ಡೆವಿಲ್’ ಸಿನಿಮಾದಲ್ಲಿ ಹುಲಿ ಕಾರ್ತಿಕ್!
– ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ
– ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಸಕತ್ ಕಾಮಿಡಿ ಕಲಾವಿದ
ಸಿನಿಮಾ ಡೆಸ್ಕ್: ಅಮೃತಾ ಕೊಪ್ಪ
‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’, ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಹುಲಿ ಕಾರ್ತಿಕ್ ಡೆವಿಲ್ ಸಿನಿಮಾದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಕನ್ನಡದ ಕಾಮಿಡಿ ಕಲಾವಿದರ ಸ್ಥಾನಕ್ಕೆ ಮತ್ತೊಬ್ಬ ಕಲಾವಿದ ಸಿನಿಮಾದಲ್ಲಿ ಗಮನ ಸೆಳೆಯಲಿದ್ದಾರೆ.
‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’, ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಹುಲಿ ಕಾರ್ತಿಕ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ.
ಶ್ರೀ ಜೈಮಾತಾ ಕಂಬೈನ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹುಲಿ ಕಾರ್ತಿಕ್ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ ‘ದಿ ಡೆವಿಲ್’ ಮತ್ತೊಬ್ಬ ಪ್ರಮುಖ ಪೋಷಕ ಪಾತ್ರಧಾರಿ ಹುಲಿ ಕಾರ್ತಿಕ್’ ಎಂದು ಬರೆದುಕೊಂಡಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹುಡುಗ ಕಾರ್ತಿಕ್ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈಗ ಹುಲಿ ಕಾರ್ತಿಕ್ ಅವರಿಗೆ ಡೆವಿಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇನ್ನು ಈಗಾಗಲೇ ಹತ್ತಾರು ಸಿನಿಮಾ, ರಿಯಾಲಿಟಿ ಶೋನಲ್ಲಿ ಬ್ಯುಸಿ ಆಗಿರುವ ಕಾರ್ತಿಕ್ ಈಗ ಬಹುಬೇಡಿಕೆಯ ಕಾಮಿಡಿ ಕಲಾವಿದ ಕೂಡ. ಇನ್ನು ಹಲವು ಸಿನಿಮಾಗಳು ಇವರ ಕೈಯಲ್ಲಿವೆ.








