ಮಲೆನಾಡಿನಲ್ಲಿ ಕಾಂತಾರ-1 ಹವಾ..!
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಬಿದ ಪ್ರದರ್ಶನ
– ತೀರ್ಥಹಳ್ಳಿ, ಕೊಪ್ಪ, ಬಾಳೆಹೊನ್ನೂರಿನಲ್ಲಿ ಪ್ರದರ್ಶನ
NAMMUR EXPRESS NEWS
ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಿರುವ ಕಾಂತಾರ-1 ಸಿನಿಮಾ ಇದೀಗ ಎಲ್ಲೆಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ಇತ್ತ ಕರ್ನಾಟಕದಲ್ಲಿ ಸಿನಿಮಾ ಟ್ರೆಂಡ್ ಸೆಟ್ ಮಾಡಿದೆ.
ಮಲೆನಾಡಿನ ಅನೇಕ ಚಿತ್ರ ಮಂದಿರಗಳನ್ನು ಅನೇಕ ವರ್ಷಗಳ ನಂತರ ತುಂಬಿ ತುಳುಕುವಂತೆ ಮಾಡಿದ ಚಿತ್ರ ಕಾಂತಾರ ಬಳಿಕ ಕಾಂತಾರ-1 ಈಗ ಸದ್ದು ಮಾಡುತ್ತಿದೆ.
ಸಿನಿ ರಸಿಕರ ಕಾತುರವನ್ನು ಸುಮಾರು 2 ವರ್ಷಗಳ ಹಿಡಿದಿಟ್ಟಿದ್ದ ಈ ಚಿತ್ರವು ಮಲೆನಾಡಿನ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಮಲೆನಾಡಿನ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ.
ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರ
ಬೆಳಿಗ್ಗೆ 11:15, ಮಧ್ಯಾಹ್ನ 2:30, ಸಂಜೆ 6:30, ರಾತ್ರಿ 9:30
ಕೊಪ್ಪ ಜೆ.ಎಂ.ಜೆಯಲ್ಲಿ ಯಾವಾಗ ಪ್ರದರ್ಶನ?
ಕೊಪ್ಪದ ಜೆ.ಎಮ್.ಜೆಯಲ್ಲಿ ಪ್ರದರ್ಶನ ಸಮಯ
ಪ್ರತಿದಿನ ಮಧ್ಯಾಹ್ನ 1:30, 4:30, ಸಂಜೆ 7:30
ಪ್ರತಿ ಭಾನುವಾರ ಬೆಳಿಗ್ಗೆ 10:30 ಕ್ಕೆ ಮಾರ್ನಿಂಗ್ ಶೋ
ಬಾಲ್ಕನಿ 140 ರೂ. ಫಸ್ಟ್ ಕ್ಲಾಸ್ 80 ರೂ. ಮೂರು ವರ್ಷ ಮೇಲ್ಪಟ್ಟವರಿಗೆ ಪೂರ್ತಿ ಚಾರ್ಜ್ ಇರುತ್ತದೆ.
ಬಾಳೆಹೊನ್ನೂರು ಸುದರ್ಶಿನಿಯಲ್ಲಿ ಯಾವಾಗ ಪ್ರದರ್ಶನ?
ಬಾಳೆಹೊನ್ನೂರು ಸುದರ್ಶಿನಿಯಲ್ಲಿ ಪ್ರದರ್ಶನ ಸಮಯ
ಪ್ರತಿದಿನ 11.00, 2.00, 6:00, 9.00
ಬಾಲ್ಕನಿ 200 ರೂ. ಫಸ್ಟ್ ಕ್ಲಾಸ್ 150 ರೂ
ಮೂರು ವರ್ಷ ಮೇಲ್ಪಟ್ಟವರಿಗೆ ಪೂರ್ತಿ ಚಾರ್ಜ್ ಇರುತ್ತದೆ.
ಪ್ರತಿ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಪ್ರದರ್ಶನ ಇರುತ್ತದೆ..








