ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ ಶುರು!
– ಫೆ.17ರಿಂದ 25ರವರೆಗೆ ಜಾತ್ರೆ ಸಂಭ್ರಮ: ಅನ್ನ ಸಂತರ್ಪಣೆ
– ದೇವರಿಗೆ ವಿಶೇಷ ಅಲಂಕಾರ: ಅಮ್ಮನ ದರ್ಶನಕ್ಕೆ ಜನವೋ ಜನ
– ಗಮನ ಸೆಳೆದ ಗಾಂಧಿ ಚೌಕದಲ್ಲಿ ಚಾಮುಂಡೇಶ್ವರಿ ಪ್ರತಿಮೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಎರಡು ವರ್ಷಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೆ ಮಹೋತ್ಸವ ಶುರುವಾಗಿದೆ.
ಫೆಬ್ರವರಿ 17ರಿಂದ 25ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಸುಮಾರು 86 ಲಕ್ಷ ರೂಪಾಯಿಗಳ ಬಜೆಟ್ ಅಲ್ಲಿ ಜಾತ್ರೆ ನಡೆಯಲಿದ್ದು 9 ದಿನ ಅನ್ನ ಸಂತರ್ಪಣೆ ಇರಲಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಇನ್ನು ದೇವಸ್ಥಾನ ಅಲಂಕಾರ ಮಾಡಲಾಗಿದ್ದು ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಜಾತ್ರೆ ಸಾರಲಾಗುತ್ತಿದೆ.
ಯಾವತ್ತು ಏನೇನು…?
➡ ಫೆ.17ರ ಮಂಗಳವಾರ ಧಾರ್ಮಿಕ ಮಹಾಪೂಜೆ, ಮಹಾ ಮಂಗಳಾರತಿ, ದೇವಿದರ್ಶನ, ಅನ್ನ ಸಂತರ್ಪಣೆ, ಜಾತ್ರೆ ಸಾರುವುದಿದೆ.
➡ ಫೆ.18ರ ಬುಧವಾರ ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾ ಪೂಜೆ, ಮಹಾ ಮಂಗಳಾರತಿ 4 ಮತ್ತು ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ ಆಯೋಜಿಸಿದ್ದು, ಅದೇ ದಿನ ಸಂಜೆ ಸ್ಥಳೀಯ ಕಲಾವಿದರ ‘ನೃತ್ಯ ಸಂಗಮ ‘ತೀರ್ಥಹಳ್ಳಿಯ ಶ್ರೀ ಸುಮುಖ ಸಂಗೀತ ನೃತ್ಯ ಶಾಲೆ ತಂಡದಿಂದ ಹಾಗೂ ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರು ನಡೆಸಿಕೊಡಲಿದ್ದಾರೆ.
➡ ಫೆ.19 ರ ಗುರುವಾರ, ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ರಾತ್ರಿ: ರಂಗಪೂಜೆ ಇರಲಿದ್ದು, ಖ್ಯಾತ ಯಕ್ಷ ಕಲಾವಿದ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ‘ಸಂಪೂರ್ಣ ದೇವಿ ಮಹಾತ್” ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ.
➡ ಫೆ.20ರ ಶುಕ್ರವಾರ, ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಮತ್ತು ಅನ್ನ ಸಂತರ್ಪಣೆ ರಂಗಪೂಜೆ ಹಾಗೂ ಅದೇ ದಿನ ಸಂಜೆ ಶ್ರೀ ಗಣೇಶ ದೇಸಾಯಿ ಮತ್ತು ಶ್ರೀಮತಿ ಸುರೇಖ ಹೆಗಡೆ ನೇತೃತ್ವದಲ್ಲಿ “ಕಾವ್ಯ ಸಂಗೀತ ಕಲಾಕುಂಚ ” ಸುಶ್ರಾವ್ಯ ಸಂಗೀತ ಸಂಜೆ ಏರ್ಪಡಿಸಿದ್ದು ಬಣ್ಣದ ಚಿತ್ತಾರದ ಅನಾವರಣವನ್ನ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ನಿರ್ವಹಿಸಲಿದ್ದಾರೆ.
➡ ಫೆ.21ರ ಶನಿವಾರ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುಷಿ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ. ಈ ದಿನಸಂಜೆ ಸ್ಥಳೀಯ ಕಲಾವಿದರಾದ ಡ್ಯಾನ್ಸ್ ಪ್ಯಾಲೆಸ್ ಕೃ ರವರಿಂದ ಸಾಂಸ್ಕೃತಿಕ ಕಲರವ ಮತ್ತು ನೃತ್ಯ ವೈವಿದ್ಯ ಜರುಗಲಿದ್ದು, ಸ್ಥಳೀಯ ಗಾಯಕರಿಂದ ಸಂಗೀತ ಸುದೆ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲಿದ್ದಾರೆ.
