ಕರಾವಳಿ ಟಾಪ್ ನ್ಯೂಸ್ ಈಜಲು ಹೋದ ಇಬ್ಬರು ಯುವಕರು ನೀರುಪಾಲು! – ಮರವೂರು ಫಲ್ಗುಣಿ ನದಿಯಲ್ಲಿ ಘಟನೆ: ಶೋಧ ಕಾರ್ಯ * ವಿಟ್ಲ: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಯ ಅಂಗಡಿಗೆ ಬೆಂಕಿ! * ಮೂಡುಬಿದಿರೆ:ರಸ್ತೆ ಹೊಂಡಗಳಿಗೆ ಬಾಳೆಗಿಡ ನೆಟ್ಟು ಆಕ್ರೋಶ! * ಕೈಕಂಬ:ಸ್ಕೂಟರ್ ಸೀಟ್ ಕೆಳಗಡೆ ಹಾವು,ಬೆರಳಿಗೆ ಕಚ್ಚಿತು! * ಸುಳ್ಯ:ಬೈಕ್ ಮೇಲೆ ಜಿಗಿದ ಕಡವೆ, ಸವಾರನಿಗೆ ಗಾಯ NAMMUR EXPRESS NEWS ಮಂಗಳೂರು: ಈಜಲು ತೆರಳಿದ್ದ ಇಬ್ಬರು ಯುವಕರು ಮರವೂರು ಫಲ್ಗುಣಿ ನದಿಯಲ್ಲಿ ನೀರುಪಾಲಾದ ಘಟನೆ ಭಾನುವಾರ ಸಂಭವಿಸಿದೆ. ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿಯ ಫಲ್ಗುಣಿ ನದಿಯಲ್ಲಿ ನಾಲ್ವರು ಯುವಕರು ಭಾನುವಾರ ಸಾಯಂಕಾಲ 4 ಗಂಟೆಗೆ ಈಜಲು ತೆರಳಿದ್ದರು. ಈ ವೇಳೆ ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೋಡಿಕಲ್ ನಿವಾಸಿಗಳಾದ ಅರುಣ್(19) ಹಾಗೂ ದೀಕ್ಷಿತ್(18) ಈಜಿ ಪಾರಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ…
Author: Nammur Express Admin
ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ! * ಮಾಂಸ, ಮದ್ಯ ಮಾರಾಟ ನಿಷೇಧ: ಜನರಿಗೆ ಗೊಂದಲ * ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ವಿನಂತಿ! NAMMUR EXPRESS NEWS ಬೆಂಗಳೂರು: ಮಹಾಲಯ ಅಮಾವಾಸ್ಯೆ ಪಿತೃಪಕ್ಷ ಪೂಜೆ ದಿನ ಈ ಬಾರಿ ಅಕ್ಟೋಬರ್ 2 ರಂದು ಬಂದಿದೆ. ಆ ದಿನ ಮಾಂಸ ಹಾಗೂ ಮದ್ಯ ಮಾರಾಟ ನಿಷೇಧವಿರಲಿದ್ದು, ಹಿರಿಯರ ಪೂಜೆ ಮಾಡುವವರಿಗೆ ಚಿಂತೆ ಆರಂಭವಾಗಿದೆ. ಈ ಹಿನ್ನೆಲೆ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ (ಪಿತೃ ಪಕ್ಷ) ಹಬ್ಬ ನಿಗದಿಯಾಗಿರುವುದರಿಂದ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಆ ದಿನ ದೈವಾಧೀನರಾಗಿರುವವರಿಗೆ ಮಾಂಸ ಖಾದ್ಯಗಳನ್ನು ಎಡೆ ಇಟ್ಟು ಪೂಜಿಸಲಾಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಗಾಂಧಿ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಸಿಎಂ, ನಗರಾಭಿವೃದ್ಧಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರಿಗೆ…
ಬಣ್ಣ ಬಣ್ಣದ ಆಹಾರ ಬೆಂಕಿ ಇಲ್ಲದೆ ತಯಾರಾಯ್ತು! – ಬ್ರಹ್ಮಾವರ ವಿದ್ಯಾಲಕ್ಷ್ಮೀ ಕಾಲೇಜಲ್ಲಿ ವಿದ್ಯಾರ್ಥಿಗಳ ಕೈಚಳಕ – ನೈಸರ್ಗಿಕವಾಗಿ ದೊರೆಯುವ ಬಣ್ಣ ಬಳಸಿ ವರ್ಣ ರಂಜಿತ ಆಹಾರ ತಯಾರಿ NAMMUR EXPRESS NEWS ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಆಹಾರ ತಂತ್ರಜ್ಞಾನ ವಿಭಾಗದಿಂದ ನಿಸರ್ಗದತ್ತವಾಗಿ ದೊರೆಯುವ ಬಣ್ಣವನ್ನು ಬಳಸಿ ಅಂದರೆ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ಹೊಸ ಬಗೆಯ ವರ್ಣರಂಜಿತ ಆಹಾರ ಪದಾರ್ಥಗಳನ್ನು ಬೆಂಕಿ ಇಲ್ಲದೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಭಿನ್ನ ಆಹಾರ ತಯಾರಿಕೆ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು. ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಹಾನಿಕಾರಕ ಬಣ್ಣವನ್ನು ಬಳಸದೆ ಸಹಜವಾಗಿ ಸಿಗುವ ಬಣ್ಣಗಳಿಂದ ಹೊಸ ಬಗೆಯ ಪಾನೀಯ, ತಿಂಡಿ ತಿನಿಸುಗಳನ್ನು ತಯಾರಿಸಿ ಅದರ ಮಹತ್ವವನ್ನು ತಿಳಿಸಿದರು. ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಮಣ್ಯ , ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ ಹಾಗೂ ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಉಪನ್ಯಾಸಕರಾದ ರೋಹನ್, ನಿತಿನ್,ಮನೋಜ್ , ಸವಿತಾ ವಿದ್ಯಾರ್ಥಿಗಳಿಗೆ…
ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಂದಕಕ್ಕೆ ಉರುಳಿದ ಲಾರಿ! * ದಿನೇ ದಿನೇ ಹೆಚ್ಚುತ್ತಿದೆ ರಸ್ತೆ ಅಪಘಾತ: ಡೇಂಜರ್ * ಎಲ್ಲಾ ರಸ್ತೆಗಳಲ್ಲಿ ಗುಂಡಿ – ಗುಂಡಿ: ಪ್ರಯಾಣಿಕರ ಪರದಾಟ NAMMUR EXPRESS NEWS ಬಾಳೆಹೊನ್ನೂರು: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಬಾಳೆಹೊನ್ನೂರು – ಚಿಕ್ಕಮಗಳೂರು ರಸ್ತೆಯ ಎಲೆಕಲ್ಲು ಮೀಸಲು ಅರಣ್ಯದ ಮುಖ್ಯರಸ್ತೆಯಲ್ಲಿ ನಡೆದಿದೆ. ರಸಗೊಬ್ಬರ ತುಂಬಿಕೊಂಡು ಬಾಳೆಹೊನ್ನೂರು ಕಡೆಗೆ ಬರುತ್ತಿದ್ದ ಲಾರಿ ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ರಸ್ತೆಯಲ್ಲಿ ಕಳೆದ ವಾರವು ಕೂಡ ತರಕಾರಿ ತುಂಬಿದ ಪಿಕ್ಅಪ್ ವಾಹನವೊಂದು ರಸ್ತೆ ಪಕ್ಕದ ಕಂದಕಕ್ಕೆ ಉರುಳಿತ್ತು. ಈ ರಸ್ತೆ ಮಾತ್ರವಲ್ಲದೇ ಕ್ಷೇತ್ರದ ಎಲ್ಲಾ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ದಿನೇ ದಿನೇ ಇಂತಹ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಯಾಣಿಕರು,ವಾಹನ ಚಾಲಕರು ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ತುಂಬಾ ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧಪಟ್ಟ…
ಚಿನ್ನದ ಬೆಲೆ ಗಗನದತ್ತ: ಜನರಿಗೆ ಶಾಕ್! – ಚಿನ್ನದ ಬೆಲೆಯಲ್ಲಿ ಹೊಸ ಹೊಸ ಮೈಲಿಗಲ್ಲು – ಬೆಳ್ಳಿ ಬೆಲೆಯೂ ಕೂಡ ದಾಖಲೆ ಮಟ್ಟಕ್ಕೆ ಏರಿಕೆ NAMMUR EXPRESS NEWS ಹಬ್ಬದ ಋುತುವಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರುಮುಖಿಯಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಆಭರಣ ಚಿನ್ನ ಹತ್ತು ಗ್ರಾಂಗೆ 77,000 ರೂ. ದಾಟಲಿದ್ದು, ಬೆಳ್ಳಿ ಕೆ.ಜಿಗೆ ಒಂದು ಲಕ್ಷ ರೂ. ದಾಟಲಿದೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ ಚಿನ್ನದ ದರವು ಹತ್ತು ಗ್ರಾಂಗೆ 72,220 (ಗ್ರಾಂಗೆ 7.220 ರೂ.) ಹಾಗೂ 24 ಕ್ಯಾರಟ್ ಚಿನ್ನ ಹತ್ತು ಗ್ರಾಂಗೆ 78,050 (ಒಂದು ಗ್ರಾಂಗೆ 7,805), ಬೆಳ್ಳಿ ಕೆ.