ಕುವೆಂಪು ವಿವಿ ಸಮಸ್ಯೆ: ವಿದ್ಯಾರ್ಥಿಗಳ ಪರದಾಟ!
– ಡಿಗ್ರಿ ಮುಗಿದರೂ ಮಾರ್ಕ್ಸ್ ಕಾರ್ಡ್ ಬರಲಿಲ್ಲ
– ಮರು ಮೌಲ್ಯ ಮಾಪನಕ್ಕೆ ಹಾಕಿದವರಿಗೆ ಉತ್ತರವೇ ಇಲ್ಲ
– ಅವ್ಯವಸ್ಥೆ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಆರಗ ಜ್ಞಾನೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ವಿವಿ ಸಮಸ್ಯೆ ಇದೀಗ ಅನೇಕ ವಿದ್ಯಾರ್ಥಿಗಳ ಬದುಕನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಇದೀಗ ಕುವೆಂಪು ವಿವಿ ಉಪ ಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರಿಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ಮಾಡಿ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿ ನೀಡದ ಕುವೆಂಪು ವಿವಿ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕುವೆಂಪು ವಿಶ್ವ ವಿಧ್ಯಾನಿಲಯದಿಂದ ಪದವಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೇ ತೊಂದರೆ ಆಗುತ್ತಿರುವ ವಿಚಾರ ಶಾಸಕ ಆರಗ ಜ್ಞಾನೇಂದ್ರರವರಿಗೆ ವಿಧ್ಯಾರ್ಥಿಗಳ ಮೂಲಕ ಗಮನಕ್ಕೆ ಬಂದಿದ್ದು, ತಕ್ಷಣವೇ ಕುವೆಂಪು ವಿವಿ ಉಪ ಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು ವಿಧ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಪ್ರಸ್ತಾಪಿಸಿ ವಿವಿಯ ಈ ಕ್ರಮವನ್ನು ಖಂಡಿಸಿದ್ದಾರೆ, ಪದವಿ ಪೂರೈಸಿದ ವಿಧ್ಯಾರ್ಥಿಗಳಿಗೆ ವಿವಿ ಕಡೆಯಿಂದ ಮಾರ್ಕ್ಸ್ ಕಾರ್ಡ್ ನೀಡದೇ ಸಾವಿರಾರು ವಿಧ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಮಾಡುತ್ತಿರುವುದು ವಿವಿಯ ಘನತೆಗೆ ತಕ್ಕದ್ದಲ್ಲ ಎಂದು ಶಾಸಕರು ಹೇಳಿದಾಗ, ಉಪಕುಲಪತಿಗಳು ಮೂರ್ನಾಲ್ಕು ದಿನಗಳಲ್ಲಿ ಎಲ್ಲಾ ವಿಧ್ಯಾರ್ಥಿಗಳ ಅಂಕಪಟ್ಟಿಯನ್ನು ವಿವಿ ವತಿಯಿಂದ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ,ತಕ್ಷಣವೇ ಅಂಕಪಟ್ಟಿಯನ್ನು ವಿತರಿಸದೇ ಇದ್ದಲ್ಲಿ ವಿಧ್ಯಾರ್ಥಿಗಳೊಂದಿಗೆ ಹೋರಾಟದ ಎಚ್ಚರಿಕೆಯನ್ನು ಶಾಸಕರು ನೀಡಿದ್ದಾರೆ.
ಮರು ಮೌಲ್ಯ ಮಾಪನಕ್ಕೆ ಹಾಕಿದವರಿಗೆ ಉತ್ತರವೇ ಇಲ್ಲ
ಕುವೆಂಪು ವಿವಿಯ ವಿವಿಧ ಡಿಗ್ರಿ ವಿದ್ಯಾರ್ಥಿಗಳು ತಮ್ಮ 5ನೇ ಸೆಮ್ ಹಾಗೂ ಇತರೆ ಸೆಮ್ ಪರೀಕ್ಷೆ ಅಂಕದ ಬಗ್ಗೆ ಮರು ಮೌಲ್ಯ ಮಾಪನಕ್ಕೆ ಶುಲ್ಕ ಕಟ್ಟಿ ಹಾಕಿದರೂ ಇಲ್ಲಿವರೆಗೆ ಮರು ಮೌಲ್ಯ ಮಾಪನದ ಫಲಿತಾಂಶ ಬಂದಿಲ್ಲ. ಕಾಲೇಜು ಸಿಬ್ಬಂದಿ ಕೂಡ ಮಾಹಿತಿ ನೀಡುತ್ತಿಲ್ಲ. ವಿವಿ ಸಿಬ್ಬಂದಿ ಕೂಡ ಮಾಹಿತಿ ಕೊಡುತ್ತಿಲ್ಲ ಎಂದು ತೀರ್ಥಹಳ್ಳಿಯ ನೊಂದ ಡಿಗ್ರಿ ವಿದ್ಯಾರ್ಥಿಗಳು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆ ಹರಿಸದಿದ್ದರೆ ಹೋರಾಟದ ಎಚ್ಚರಿಕೆ ಕೂಡ ನೀಡಿದ್ದಾರೆ.