
ಮಹಾಕುಂಭ ಮೇಳದಲ್ಲಿ ನಡೆಯುತ್ತಿದೆ ಬಲಿ ಬಲಿ ಬಲಿ!!
– ಕರ್ನಾಟಕದ ನಾಲ್ವರು ಭಕ್ತರು ಬಲಿ!
– ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವು!
NAMMUR EXPRESS NEWS
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಳೆದು 2 ವಾರಗಳಿಂದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭಮೇಳ ನಡೆಯುತ್ತಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆ ಪ್ರಯಾಗ್ರಾಜ್ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಇದೇ ಕಾರಣದಿಂದ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿದೆ. ಮಹಾಕುಂಭ ಮೇಳ ಹಿನ್ನೆಲೆ ಪವಿತ್ರ ಸ್ನಾನಕ್ಕಾಗಿ ತಡರಾತ್ರಿ ಪ್ರಯಾಗ್ರಾಜ್ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕರ್ನಾಟಕದಿಂದ ಹೋಗಿದ್ದ ಹಲವು ಭಕ್ತರು ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದು, ಇದೀಗ ಒಂದೇ ಜಿಲ್ಲೆಯ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ರಾಜ್ಯದ ಮತ್ತಿಬ್ಬರು ಕುಂಭಮೇಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಡಿಸಿ ಮೊಹಮ್ಮದ್ ರೋಷನ್ ಖಚಿಪಡಿಸಿದ್ದು, ಮೃತರನ್ನು ಜ್ಯೋತಿ, ಮೇಘಾ, ಮಹಾದೇವಿ ಮತ್ತು ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಬೆಳಗಾವಿಯ ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ ಆರಂಭಿಸಿದ್ದ, 13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾರ್ ಹೋಗಿದ್ದರು. ಬೆಳಗಾವಿ ವಡಗಾವಿ ನಿವಾಸಿಯವರಾಗಿದ್ದ ಜ್ಯೋತಿ ಮತ್ತು ಮೇಘಾ ಕುಂಭ ಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ಯಾತ್ರಾರ್ಥಿ ಬಲಿಯಾಗಿದ್ದು, ಅವರನ್ನು ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಪತ್ನಿ ಜೊತೆಗೆ ಪ್ರಯಾಗ್ ರಾಜ್ಗೆ ತೆರಳಿದ್ದ ಅರುಣ್, ಇಂದು ಬೆಳಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದರು. ನಂತರ ಪ್ರಯಾಗ್ ರಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಅರುಣ್ ಕೊಪಾರ್ಡೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ದುರಂತದಲ್ಲಿ ಬೆಳಗಾವಿಯ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು, ಬೆಳಗಾವಿಯ ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗ ಮೃತ ಮಹಿಳೆ ಮಹಾದೇವಿ ಪತಿ ಮಾತನಾಡಿದ್ದು, ಕಳೆದ ಮೂರು ದಿನಗಳ ಹಿಂದೆ ಮೂವತ್ತು ಜನ ಕುಂಭಮೇಳಕ್ಕೆ ಹೋಗಿದ್ರು. ಕಾಲ್ತುಳಿತದಲ್ಲಿ ನನ್ನ ಪತ್ನಿ ಸಾವನ್ನಪ್ಪಿರೋದು ಖಚಿತವಾಗಿದೆ. ಇನ್ನೂ ಶವ ಮಾತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
