ಪಾಕ್ ಹಾರಾಟಕ್ಕೆ ಭಾರತದ”ಬ್ರಹ್ಮೋತ್ತರ”..!
– ಭಾರತೀಯರ ಹೆಮ್ಮೆಯ ಆಪರೇಷನ್ ಆಪರೇಷನ್ ಸಿಂಧೂರ
– ಜಗತ್ತಿನಲ್ಲಿ ಗಮನ ಸೆಳೆದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ!
ವಿಶೇಷ ಲೇಖನ: ಪ್ರೀತಮ್ ಹೆಬ್ಬಾರ್
ಭಾರತ ಕೇವಲ ಮುಂದುವರಿಯುತ್ತಿರುವ ರಾಷ್ಟ್ರವಲ್ಲದೆ ಎಲ್ಲಾ ವಿಷಯಗಳಲ್ಲೂ ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರವನ್ನು ಕೊಡುವಂತಹ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ ಎಂಬುವುದನ್ನು ಭಾರತ ಜಗತ್ತಿಗೆ ಮತ್ತೊಮ್ಮೆ ಸಾಭೀತು ಪಡಿಸಿದೆ. ಇತ್ತೀಚೆಗೆ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಹತ್ಯಾಕಾಂಡದ ಪ್ರತಿಕಾರವಾಗಿ ಭಾರತ ಇದಕ್ಕೆ ಕಾರಣರಾದವರನ್ನು ಸದೆಬಡೆಯುವುದಾಗಿ ಘೋಷಿಸಿತ್ತು. ಇದರ ಬೆನ್ನಲೇ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ದಮನ ಮಾಡುವಲ್ಲಿ ಯಶಸ್ವಿ ಕೂಡ ಆಗಿದೆ.
ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನ ಮತ್ತು ಭಯೋತ್ಪಾದಕರು ಭಯಭೀತರಾಗಿದ್ದರು. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಬ್ರಹ್ಮೋಸ್ ಎಂಬ ಕ್ರೂಸ್ ಕ್ಷಿಪಣಿಯ ಹೊಡೆತಕ್ಕೆ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ.
ಬ್ರಹ್ಮೋಸ್ ಹಿನ್ನೆಲೆ ಏನು?
ಭಾರತದ ಸ್ವನಿರ್ಮಿತ ಬ್ರಹ್ಮಾಸ್ತ್ರ ಈ ಬ್ರಹ್ಮೋಸ್ ಗೆ ಈ ಹೆಸರು ಬರಲು ಮುಖ್ಯವಾದ ಹಿನ್ನೆಲೆ ಕೂಡ ಇದೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಕ್ವಾ ಎಂಬ ಎರಡು ನದಿಗಳ ಹೆಸರುಗಳ ಸಂಯೋಜನೆಯೇ ಈ ಬ್ರಹ್ಮೋಸ್ ಯಾಗಿದೆ. ಭಾರತದ DRDO ಮತ್ತು ರಷ್ಯಾದ NPO ಜಂಟಿಯಾಗಿ ಈ ಬ್ರಹ್ಮೋಸ್ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿವೆ. ಹೈದರಾಬಾದ್ ನ ನಾಗ್ಪುರದಲ್ಲಿ ಬ್ರಹ್ಮೋಸ್ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಇನ್ನೊಂದು ತಯಾರಿಕಾ ಘಟಕವನ್ನ ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದ್ದಾರೆ.
ಬ್ರಹ್ಮೋಸ್ ದಾಳಿಗೆ ಪಾಕ್ ತತ್ತರ
ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಎಷ್ಟು ಪರಿಣಾಮಕಾರಿಯಾಗಿ ಕೆಲಸವನ್ನು ನಿರ್ವಹಿಸಲಿದೆ ಎಂದರೆ ಅದು ಭೂಮಿ, ವಾಯು ಮತ್ತು ಹಡಗು ಎಲ್ಲಿಂದ ಬೇಕಾದರೂ ಶತ್ರುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎಂಬ ಅಂಶದಿಂದಲೇ ಅರ್ಥಮಾಡಿಕೊಳ್ಳಬಹುದು.
