ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!
– ವಾಟ್ಸಾಪ್ ಅಲ್ಲಿ ಶೇರ್ ಆಗುತ್ತಿದೆ ಸುಳ್ಳು ಮೆಸೇಜ್
– ಯಾಮಾರಿದ್ರೆ ಹೋಗುತ್ತೆ ನಿಮ್ಮ ದುಡ್ಡು
– ಎಚ್ಚರ ಇಂತಹ ಸುಳ್ಳು ಮಾಹಿತಿಗೆ ಕಿವಿಗೋಡಬೇಡಿ!
NAMMUR EXPRESS NEWS
ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಜಿಯೋ ಕಂಪನಿಯ ಮಾಲೀಕರಾದ ಅಂಬಾನಿಯವರ ಹುಟ್ಟುಹಬ್ಬದ ನಿಮಿತ್ತ ಜಿಯೋ ಕಂಪನಿಯು ಎಲ್ಲಾ ಭಾರತದ ಬಳಕೆದಾರರಿಗೆ 28 ದಿನಗಳ ಪ್ರಿ ರಿಚಾರ್ಜ್ ಆಫರ್ ನೀಡಿದ್ದಾರೆ. ಅದನ್ನು ಪಡೆಯಲು ಮೇಸೆಟ್ನಲ್ಲ ಕಂಡ ಲಿಂಕನ್ನು ಕ್ಲಿಕ್ ಮಾಡಿ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ನೈಜವಾದ ಮಾಹಿತಿಯಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಪೋಲಿಸ್ ಇಲಾಖೆ ಜನರಲ್ಲಿ ಮನವಿ ಮಾಡಿದೆ.
ಇಂಗ್ಲೀಷ್ ಅಲ್ಲಿ ಮೆಸೇಜ್ ಇರುತ್ತದೆ
AMBANI BIRTHDAY OFFER JIO COMPANY is giving 28 days free recharge of 239 to all Indian users to celebrate the birthday of its owner Mukesh Ambani. Recharge your number by clicking on the blue colored link below. myphoneoffer.com
ಎಂಬ ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದ್ದು ಯಾರೂ ಇಂತಹ ಮೆಸೇಜ್ ಸ್ಪಂದನೆ ನೀಡಬಾರದು ಎಂದು ಮನವಿ ಮಾಡಲಾಗಿದೆ. ಇದೊಂದು ಮೋಸಗಾರರ ಮೋಸದ ಜಾಲವಾಗಿದ್ದು, ನೀವು ಅಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅವರು
ಸದರಿ ಮೇಸೆಯನ್ನು 10 ಜನರಿಗೆ ಪಾರ್ವರ್ಡ್ ಮಾಡಲು ತಿಳಿಸಿ ನಂತರ ಒಂದು ಆಪ್ನ್ನು ಇನ್ಸಾಲ್ ಮಾಡಲು
ತಿಳಿಸುತ್ತಾರೆ. ಅದರಿಂದ ನಿಮ್ಮ ಮಾಹಿತಿ ಹಾಗು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ತರದ ಮೋಸದ ಜಾಲದಿಂದ ಜಾಗೃತರಾಗಿರಿ.ಯಾವುದೇ ಯಾವುದೇ ಸೈಬರ್ ದೂರುಗಳಿಗೆ www.cybercrime.gov.in ಬೇಟಿ ನೀಡಿ ಅಥವಾ 1930 ಗೆ ಕರೆ ಮಾಡಿ.