ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟ ಕಛೇರಿಗಳ ಉದ್ಘಾಟನೆ
– ಕೊಪ್ಪ, ಎನ್. ಆರ್. ಪುರ ತಾಲೂಕಲ್ಲಿ ಉದ್ಘಾಟನೆ
– ವಿಶ್ವನಾಥ ಗದ್ದೆಮನೆ ನೇತೃತ್ವದಲ್ಲಿ ರೈತ ಸೇವೆ
– ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದಿಂದ ಗೋಪಾಲ್ ಅಮಾನತು
– ಚಿಕ್ಕಮಗಳೂರು: ಬಿ.ಎಂ. ಸಂದೀಪ್ ಕೇರಳ ಚುನಾವಣೆಯ ಉಸ್ತುವಾರಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ಕಛೇರಿಗಳು ನರಸಿಂಹರಾಜಪುರ ಹಾಗೂ ಕೊಪ್ಪ ತಾಲ್ಲೂಕುಗಳಲ್ಲಿ ದಿನಾಂಕ 21 ಫೆಬ್ರವರಿ 2026ರ ಶನಿವಾರದಂದು ಬೆಳಿಗ್ಗೆ 10:೦೦ಗಂಟೆಗೆ ನರಸಿಂಹರಾಜಪುರದ ತಾಲ್ಲೂಕು ಕಛೇರಿ ಸಮೀಪದಲ್ಲಿರುವ, ರೈತ ಒಕ್ಕೂಟ ಕಛೇರಿಯ ಮುಂಭಾಗದಲ್ಲಿ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ಕ್ಷೇತ್ರ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಮತ್ತು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಶಾಲು ಬಿಡುಗಡೆ ಸಮಾರಂಭ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ರೈತ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಬಿ.ಎಂ. ಸಂದೀಪ್ ಕೇರಳ ಚುನಾವಣೆಯ ಉಸ್ತುವಾರಿ
ಚಿಕ್ಕಮಗಳೂರು: ಎಐಸಿಸಿ ಜನರಲ್ ಸೆಕ್ರೆಟರಿಯಾಗಿ, ಕೇರಳ ಚುನಾವಣೆಯ ಉಸ್ತುವಾರಿಯಾಗಿ ನೇಮಕವಾದ ಮಾರ್ಗದರ್ಶಿ ನಾಯಕರಾದ ಬಿ.ಎಂ. ಸಂದೀಪ್ ಆಯ್ಕೆ ಆಗಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಸಂದೀಪ್ ಅವರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸೇವೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ.
ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದಿಂದ ಗೋಪಾಲ್ ಅಮಾನತು
ಚಿಕ್ಕಮಗಳೂರು: ಹಿಂದೂ ಸಮಾಜೋತ್ಸವದಲ್ಲಿ ಭಾಗಿಯಾಗುವುದರ ಮೂಲಕ, ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕರಾದ ಶೃಂಗೇರಿಯ ಕೆ.ಎಂ.ಗೋಪಾಲ್ ಅವರನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕೆ.ಟಿ.ರಾಧಾಕೃಷ್ಣ ಅವರು “ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದ್ದಕ್ಕೆ ಗೋಪಾಲ್ ಅವರು ತಪ್ಪೊಪ್ಪಿಕೊಂಡಿದ್ದರೂ ಸಹ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಪಕ್ಷದ ರಾಜ್ಯ ಕಛೇರಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ನಿರ್ಧಾರ ಕೈಗೊಂಡು ಅವರನ್ನು ಅಮಾನತುಗೊಳಿಸಿದ್ದೇವೆ” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿ.ಎಂ. ಸಂದೀಪ್ ಕೇರಳ ಚುನಾವಣೆಯ ಉಸ್ತುವಾರಿ
ಚಿಕ್ಕಮಗಳೂರು: ಎಐಸಿಸಿ ಜನರಲ್ ಸೆಕ್ರೆಟರಿಯಾಗಿ, ಕೇರಳ ಚುನಾವಣೆಯ ಉಸ್ತುವಾರಿಯಾಗಿ ನೇಮಕವಾದ ಮಾರ್ಗದರ್ಶಿ ನಾಯಕರಾದ ಬಿ.ಎಂ. ಸಂದೀಪ್ ಆಯ್ಕೆ ಆಗಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಸಂದೀಪ್ ಅವರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸೇವೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ.