ಬ್ರಹ್ಮೋಸ್ ಬರೋಬ್ಬರಿ 800 ಕಿಲೋ ಮೀಟರ್ ರೇಂಜ್ ಹೊಂದಿದೆ. ನಿಮಿಷಗಳಲ್ಲಿ 300 ಕಿಲೋ ಮೀಟರ್ ಸಾಗುವ ಸಾಮರ್ಥ್ಯವಿದೆ. ಒಂದೇ ಸಾರಿ 300 ಕೆಜಿಯ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಜಿಪಿಎಸ್ ಆಧಾರಿತ ಗೈಡೆಡ್ ಸಿಸ್ಟಮ್ ನಮ್ಮ ಹೆಮ್ಮೆಯ ಈ ಬ್ರಹ್ಮೋಸ್ನಲ್ಲಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಒಮ್ಮೆ ಉಡಾಯಿಸಿದ ನಂತರ, ಕ್ಷಿಪಣಿಯು ಮೊದಲೇ ಪ್ರೋಗ್ರಾಮ್ ಮಾಡಲಾದ ಹಾರಾಟದ ಮಾರ್ಗಗಳು ಮತ್ತು ಸುಧಾರಿತ ಸೀಕರ್ಗಳನ್ನು ಬಳಸಿಕೊಂಡು ಗುರಿಯತ್ತ ಸ್ವತಃ ಹೋಗಿ ದಾಳಿಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಹಾಗೂ ಇದು ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿ, ಹಗಲು ಅಥವಾ ರಾತ್ರಿಯಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಬಹುದಾದ ಅತ್ಯುತ್ತಮ ತಂತ್ರಜ್ಞಾನವನ್ನು ಕೂಡ ಹೊಂದಿದೆ. ಜೊತೆಗೆ ಇದರ ದಾಳಿಯಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಬ್ರಹ್ಮೋಸ್ ಹೊಡೆತಕ್ಕೆ ಶತ್ರು ರಾಷ್ಟ್ರ ಪಾಕಿಸ್ತಾನ ನುಚ್ಚು ನೂರಾಗಿ ಹೋಗಿ ಅಮೆರಿಕದ ಬಳಿ ಗೋಗರೆದು ಭಾರತ ಯುದ್ಧ ನಿಲ್ಲಿಸುವಸಂತೆ ಕದನ ವಿರಾಮಕ್ಕೆ ಬೇಡಿಕೊಂಡಿತ್ತು. ಭಾರತ ಬ್ರಹ್ಮಾಸ್ತ್ರ ಬ್ರಹ್ಮೋಸ್ ಪಾಕ್ ಗೆ ಕೊಟ್ಟ ಹೊಡೆತ ನೋಡಿ ಇದೀಗ ನೆರೆಯ ರಾಷ್ಟ್ರಗಳು ಕೂಡ ತಮಗೂ ಬ್ರಹ್ಮೋಸ್ ಕ್ಷಿಪಣಿಯನ್ನು ಉತ್ಪಾದಿಸಿ ಕೊಡುವಂತೆ ಕೇಳಿಕೊಂಡಿವೆ. ಪ್ರಸ್ತುತ ಲಕ್ನೋ ಘಟಕವು ವಾರ್ಷಿಕವಾಗಿ 100 ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ಷಿಪನಿಗಮ್ಮ ತಯಾರಿಸುವ ಗುರಿಯನ್ನು ಭಾರತ ಹೊಂದಿದೆ. ಪ್ರಸ್ತುತ ಭಾರತಕ್ಕೆ ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಬ್ರೂನಿ, ಬ್ರೆಜಿಲ್, ಚಿಲಿ, ಅರ್ಜೆಂಟೈನಾ, ವೆನೆಜುವೆಲಾ, ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಕತಾರ್, ದಕ್ಷಿಣ ಆಫ್ರಿಕಾ
ಮತ್ತು ಬಲ್ಗೇರಿಯಾ ದೇಶಗಳು ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಉತ್ಸುಕವಾಗಿವೆ. ಒಟ್ಟಿನಲ್ಲಿ ಭಾರತದ ಸೇನಾಬಲ ಎಷ್ಟು ಎಂಬುವುದನ್ನು ಜಗತ್ತಿನ ಮುಂದೆ ಸಾಭೀತಾಗಿದೆ








