Categories
ಕರಾವಳಿ

ಬಿಗ್ ಬಾಸ್ ಮನೆಗೆ ಪುತ್ತೂರಿನ ಧನರಾಜ್‌ ಆಚಾರ್ಯ ಎಂಟ್ರಿ!

ಬಿಗ್ ಬಾಸ್ ಮನೆಗೆ ಪುತ್ತೂರಿನ ಧನರಾಜ್‌ ಆಚಾರ್ಯ ಎಂಟ್ರಿ!
– ತಮ್ಮ ವಿಭಿನ್ನ ವಿಡಿಯೋ ಮೂಲಕ ಫೇಮಸ್ ಆಗಿದ್ದ ಧನರಾಜ್
– ಕುಂದಾಪುರದ ಚೈತ್ರಾ ಕೂಡ ಬಿಗ್ ಬಾಸ್ ಮನೆಗೆ

NAMMUR EXPRESS NEWS
ಪುತ್ತೂರು/ಕುಂದಾಪುರ: ವೈರಲ್ ವಿಡಿಯೋಗಳ ಮೂಲಕ ಜನರ ಮನೆ ಮಾತಾಗಿದ್ದ, ಪುತ್ತೂರಿನ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಇವರಲ್ಲದೆ ಕುಂದಾಪುರದ ಚೈತ್ರಾ ಕೂಡ ಪ್ರವೇಶಿಸಿದ್ದಾರೆ.
ಧನರಾಜ್ ಅನೇಕ ವಾಹಿನಿಗಳ ಕಾರ್ಯಕ್ರಮ, ಸಿನಿಮಾದಲ್ಲೂ ನಟಿಸಿದ್ದಾರೆ. ತಮ್ಮ ವಿಭಿನ್ನ ವಿಡಿಯೋ ಮೂಲಕ ಧನರಾಜ್ ಗಮನ ಸೆಳೆದಿದ್ದರು., ಕಳೆದ ಸೀಸನ್ ನಲ್ಲಿ ದಕ್ಷಿಣ ಕನ್ನಡದ ಖ್ಯಾತ ನಟ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದು ಈಗ ಧನ್ ರಾಜ್ ಆಚಾರ್ಯ ಮೇಲೆ ಕರಾವಳಿಯಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿದೆ.

 


ಬಿಗ್ ಬಾಸ್’ ಮನೆಗೆ ಚೈತ್ರಾ ಕುಂದಾಪುರ!

ಬಿಜೆಪಿ ಫೈರ್ ಬ್ರಾಂಡ್ ಹಾಗೂ ತಮ್ಮ ಭಾಷಣದ ಮೂಲಕ ಗಮನ ಸೆಳೆದು ಅಕ್ರಮ ಹಣ ಕೇಸಲ್ಲಿ ಸಿಕ್ಕಿ ಬಿದ್ದಿದ್ದ ಚೈತ್ರಾ ಕೂಡ ಬಿಗ್ ಬಾಸ್ ಮನೆ ಸೇರಿದ್ದಾರೆ. ತುಂಬಾ ಮೇಲಕ್ಕೂ ಹೋಗಿದ್ದೀನಿ. ಕೆಳಕ್ಕೂ ಬಿದ್ದಿದ್ದೀನಿ. ಕೇಸ್, ಕೋರ್ಟ್‌, ಕಾನೂನು ಎಲ್ಲವನ್ನೂ ಎದುರಿಸುತ್ತಿದ್ದೇನೆ. ಆದರೆ ಇವೆಲ್ಲವೂ ನನ್ನನ್ನು ಕುಗ್ಗಿಸುವುದಿಲ್ಲ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.