ನಮ್ಮೂರ್ ಪ್ರಾಬ್ಲಮ್
ಸಿ.ಕೆ ರೋಡ್ ರಸ್ತೆ ಬಸ್ ನಿಲ್ದಾಣ ಯಾವಾಗ ಬೀಳುತ್ತೋ..?
– ಬಲಿಗಾಗಿ ಕಾದು ಕುಳಿತ ನಿಲ್ದಾಣವಾಯಿತೇ..?
– ಹಳೆಯ ಬಸ್ ನಿಲ್ದಾಣ ತೆಗೆದು ಹೊಸದು ಮಾಡಲು ಮನವಿ
ವಿಶೇಷ ವರದಿ: ಧೀರಜ್ ಇರುವತ್ತಿ
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮಾಳೂರು ಸಿ.ಕೆ ರೋಡ್ ಶಾಲೆ ಕಾಲೇಜು ರಸ್ತೆ ಮುಂಭಾಗ ಇರುವ ಬಸ್ ನಿಲ್ದಾಣ ಬಲಿಗಾಗಿ ಕಾದು ಕುಳಿತಿದೆ. ಯಾವುದೇ ನಿರ್ವಹಣೆ ಇಲ್ಲದೆ ಬಸ್ ನಿಲ್ದಾಣದ ಎರೆಡು ಬದಿಯ ಕಬ್ಬಿಣದ ಕಂಬ ಸoಪೂರ್ಣ ತುಕ್ಕು ಹಿಡಿದು ಮುಕ್ಕಾಲು ಭಾಗ ಈಗಾಗಲೇ ಶಿಥಿಲಗೊಂಡು ಬೀಳುವ ಹಂತ ತಲುಪಿದೆ. ಈ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ತಮ್ಮ ತಮ್ಮ ಊರಿಗೆ ಹೋಗಲು ದಿನಂ ಪ್ರತಿ ಈ ನಿಲ್ದಾಣದಲ್ಲಿ ನಿಲ್ಲುತ್ತಾರೆ. ಹಾಗೆ ಇತರ ಪ್ರಯಾಣಿಕರು ಸಹ ಇರುತ್ತಾರೆ ಬಹುಶಃ ಈ ನಿಲ್ದಾಣದ ಪರಿಸ್ಥಿತಿ ನೋಡಿದರೆ ಅದರ ಬಳಿ ಹೋಗಲು ಭಯ ವಾಗುತ್ತದೆ. ಪ್ರಯಾಣಿಕರ ತಂಗುದಾಣ ಪ್ರಾಣ ತೆಗೆಯುವ ತಂಗುದಾಣವಾಗಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೇಳಿ ಕೇಳಿ ಮಲೆನಾಡು ಭಾಗ ಈ ಸಮಯದಲ್ಲಿ ಗಾಳಿ ಮಳೆ ಹೆಚ್ಚು ವಿಧ್ಯಾರ್ಥಿಗಳು ಈ ಸಮಯದಲ್ಲಿ ನಿಲ್ದಾಣದಲ್ಲಿರುವಾಗ ಏನಾದ್ರೂ ಹೆಚ್ಚು ಕಮ್ಮಿ ಅದರೆ ಯಾರೂ ಜವಾಬ್ದಾರರು..?.ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಅಥವಾ PWD ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ನಿಲ್ದಾಣವನ್ನು ಬೇಗ ಸರಿ ಪಡಿಸಿ ಮಕ್ಕಳ ಹಾಗೂ ಪ್ರಯಾಣಿಕರ ಜೀವದ ಜೋತೆ ಚೆಲ್ಲಾಟ ಆಡುವ ಮುನ್ನ ಈ ನಿಲ್ದಾಣ ದುರಸ್ತಿಗೊಳಿಸಿ ಎಂಬ ಅಗ್ರಹ ವ್ಯಕ್ತವಾಗಿದೆ. ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲು ಜನತೆ ಅಗ್ರಹಿಸಿದ್ದಾರೆ.








