Categories
ಚಿಕ್ಕಮಗಳೂರು

ಪಿತೃಪಕ್ಷ ಮುಗಿಸಿ ಹೊರಟ ಬೈಕ್ ಸವಾರ ಸೇರಿದ್ದು ಜವರಾಯನ ಊರು..!!!

ಪಿತೃಪಕ್ಷ ಮುಗಿಸಿ ಹೊರಟ ಬೈಕ್ ಸವಾರ ಸೇರಿದ್ದು ಜವರಾಯನ ಊರು..!!!
* ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ
* ಬೈಕ್ ಸವಾರ ಸ್ಥಳದಲ್ಲೇ ಸಾವು

NAMMUR EXPRESS NEWS
ಹರಿಹರಪುರ/ ನಿಲುವಾಗಿಲು : ಕೊಪ್ಪ ತಾಲೂಕಿನ ನಿಲುವಾಗಿಲಿನಲ್ಲಿ ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದ್ದು,ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಗರ ಮೂಲದ ಸೊನ್ಲೆ ನಿವಾಸಿ ಪ್ರವೀಣ್ ಮೃತ ದುರ್ದೈವಿ. ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಮಾಗೋಡಿನ ತನ್ನ ಭಾವನ ಮನೆಯಲ್ಲಿ ಪಿತೃಪಕ್ಷ ಕಾರ್ಯಕ್ರಮ ಮುಗಿಸಿ ಸಾಗರದ ಸ್ವಗ್ರಾಮಕ್ಕೆ ಹಿಂತಿರುಗುವಾಗ ನಿಲುವಾಗಿಲಿನಲ್ಲಿ ಸರ್ಕಾರಿ ಆಂಬುಲೈನ್ಸ್ ಹಾಗೂ ಬೈಕ್ ನಡೆವೆ ಅಪಘಾತ ಸಂಭವಿಸಿದೆ.ಸ್ಥಳೀಯರು ತಕ್ಷಣವೇ ಪ್ರವೀಣ್‌ನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆದರೆ ಸ್ಥಳದಲ್ಲೇ ಬೈಕ್ ಸವಾರ ಪ್ರವೀಣ್‌ನ ಸಾವು ಸಂಭವಿಸಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.