➡ ಫೆ.22ರ ಭಾನುವಾರ,ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ, ಬೆಂಗಳೂರಿನ ಖ್ಯಾತ ಗಾಯಕ ಶ್ರೀ ರಾಜಗುರು ಹೊಸಕೋಟೆರವರ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಲಿದೆ.
➡ ಫೆ. 23ರ ಸೋಮವಾರ ಬೆಳಗ್ಗೆ ಕಲ್ಲೋಕ್ತ ಪೂಜೆ, ಸಹಸ್ರನಾಮ ಜಾತ್ರಾ ವಿಶೇಷ ಪೂಜೆ, ಮಧ್ಯಾಹ್ನ : ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಕಲರ್ಸ್ ಕನ್ನಡ ಖ್ಯಾಠಿತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ “ಗಾನ ಸಂಭ್ರಮ ಕಾರ್ಯಕ್ರಮ “ನಡೆಸಿಕೊಡಲಿದ್ದಾರೆ.
➡ ಫೆ.24ರ ಮಂಗಳವಾರ ಮಧ್ಯಾಹ್ನ ಜಾತ್ರಾ ವಿಶೇಷಪೂಜೆಗಳ ಜೊತೆಗೆ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಅಂದು * ರಾತ್ರಿ 8ಕ್ಕೆ ಎಣ್ಣೆ ಭಂಡಾರ ಪೂಜೆ ನಡೆಯಲಿದೆ.
86 ಲಕ್ಷ ರೂಪಾಯಿಗಳ ಬಜೆಟ್: ವಿಶೇಷ ಸೇವೆ
ಚಂಡಿಕಾ ಹೋಮ 500ರೂ., ಜಾತ್ರಾ ವಿಶೇಷ ಪೂಜೆ, 600ರೂ. ಸರ್ವಾಲಂಕಾರ ಸೇವೆ 1005ರೂ., ರಂಗಪೂಜೆ ಸೇವೆ 3505ರೂ, ಅನ್ನ ಸಂತರ್ಪಣೆ 5000, ಒಂದು ದಿನದ ವಿಶೇಷ ಪೂಜೆ 5005, ಮಹಾ ಅನ್ನ ಸಂತರ್ಪಣೆ 25000 ಹಾಗೂ ಒಂದು ದಿನದ ಸಂಪೂರ್ಣ ಅನ್ನ ಸಂತರ್ಪಣೆ 2500000 ರೂಗಳನ್ನು ನಿಗಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಧರ್ಮದರ್ಶಿಗಳಿಂದ ಸಮಸ್ತ ಭಕ್ತರಿಗೆ ಸ್ವಾಗತ
ಧರ್ಮದರ್ಶಿಗಳಾದ ಜಿ ಸತ್ಯನಾರಾಯಣ, ಮಂಜುನಾಥ ಶೆಟ್ಟಿ, ಕೆ.ಸಿ.ಚಂದ್ರಶೇಖರ್,ಟಿ.ಕೆ.ಜಯರಾಮ್ ಶೆಟ್ಟಿ, ಎ.ಎಸ್. ಧನಂಜಯ,ಎಂ.ಎ.ಪ್ರಭಾಕರ, ಎ. ಚಿದಾನಂದ, ಜಯಪ್ರಕಾಶಶೆಟ್ಟಿ, ಕೆ.ಜಯರಾಮ್ ಶೆಟ್ಟಿ ಬಾಳೇಬೈಲು ರಾಘವೇಂದ್ರ, ನಾಗಪ್ಪ ಆಚಾರ್, ಬಿ.ಆರ್. ರಾಘವೇಂದ್ರ ಶೆಟ್ಟಿ, ಸಂದೇಶ್ ಜವಳಿ, ಬಿ.ನಾಗರಾಜ್, ಟಿ.ಎನ್.ಅನಿಲ್,ಪ್ರಧಾನ ಅರ್ಚಕರಾದ ಲಕ್ಷ್ಮೀ ನರಸಿಂಹ ಐತಾಳ್ ರವರುಗಳು ಕ್ಷೇತ್ರ ಸಮಸ್ತ ಭಕ್ತರಿಗೆ ಸ್ವಾಗತ ಕೋರಿದ್ದಾರೆ.








