ಶಿಕ್ಷಕರ ಸರ್ವೇ ಸಂಕಟ: ಕೇಳೋರ್ಯಾರು..?
– ತೀರ್ಥಹಳ್ಳಿಯಲ್ಲಿ ಶಿಕ್ಷಕರಿಂದ ತಹಸೀಲ್ದಾರ್ ಅವರಿಗೆ ಮನವಿ
-ಜಿ.ಎಸ್.ಟಿ. ದರ ಇಳಿಕೆ: ತೀರ್ಥಹಳ್ಳಿಯಲ್ಲೂ ಬಿಜೆಪಿ ಸಂಭ್ರಮ!
NAMMUR EXPRESS NEWS
ತೀರ್ಥಹಳ್ಳಿ: ಶಿಕ್ಷಕರಿಗೆ ಅನೇಕ ಕೆಲಸ ಒತ್ತಡ ನಡುವೆ ಇದೀಗ ಮತ್ತೆ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಗಣತಿದಾರರಾಗಿ ನಿಯೋಜಿಸಿದ್ದು, ಶಿಕ್ಷಕರಿಗೆ ಭಾರೀ ಒತ್ತಡ ಹೇರಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದು ತೀರ್ಥಹಳ್ಳಿಯಲ್ಲಿ ಶಿಕ್ಷಕರು ಶಿಕ್ಷಣ ಅಧಿಕಾರಿಗಳ ಕಚೇರಿಯಿಂದ ತಹಸೀಲ್ದಾರ್ ಕಚೇರಿ ಭೇಟಿ ನೀಡಿ ಮನವಿ ಸಲ್ಲಿಸಿದರು.
ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಏಕಕಾಲದಲ್ಲಿ ಬಿ ಎಲ್ ಓ ಅಧಿಕಾರಿಗಳಾಗಿ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿಗೆ ಗಣತಿ ದಾರರಾಗಿ ನಿಯೋಜಿಸಿದ ಕುರಿತು ತಾಲೂಕು ದಂಡಾಧಿಕಾರಿಗಳ ಬಳಿ ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ತಾಲೂಕು ದಂಡಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುಟ್ಟಪ್ಪನವರು ಹಾಗೂ ಜಿಲ್ಲಾ ಶಿಕ್ಷಕ ಸಂಘದ ಖಜಾಂಚಿಯಾದ ಶ್ರೀಯುತ ಮಂಜುನಾಥ್ ರವರು ತಾಲೂಕು ಶಿಕ್ಷಣ ಸಂಘದ ಕಾರ್ಯದರ್ಶಿಯಾದ ಲಕ್ಷ್ಮಣ್ ಅವರು ಪದಾಧಿಕಾರಿಗಳಾದ ಶ್ರೀಯುತ ಕೃಷ್ಣಮೂರ್ತಿ, ಆನಂದ ಕುಮಾರ್ ಹಾಗೂ ನೌಕರ ಸಂಘದ ಪದಾಧಿಕಾರಿಯಾದ ಶ್ರೀಯುತ ಮಂಜುನಾಥ್ ಕೆ ಆರ್ ಹಾಗೂ ಅನೇಕ ಶಿಕ್ಷಕ ಮಿತ್ರರು ಹಾಜರಿದ್ದರು.
ಜಿ.ಎಸ್.ಟಿ. ದರ ಇಳಿಕೆ: ತೀರ್ಥಹಳ್ಳಿಯಲ್ಲೂ ಬಿಜೆಪಿ ಸಂಭ್ರಮ!
ತೀರ್ಥಹಳ್ಳಿ: ನವರಾತ್ರಿಯ ಜೊತೆಜೊತೆಗೆ ರಾಷ್ಟ್ರದ ಪಾಲಿಗೆ ಐತಿಹಾಸಿಕ ದಿನ. ‘ನಾಗರೀಕ ದೇವೋಭವ’ ಎಂಬ ಅದ್ಭುತ ಘೋಷಣೆಯೊಂದಿಗೆ ಜಿ.ಎಸ್.ಟಿ. ದರಗಳನ್ನು ಎರಡು ಸ್ತರಕ್ಕೆ ಕಡಿತಗೊಳಿಸುವ ಕ್ರಾಂತಿಕಾರಕ ಹೆಜ್ಜೆ ಇಟ್ಟು ಜನಸಾಮಾನ್ಯರು, ಬಡವರು, ಮಹಿಳೆಯರು ಹಾಗೂ ರೈತರ ನಿತ್ಯ ಬದುಕಿನ ಹೊರೆ ಇಳಿಸಿದ ಕೇಂದ್ರ ಸರ್ಕಾರದ ನಡಯನ್ನು ತೀರ್ಥಹಳ್ಳಿಯಲ್ಲಿ ಸ್ವಾಗತಿಸಿ ಬಿಜೆಪಿ ವತಿಯಿಂದ ಸಂಭ್ರಮಿ ಸಲಾಯಿತು.
ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಜೊತೆ ತೀರ್ಥಹಳ್ಳಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಂಭ್ರಮಾಚರಣೆಯ ಮೂಲಕ ತಿಳಿಸಲಾಯಿತು.
ಇದೇ ವೇಳೆ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಮೋರ್ಚಾ ತೀರ್ಥಹಳ್ಳಿ ಮಂಡಲ ವತಿಯಿಂದ ‘ಮಾ ಕೀ ನಾಮ್ ಪೆ ಏಕ್ ಪೇಡ್’ ಕಾರ್ಯಕ್ರಮದ ಅಡಿಯಲ್ಲಿ ಕುಶಾವತಿ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಅಧ್ಯಕ್ಷರಾದ ಹೆದ್ದೂರು ನವೀನ್ ಸೇರಿ ಪ್ರಮುಖರು ಹಾಜರಿದ್ದರು.








