ಗಣೇಶನ ಹಬ್ಬದ ಸಂಭ್ರಮಕ್ಕೆ ವರುಣನ ಅಡ್ಡಿ!
– ಎರಡು ದಿನದಿಂದ ಮಳೆ: ಯುವಕರಲ್ಲಿ ನಿರಾಸೆ
– ಮಲೆನಾಡ ಬಹುತೇಕ ಭಾಗದಲ್ಲಿ ಮಳೆ: ತುಂಬಿದ ನದಿಗಳು..!
NAMMUR EXPRESS NEWS
ತೀರ್ಥಹಳ್ಳಿ: ಗಣೇಶನ ಹಬ್ಬದ ಸಂಭ್ರಮಕ್ಕೆ ಮಳೆರಾಯ ಅಡ್ಡಿಯಾಗಿದ್ದು ಮಲೆನಾಡ ಎಲ್ಲಾ ತಾಲೂಕಿನೆಲ್ಲೆಡೆ ಗಣೇಶ ಮೂರ್ತಿ ಕೂರಿಸಿ ಸಂಭ್ರಮದಲ್ಲಿದ್ದ ಯುವಕರಿಗೆ ಇದೀಗ ಮಳೆರಾಯನ ಆಗಮನದಿಂದ ನಿರಾಸೆ ಮೂಡಿದೆ.
ಕಳೆದೆರಡು ದಿನಗಳಿಂದ ಮಳೆ ಬಂದಿದ್ದು ಜಿಟಿ ಜಿಟಿ ಮಳೆಯ ನಡುವೆ ಯುವಕರು ಉತ್ಸಾಹದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಗಣೇಶನ ಆಚರಣೆಗೆ ಆಯೋಜನೆ ಮಾಡಿದ್ದು ಇದೀಗ ಗಣೇಶನ ಆಚರಣೆಗೆ ಮಳೆ ಎದುರಾಗಿದೆ. ಇನ್ನೊಂದು ವಾರ ಭಾರಿ ‘ಮಳೆ’ ಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ನದಿಗಳು, ಹಳ್ಳಗಳು ಫುಲ್
ಕಳೆದೊಂದು ತಿಂಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನ ಹಬ್ಬದ ವೇಳೆ ಮಳೆ ನೋಡಿ ಖುಷಿಯಾಗಿದ್ದಾರೆ. ಆದರೆ ಎರಡು ದಿನ ಬಿಟ್ಟು ಬಂದಿದ್ದರೆ ಗಣೇಶ ಹಬ್ಬ ಸಡಗರದಿಂದ ಮಾಡಬಹುದಿತ್ತು ಎಂದುಕೊಳ್ಳುತ್ತಿದ್ದಾರೆ. ಆದರೆ ಮಳೆ ಬಾರದಿದ್ರೆ ಭವಿಷ್ಯ ಅತ್ಯಂತ ಕಷ್ಟಕರವಾಗಲಿದೆ. ಸತತವಾಗಿ ಮಳೆ ಆಗುತ್ತಿರುವ ಕಾರಣ ತುಂಗಾ, ಮಾಲತಿ, ಭದ್ರ ಸೇರಿ ನದಿ, ಹಳ್ಳಗಳು ತುಂಬಿವೆ.