ಜಿಗೆ 93,100 ರೂ. ತಲುಪಿದೆ. ಕಳೆದ ಜುಲೈನಲ್ಲಿ ಕೇಂದ್ರ ಸರಕಾರವು ಅಬಕಾರಿ ಸುಂಕ ಇಳಿಸಿದ ಬಳಿಕ ಖರೀದಿ ಭರಾಟೆ ಜೋರಾಗಿದೆ. ಅದರ ಜತೆಗೆ ಈ ಸಲ ಮುಂಗಾರು ಉತ್ತಮವಾಗಿರುವ ಕಾರಣ ಹಬ್ಬದ ಋುತುವಿನಲ್ಲಿ ಆಭರಣ ಖರೀದಿ ಜೋರಾಗುವ ನಿರೀಕ್ಷೆ ಇದೆ.…
ಪಿತೃಪಕ್ಷ ಮುಗಿಸಿ ಹೊರಟ ಬೈಕ್ ಸವಾರ ಸೇರಿದ್ದು ಜವರಾಯನ ಊರು..!!! * ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ * ಬೈಕ್ ಸವಾರ ಸ್ಥಳದಲ್ಲೇ ಸಾವು NAMMUR EXPRESS NEWS ಹರಿಹರಪುರ/ ನಿಲುವಾಗಿಲು : ಕೊಪ್ಪ ತಾಲೂಕಿನ ನಿಲುವಾಗಿಲಿನಲ್ಲಿ ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದ್ದು,ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ ಮೂಲದ ಸೊನ್ಲೆ ನಿವಾಸಿ ಪ್ರವೀಣ್ ಮೃತ ದುರ್ದೈವಿ. ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಮಾಗೋಡಿನ ತನ್ನ ಭಾವನ ಮನೆಯಲ್ಲಿ ಪಿತೃಪಕ್ಷ ಕಾರ್ಯಕ್ರಮ ಮುಗಿಸಿ ಸಾಗರದ ಸ್ವಗ್ರಾಮಕ್ಕೆ ಹಿಂತಿರುಗುವಾಗ ನಿಲುವಾಗಿಲಿನಲ್ಲಿ ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡೆವೆ ಅಪಘಾತ ಸಂಭವಿಸಿದೆ.ಸ್ಥಳೀಯರು ತಕ್ಷಣವೇ ಪ್ರವೀಣ್‌ನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆದರೆ ಸ್ಥಳದಲ್ಲೇ ಬೈಕ್ ಸವಾರ ಪ್ರವೀಣ್‌ನ ಸಾವು ಸಂಭವಿಸಿತ್ತು.
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ತಾಳ್ಮೆ ಕಡಿಮೆಯಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಮಕ್ಕಳ ಆರೋಗ್ಯ ಸುಧಾರಿಸಲಿದೆ. ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಕಟ್ಟಡದ ನಿರ್ವಹಣೆ ಮತ್ತು ಅಲಂಕಾರದ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ** ವೃಷಭ ರಾಶಿ : ಇಂದು ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಬಟ್ಟೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಅಧಿಕ ಖರ್ಚು ಇರುತ್ತದೆ. ಮಕ್ಕಳು ಬಳಲಬಹುದು. ಖರ್ಚು ಕೂಡ ಹೆಚ್ಚಾಗಲಿದೆ. ಪ್ರವಾಸಕ್ಕೆ ಹೋಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸಹೋದರ ಸಹೋದರಿಯರ ಸಹಕಾರದಿಂದ ವ್ಯಾಪಾರ ವಿಸ್ತರಣೆಯಾಗಲಿದೆ…
