ಆಧಾರ್, ಪ್ಯಾನ್ ಕಾರ್ಡ್ ಕೊಡುವ ಮುನ್ನ ಎಚ್ಚರ.!
– ನಿಮ್ಮ ದಾಖಲೆ ಇಟ್ಟುಕೊಂಡು ಸೈಬರ್ ವಂಚನೆ
– ಬೆಂಗಳೂರಲ್ಲಿ ಖತರ್ ನಾಕ್ ಗ್ಯಾಂಗ್ ಅರೆಸ್ಟ್
NAMMUR EXPRESS NEWS
ಬೆಂಗಳೂರು: ವಿವಿಧ ಸೇವಾ ಯೋಜನೆಗಳು, ಸೌಲಭ್ಯಗಳನ್ನು ಪಡೆಯೋದಕ್ಕೆ ಆಧಾರ್, ಪ್ಯಾನ್ ಕೊಡೋದು ಮಾಮೂಲಿ.
ಕಂಡ ಕಂಡಲ್ಲಿ ಆಧಾರ್, ಪ್ಯಾನ್ ಕಾರ್ಡ್ ಕೊಡುವ ಮುನ್ನ ಒಮ್ಮೆ ಯೋಚಿಸಿ. ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಮಾಯಕರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆಗೆ ಬಳಸುತ್ತಿದ್ದ ಅಂತರರಾಜ್ಯ (ಕರ್ನಾಟಕ & ಕೇರಳ) ಜಾಲದ ಪತ್ತೆ, 06 ಜನರ ಬಂಧಿಸಿದ್ದಾರೆ. ಬೆಂಗಳೂರು ನಗರ, ಸೈಬರ್ ಕೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೈಬರ್ ವಂಚನೆಯ ಉದ್ದೇಶಕ್ಕಾಗಿ ಬೇನಾಮಿ ಖಾತೆಗಳನ್ನು ತೆರೆಯುತ್ತಿದ್ದ ಅಂತರರಾಜ ವಂಚಕರ ಜಾಲವನ್ನು ಭೇಧಿಸಿ 06 ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.
ಈ ವಂಚಕರ ತಂಡವು ಅಮಾಯಕ ಜನರನ್ನು ನಂಬಿಸಿ ಅವರಿಂದ ಗುರುತಿನ ದಾಖಲಾತಿಗಳನ್ನು ಪಡೆದು ಅವರ ಹೆಸರಿನಲ್ಲಿ ಬೇರೆ ಬೇರೆ ಬಾಂಕ್ಗಳಲ್ಲಿ ಬೇನಾಮಿ ಖಾತೆಗಳನ್ನು ತೆರೆದು ಸದರಿ ಖಾತೆಗಳನ್ನು ಸೈಬರ್ ವಂಚಕರಿಗೆ ಒದಗಿಸುವ ದುಷ್ಕೃತ್ಯವನ್ನು ಎಸಗುತ್ತಿದ್ದರು. ಅಷ್ಟೇ ಅಲ್ಲದೆ ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕ ಜನರಿಗೆ ವಂಚಿಸಿ ಸಂಗ್ರಹಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿಕೊಂಡು ಅದನ್ನು ನಗದು ರೂಪಕ್ಕೆ ಪರಿವರ್ತಿಸಿ, ವಂಚಕರಿಗೆ ತಲುಪಿಸುತ್ತಿದ್ದರು.
ಈ ಪ್ರಕರಣದ ತನಿಖಾ ಕಾಲದಲ್ಲಿ ಆರೋಪಿಗಳು ಅಮಾಯಕರ ಹೆಸರಿನಲ್ಲಿ ಬೇನಾಮಿಯಾಗಿ ತೆರೆದಿದ 126 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಸದರಿ ಬ್ಯಾಂಕ್ ಖಾತೆಗಳ ಮುಖಾಂತರ ಸೈಬರ್ ವಂಚನೆ ಆಗಿರುವ ಬಗ್ಗೆ ಬೆಂಗಳೂರು ನಗರ ಸೇರಿದಂತೆ, ಭಾರತದಾದ್ಯಂತ ಒಟ್ಟು 75 ಸೈಬರ್ ವಂಚನೆ ಪ್ರಕರಣಗಳು ತನಿಖೆಯಿಂದ ಬೆಳಕಿಗೆ ಬಂದಿರುತ್ತವೆ ನೀವು ಇನ್ಮುಂದೆ ಎಲ್ಲೆಂದರಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಕೊಡೋ ಮುನ್ನ ಎಚ್ಚರಿಕೆ ವಹಿಸೋ ಅಗತ್ಯವಿದೆ. ಒಂದು ವೇಳೆ ಯಾರ್ ಯಾರಿಗೋ ನಿಮ್ಮ ದಾಖಲೆಗಳನ್ನು ಕೊಟ್ರೆ, ಖಂಡಿತವಾಗಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ. ಹೀಗಾಗಿ ಎಚ್ಚರಿಕೆ ವಹಿಸೋದು ಮರೆಯಬೇಡಿ.