300 ಮಂದಿ ಸಾವು ಸಾಧ್ಯತೆ!?
– ದೇಶದಲ್ಲೇ ದೊಡ್ಡ ದುರಂತ: ವಿಮಾನದಲ್ಲಿದ್ದವರೆಲ್ಲ ಸಾವು!
– ವಿಮಾನ ಪತನ: ಹಾಸ್ಟೆಲ್ ವಿದ್ಯಾರ್ಥಿಗಳ ದುರ್ಮರಣ
* 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವು ಸಾಧ್ಯತೆ
NAMMMUR EXPRESS NEWS
ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡಿರುವ ಘಟನೆಯಲ್ಲಿ ವಿಮಾನದಲ್ಲಿದ್ದ 242 ಮಂದಿಯೂ ಮೃತಪಟ್ಟಿದ್ದಾರೆ.
ಸಂಜೆ 6:10ಕ್ಕೆ ಬ್ರಿಟನ್ ತಲುಪಬೇಕಾಗಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ಪತನವಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. 58 ಸಾವಿರ ಲೀಟರ್ ಪೆಟ್ರೋಲ್ ಇತ್ತು.
ಗುಜರಾತ್ನ ಮಾಜಿ ಸಿಎಂ ವಿಜಯ್ ರುಪಾನಿ ಸೇರಿ ಎಲ್ಲಾ ಪ್ರಯಾಣಿಕರು ಸಾವನ್ನು ಕಂಡಿದ್ದಾರೆ. 600 ಅಡಿ ಎತ್ತರದಿಂದ ವಿಮಾನ ಪತನವಾಗಿದೆ . 5ಕ್ಕೂ ಹೆಚ್ಚು ಕಟ್ಟಡ ಸುಟ್ಟು ಹೋಗಿದೆ.
ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 217 ವಯಸ್ಕರು,11 ಮಕ್ಕಳು,2 ಶಿಶುಗಳು ಮತ್ತು 53 ಬ್ರಿಟೀಷ್ ಪ್ರಜೆಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಈ ಘಟನೆ ವಿಮಾನ ಯಾನ ಎಷ್ಟು ಸೇಫ್ ಎಂಬ ಬಗ್ಗೆಯೂ ಚರ್ಚೆ ಹುಟ್ಟು ಹಾಕಿದೆ.
2010 ಮೇ 22ರಂದು ಮಂಗಳೂರು ವಿಮಾನ ನಿಲ್ದಾಣ ಬಜ್ಪೆ ಸಮೀಪ 158 ಮಂದಿ ವಿಮಾನ ಪತನವಾಗಿ ಸಾವನ್ನು ಕಂಡಿದ್ದರು.








