಣೆ ಹಾಕಿದ್ದಾರೆ. ಹಲವು ಬಿಲ್ಲುಗಳ ಬಗ್ಗೆ ಸಮರ್ಥ ಚರ್ಚೆ ಮತ್ತು ಬಿಗಿಪಟ್ಟು ಹಾಕಲು ಸೂಕ್ತ ವ್ಯಕ್ತಿ ಬೊಮ್ಮಾಯಿಯಾಗಿದ್ದು, ಘಟಾನುಘಟಿ ಸಿದ್ದು, ಡಿಕೆಗೆ ಕೌಂಟರ್ ಕೊಡುವ ತಾಕತ್ತು ಇರುವುದು ಬೊಮ್ಮಾಯಿಗೆ ಮಾತ್ರ. ಜೊತೆಗೆ ಲಿಂಗಾಯಿತರನ್ನು ವಿಪಕ್ಷ ನಾಯಕ ಮಾಡಿದರೆ ಸಮುದಾಯಕ್ಕೆ…
ಮಲೆನಾಡಿನಲ್ಲಿ ಅಣಬೆ ಖಾದ್ಯದ ಘಮ ಘಮ ಅಣಬೆ ಅಡುಗೆ ಮಾಡುವಾಗ ಹುಷಾರ್..! ಮಲೆನಾಡು/ಕರಾವಳಿ: ಮಲೆನಾಡು, ಕರಾವಳಿಯಲ್ಲಿ ಸಣ್ಣ ಮಳೆ ಆಗಮನವಾಗುತ್ತಿದ್ದಂತೆ ಅಣಬೆ ಏಳಲು ಶುರುವಾಗಿದೆ. ಕಾಡು ಹಾಗೂ ಮನೆಯ ಸುತ್ತಮುತ್ತ ವಿವಿಧ ತಳಿಯ ಅಣಬೆಗಳು ಏಳುತ್ತಿದ್ದು ಇದನ್ನು ಜನರು ಹೆರಕಿ ಸಾಂಬಾರು, ಪಲ್ಯವನ್ನು ಮಾಡುತ್ತಾರೆ. ಮಲೆನಾಡಿನಲ್ಲಿ ಅಣಬೆ ಖಾದ್ಯ ಎಲ್ಲರಿಗೂ ಅಚ್ಚು ಮೆಚ್ಚು. ಇನ್ನು ಈ ಅಣಬೆಗಳಲ್ಲಿ ಕೆಲವು ಅತ್ಯುತ್ತಮ ಅಣಬೆಗಳನ್ನು ನಾವು ನೋಡಬಹುದು. ಇವು ಅರೋಗ್ಯಕ್ಕೆ ಹೆಚ್ಚು ಅನುಕೂಲ. ಕೆಲವು ಅಣಬೆಗಳು ವಿಷಕಾರಿ!: ಕೆಲವೊಮ್ಮೆ ಕಾಡು ಅಣಬೆಗಳು ವಿಷಕಾರಿ ಕೂಡ ಹೌದು. ಹೀಗಾಗಿ ಅಣಬೆ ಆಯ್ಕೆ ಮಾಡುವಾಗ ಎಚ್ಚರ. ಚಿಕ್ಕ ಮಕ್ಕಳಿಗೆ ಅಣಬೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕಳೆದ ಕೆಲವು ವರ್ಷಗಳಲ್ಲಿ ವಿಷಪೂರಿತ ಅಣಬೆಗಳನ್ನು ತಿಂದು ಅನೇಕ ಕಡೆ ಅನೇಕರು ಜೀವ ತೆಗೆದುಕೊಂಡಿದ್ದು ಜೊತೆಗೆ ಆಹಾರ ವ್ಯತ್ಯಾಸವಾಗಿದ್ದು ಕಂಡುಬಂದಿದೆ. ಮಲೆನಾಡಿನ ವಿಶೇಷ ಖಾದ್ಯ ಅಣಬೆ ಈಗ ಎಲ್ಲರ ಮನೆಯಲ್ಲೂ ಕಾಣಿಸುತ್ತಿದೆ. ತಿನ್ನಬಹುದಾದ ಈಗ ಸಿಗುವ ಅಣಬೆಗಳು ಇವು! ಹೆಗ್ಗಲ ಅಣಬೆ,…
11 ವರ್ಷಗಳ ಬಳಿಕ ತೀರ್ಪು ಪ್ರಕಟ ಆರೋಪಿ ಸಂತೋಷ್ ರಾವ್ ದೋಷಮುಕ್ತ ಸಾಕ್ಷಿ ಇಲ್ಲದ ಕಾರಣ ಸಿಬಿಐ ಕೋರ್ಟ್ ಆದೇಶ ಬೆಳ್ತಂಗಡಿ: ರಾಷ್ಟ್ರಮಟ್ಟದಲ್ಲಿ ಬಾರೀ ಸುದ್ದಿಯಾಗಿದ್ದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಏನಿದು ಘಟನೆ?: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಕರಾವಳಿಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. 2012 ಅಕ್ಟೋಬರ್ 10 ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ…
ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಆ. 27ಕ್ಕೆ ಮೂಹೂರ್ತ ಯಾರು ಯಾರು ಈ ಸಿನಿಮಾದಲ್ಲಿ ನಟಿಸ್ತಾರೆ? ಸಿನಿಮಾ : ಕಳೆದ ವರ್ಷ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಮನ್ನಣೆಯನ್ನು ಪಡೆಯಿತು. ಅಷ್ಟೇ ಅಲ್ಲದೇ ಇಡೀ ಭಾರತೀಯ ಸಿನಿರಂಗ ಸ್ಯಾಂಡಲ್‌ವುಡ್‌ನತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾವು ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಭರ್ಜರಿ ಕಲೆಕ್ಷನ್‌ನ್ನು ಕಂಡಿದೆ. ಕಾಂತಾರ ಸಿನಿಮಾವನ್ನು ನೋಡಿದ ಸಿನಿಪ್ರೇಕ್ಷಕರು ಇದರ ಮುಂದುವರೆದ ಭಾಗ ಬರಬೇಕೆಂದು ಹೇಳಿದರು. ಪ್ರೇಕ್ಷಕರ ಆಸೆಯಂತೆ ಕಾಂತಾರ ಸಿನಿಮಾದ ಪ್ರೀಕ್ವೆಲ್ ಸಿದ್ಧಗೊಳಿಸುವಂತೆ ನಟ, ನಿರ್ದೇಶಕ ಹೇಳಿಕೊಂಡಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹೊರಗಡೆ ಬಂದಿದೆ. ಅದೆನೆಂದರೆ ಆಗಸ್ಟ್ ತಿಂಗಳಲ್ಲಿ ಸಿನಿಮಾ ಮೂಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿ ಆಗಿದ್ದು, ಈ ವಿಷಯ ತಿಳಿದ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾವು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು,…
ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ‘ಗೃಹ ಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ.16 ಶುಕ್ರವಾರದಿಂದ ಆರಂಭಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ.16 ಶುಕ್ರವಾರದಿಂದ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಪ್ರಕ್ರಿಯೆ ವರ್ಷ ಪೂರ್ತಿ ನಿರಂತರವಾಗಿರುತ್ತದೆ’, ‘ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು. ‘ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆ ಆಧಾರ್ ಕಾರ್ಡ್, ಪತಿ ಆಧಾರ್ ಕಾರ್ಡ್ ಮಾಹಿತಿ ನೀಡಬೇಕು’ ಎಂದು ಅವರು ತಿಳಿಸಿದರು. ಗೃಹಲಕ್ಷ್ಮೀ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ…