ರಾಜಧಾನಿಯಲ್ಲಿ ಕಂಬಳದ ಸಂಭ್ರಮಕ್ಕೆ ಸಜ್ಜು!
– ಅರಮನೆ ಮೈದಾನದಲ್ಲಿ ನಡೆಯಲಿದೆ ಕಂಬಳ
– ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಮಿತಿ: ಕರಾವಳಿಗರಿಗೆ ಸಿಹಿ ಸುದ್ದಿ
NAMMUR EXPRESS NEWS
ರಾಜ್ಯದ ಇತಿಹಾಸದಲ್ಲೇ ಮೊದಲು ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆದಿದೆ. ಅಚ್ಚರಿ ಎಂದರೆ ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ ಅಂಗವಾಗಿ ಈ ಕಂಬಳ ನಡೆಯಲಿದ್ದು, ರೈಲಿನಲ್ಲಿ ಕೋಣಗಳು ಬರಲಿವೆ. ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಸ್ಥಳವನ್ನು ಪರಿಶೀಲನೆ ಕೂಡ ನಡೆಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ ಎನ್ನಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯ!
ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಕಂಬಳ ನಡೆಯುವ ಅರಮನೆ ಮೈದಾನದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.
ಕರಾವಳಿಯ ಸಂಭ್ರಮದ ಕ್ರೀಡೆ
ಕಂಬಳ ಕರಾವಳಿಯ ಸಂಭ್ರಮದ ಕ್ರೀಡೆ. ಇಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಸಡಗರ. ಈಗ ರಾಜಧಾನಿಯಲ್ಲಿ ಇರುವ ಲಕ್ಷ ಲಕ್ಷ ಮಂದಿ ಕರಾವಳಿಗರಿಗೆ ಇದೊಂದು ಹಬ್ಬ ಆಗಲಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023