ಕೊಪ್ಪ-ನ. ರಾ. ಪುರ ರಸ್ತೆ ಓಡಾಟ ನರಕ!
– ಹೊಂಡ ಗುಂಡಿ ತಪ್ಪಿಸಲು ವಾಹನ ಸವಾರರ ಪರದಾಟ
– ಕನಿಷ್ಠ ಗುಂಡಿ ಮುಚ್ಚಿ ಪ್ರಾಣ ಉಳಿಸಿ ಎಂದು ಜನಾಗ್ರಹ
– ಕೊಪ್ಪ- ಬಾಳೆಹೊನ್ನೂರು ರಸ್ತೆಯಲ್ಲಿ ಕಾಮಗಾರಿ ಶುರು.
NAMMUR EXPRESS NEWS :
ಕೊಪ್ಪ/ ನರಸಿಂಹರಾಜಾಪುರ: ಕೊಪ್ಪ-ಎನ್ ಆರ್ ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಗುಂಡಿಗಳಿದ್ದು, ಪ್ರತಿನಿತ್ಯ ಹತ್ತಾರು ಕಡೆ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಯಲ್ಲಿ ಓಡಾಡೋದು ನರಕಯಾತನೆ ಆಗಿದೆ.
ಕೊಪ್ಪ ಪಟ್ಟಣದಿಂದ ಶುರುವಾದ ರಸ್ತೆ ಗುಂಡಿಗಳು ಕೊಪ್ಪ, ಕುದುರೆಗುಂಡಿ, ಕೈಮರ, ನರಸಿಂಹ ರಾಜಪುರ ಶಿವಮೊಗ್ಗವರೆಗೆ ಅತಿ ಹೆಚ್ಚಿನ ಗುಂಡಿಗಳು ಆಗಿವೆ. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಮಾರ್ಗದ ಅವ್ಯವಸ್ಥೆ ಬಗ್ಗೆ ಇದೀಗ ಸಾರ್ವಜನಿಕವಾಗಿ
ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರತಿ ದಿನ ಈ ಭಾಗದಲ್ಲಿ ಹತ್ತಾರು ವಾಹನಗಳ ಅಪಘಾತವಾಗುತ್ತಿದೆ. ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸುಮಾರು 100 ಮೀಟರ್ ವ್ಯಾಪ್ತಿಯರ ರಸ್ತೆಯಲ್ಲಿ 20ಕ್ಕೂ ಹೆಚ್ಚು ದೊಡ್ಡ ದೊಡ್ಡ ಗುಂಡಿಗಳು ಕಂಡುಬರುತ್ತವೆ.
ಕೊಪ್ಪ ಮತ್ತು ಎನ್ ಆರ್ ಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಕಥೆ ಹೀಗಾದರೆ ಹಳ್ಳಿಗಳ ರಸ್ತೆಗಳಂತೂ ಕೇಳೋದೇ ಬೇಡ ನೂರಾರು ಸಮಸ್ಯೆಗಳಿಂದ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವ ಕೇಂದ್ರ ಸರ್ಕಾರ ಮತ್ತು ರಾಜ್ಯ ರಸ್ತೆಗಳ ಅಭಿವೃದ್ಧಿ ಮಾಡುವ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು,ಸಂಸದರು ಅಧಿಕಾರಿಗಳು ಈ ಬಗ್ಗೆ ಗಮನಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.