ಪೆನ್ ಡ್ರೈವ್ ಹಂಚಿಕೆ: ಪ್ರೀತಂ ಗೌಡ ವಿರುದ್ಧ ತನಿಖೆ ಮುಂದೂಡಿಕೆ – ತನಿಖೆ ಮುಂದುವರೆಯಲಿ: ಅ. 24ಕ್ಕೆ ವಿಚಾರಣೆ ಮುಂದಕ್ಕೆ ಹಾಕಿದ ಹೈಕೋರ್ಟ್ – ಹೊಳೆನರಸೀಪುರ: ಪೊಲೀಸ್ ಕಟ್ಟಡದ 4ನೇ ಮಹಡಿಯಿಂದ ಜಿಗಿದ ವ್ಯಕ್ತಿ ಸಾವು: ಸಂಶಯ – ಆಲೂರು: ಕಾರು ಬೈಕ್ ಅಪಘಾತಕ್ಕೆ ಯುವಕ ಬಲಿ! NAMMUR EXPRESS NEWS ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಆರೋಪಕ್ಕೆ ಸಂಬಂಧಿಸಿದ ಪೆನ್ ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದಡಿ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ಮುಂದುವರಿಯಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ‘ನನ್ನ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಪ್ರೀತಂ ಗೌಡ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಈ ಕುರಿತಂತೆ ಆದೇಶಿಸಿದ್ದಾರೆ.…
ಆಗುಂಬೆ ಸುರಂಗ ಮಾರ್ಗ ಕೆಲಸ ಶುರು ಆಗುತ್ತಾ..? – ಸುರಂಗ ಮಾರ್ಗ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ – ಮಲೆನಾಡು – ಕರಾವಳಿ ಬೆಸೆಯುವ ಮಾರ್ಗ NAMMUR EXPRESS NEWS ತೀರ್ಥಹಳ್ಳಿ/ಹೆಬ್ರಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ-169 ಎ ಚತುಷ್ಪಥ ಯೋಜನೆಯಲ್ಲಿ ಆಗುಂಬೆ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತೆಯ ಕುರಿತಂತೆ ವರದಿ ಸಲ್ಲಿಸಲು, ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಯೋಜನೆ ಜಾರಿಗೆ ಇದೀಗ ಪ್ಲಾನ್ ಆಗುವ ಸಾಧ್ಯತೆ ಇದೆ. ಆಗುಂಬೆ ಘಾಟ್ ರಸ್ತೆಗೆ ಪರ್ಯಾಯವಾಗಿ, ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗಮಾರ್ಗದ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಯೋಜನೆ ಅನುಷ್ಠಾನದ ಸಾಧ್ಯಾಸಾಧ್ಯತೆಗಳ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ಜನರಲ್…
ಬಿಗ್ ಬಾಸ್ ಮನೆಗೆ ಪುತ್ತೂರಿನ ಧನರಾಜ್ ಆಚಾರ್ಯ ಎಂಟ್ರಿ! – ತಮ್ಮ ವಿಭಿನ್ನ ವಿಡಿಯೋ ಮೂಲಕ ಫೇಮಸ್ ಆಗಿದ್ದ ಧನರಾಜ್ – ಕುಂದಾಪುರದ ಚೈತ್ರಾ ಕೂಡ ಬಿಗ್ ಬಾಸ್ ಮನೆಗೆ NAMMUR EXPRESS NEWS ಪುತ್ತೂರು/ಕುಂದಾಪುರ: ವೈರಲ್ ವಿಡಿಯೋಗಳ ಮೂಲಕ ಜನರ ಮನೆ ಮಾತಾಗಿದ್ದ, ಪುತ್ತೂರಿನ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಇವರಲ್ಲದೆ ಕುಂದಾಪುರದ ಚೈತ್ರಾ ಕೂಡ ಪ್ರವೇಶಿಸಿದ್ದಾರೆ. ಧನರಾಜ್ ಅನೇಕ ವಾಹಿನಿಗಳ ಕಾರ್ಯಕ್ರಮ, ಸಿನಿಮಾದಲ್ಲೂ ನಟಿಸಿದ್ದಾರೆ. ತಮ್ಮ ವಿಭಿನ್ನ ವಿಡಿಯೋ ಮೂಲಕ ಧನರಾಜ್ ಗಮನ ಸೆಳೆದಿದ್ದರು., ಕಳೆದ ಸೀಸನ್ ನಲ್ಲಿ ದಕ್ಷಿಣ ಕನ್ನಡದ ಖ್ಯಾತ ನಟ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದು ಈಗ ಧನ್ ರಾಜ್ ಆಚಾರ್ಯ ಮೇಲೆ ಕರಾವಳಿಯಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಬಿಗ್ ಬಾಸ್’ ಮನೆಗೆ ಚೈತ್ರಾ ಕುಂದಾಪುರ! ಬಿಜೆಪಿ ಫೈರ್ ಬ್ರಾಂಡ್ ಹಾಗೂ ತಮ್ಮ ಭಾಷಣದ ಮೂಲಕ ಗಮನ ಸೆಳೆದು ಅಕ್ರಮ ಹಣ ಕೇಸಲ್ಲಿ ಸಿಕ್ಕಿ ಬಿದ್ದಿದ್ದ ಚೈತ್ರಾ ಕೂಡ ಬಿಗ್…