ಒಬ್ಬ ಉಗ್ರನನ್ನು ಬಿಡೋದಿಲ್ಲ,ಒಬ್ಬೊಬ್ಬರನ್ನು ಹುಡುಕಿ ಹುಡುಕಿ ಹೊಡಿಯುತ್ತೇವೆ
* ಪಹಲ್ಗಾಮ್ ಉಗ್ರ ದಾಳಿ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ
* ಉಗ್ರಗಾಮಿಗಳು ಹಾಗೂ ಪಾಕ್ಗೆ ತಕ್ಕ ಉತ್ತರ ಕೊಡುವ ಸುಳಿವು ನೀಡಿದ ಮೋದಿ
* ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಆ ಮಾತನ್ನ ಇಂಗ್ಲೀಷ್ನಲ್ಲಿ ಹೇಳಿದ್ಯಾಕೆ?
NAMMMUR EXPRESS NEWS
ಬಿಹಾರ: ಮಧುಬನಿ ಜಿಲ್ಲೆಯಲ್ಲಿ ಪಂಚಾಯತ್ ರಾಜ್ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಭಾಷಣಕ್ಕೂ ಮುನ್ನ ಪಹಲ್ಗಾಮ್ನಲ್ಲಿ ಮಡಿದವರಿಗೆ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು. ಭಾಷಣದಲ್ಲಿ ಪಹಲ್ಗಾಮ್ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ‘ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದ ಕ್ರೂರತೆಯಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ, ಕೋಟ್ಯಂತರ ನಾಗರಿಕರು ದುಃಖಿತರಾಗಿದ್ದಾರೆ. ಇಡೀ ದೇಶವು ಎಲ್ಲಾ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಜೊತೆಗಿದೆ. ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಬೇಗನೆ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಮೋದಿ, “ಸ್ನೇಹಿತರೇ, ಈ ಭಯೋತ್ಪಾದಕ ದಾಳಿಯಲ್ಲಿ, ಯಾರೋ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಂಗಾತಿಯನ್ನು ಕಳೆದುಕೊಂಡರು, ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು, ಕೆಲವರು ಕನ್ನಡ ಮಾತನಾಡುತ್ತಿದ್ದರು, ಕೆಲವರು ಮರಾಠಿ ಮಾತನಾಡುತ್ತಿದ್ದರು, ಯಾರೋ ಗುಜರಾತಿ ಆಗಿದ್ದರು. ಇಂದು, ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ, ಅವರೆಲ್ಲರ ಸಾವಿನಿಂದ ಸಮಾನ ದುಃಖವಿದೆ. ಕೋಪವೂ ಹಾಗೆಯೇ ಇದೆ. ದೇಶದ ಶತ್ರುಗಳು ಭಾರತದ ನಂಬಿಕೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಬೇಕೆಂದರೆ, ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಪಿತೂರಿ ರೂಪಿಸಿದವರಿಗೆ ಅವರು ಊಹಿಸಿದ್ದಕ್ಕಿಂತ ದೊಡ್ಡ ಶಿಕ್ಷೆ ಸಿಗುತ್ತದೆ. ಆ ಶಿಕ್ಷೆಯನ್ನು ಹಂಚಿಕೊಳ್ಳುತ್ತೇನೆ, ನಾನು ಅದನ್ನು ಮಣ್ಣಿನೊಂದಿಗೆ ಬೆರೆಸಿ ಇಡುತ್ತೇನೆ’ ಎಂದು ಗುಡುಗಿದರು.
ಈಗ ಭಯೋತ್ಪಾದಕರು ಬಿಟ್ಟಿರುವ ಅಲ್ಪಸ್ವಲ್ಪ ನೆಲವನ್ನು ಕೂಡ ನಾಶಮಾಡುವ ಸಮಯ ಬಂದಿದೆ ಎಂದು ಗುಡುಗಿದರು.
ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಉಗ್ರರಿಗೆ ಹಾಗೂ ಅವರಿಗೆ ಬೆಂಬಲವಾಗಿರುವ ಪಾಕ್ಗೆ ಎಚ್ಚರ ನೀಡುವಾಗ ಇಂಗ್ಲೀಷ್ನಲ್ಲಿ ಮಾತನಾಡಲಾರಂಭಿಸಿದರು,ಇದನ್ನ ಗಮನಿಸಿದರೆ ಭಾರತ ಉಗ್ರರ ವಿರುದ್ಧ ದೊಡ್ಡ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ ಎನಿಸುತ್ತಿದೆ, ಹೌದು, ಏಕೆಂದರೆ ಇಸ್ರೇಲ್ ಕೂಡ ಉಗ್ರವಾದದ ವಿರುದ್ಧದ ತನ್ನ ಪ್ರತೀಕಾರದ ಎಚ್ಚರಿಕೆಯನ್ನು ಇದೇ ಮಾದರಿಯಲ್ಲಿ ಸುಳಿವು ನೀಡಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.








