- 280 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
- 10 ರಿಂದ 12 ಸಾವಿರ ಜನ ಸೇರುವ ನಿರೀಕ್ಷೆ
NAMMUR EXPRESS NEWS
ತೀರ್ಥಹಳ್ಳಿ: ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಗೆ ತೀರ್ಥಹಳ್ಳಿ ಸಜ್ಜುಗೊಂಡಿದೆ.
ನವೆಂಬರ್ 27ರ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಗೆ ಬರುತ್ತಿದ್ದಾರೆ. ಸಿಎಂ ಆದ ತರುವಾಯ ಮೊದಲ ಬಾರಿಗೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಬೊಮ್ಮಾಯಿ ಅವರಿಗೆ ಭರ್ಜರಿ ಸ್ವಾಗತ ನೀಡಲು ಕ್ಷೇತ್ರ ಬಿಜೆಪಿ ಘಟಕ ಸರ್ವ ರೀತಿಯ ತಯಾರಿ ಆರಂಭಿಸಿದೆ.
ವಿಧಾನಸಭೆ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಉಳಿದಿದ್ದು ಬಿಜೆಪಿ ಸಿಎಂ ಭೇಟಿ ಕಾರ್ಯಕ್ರಮಕ್ಕೆ ಭರ್ಜರಿ ಜನ ಸೇರಿಸಲು ಸಿದ್ಧತೆ ನಡೆದಿದೆ.
ಯಾವ ಯಾವ ಯೋಜನೆಗೆ ಚಾಲನೆ
- 280 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಚಾಲನೆ:
- 232 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ
- 5 ಕೋಟಿ ವೆಚ್ಚದ ಪ ಪಂ ಕಾರ್ಯಾಲಯ ಉದ್ಘಾಟನೆ
- 10 ಕೋಟಿ ವೆಚ್ಚದ ತಾ. ಪಂ ಕಟ್ಟಡ
- 9 ಕೋಟಿ ವೆಚ್ಚದ ಡಿಗ್ರಿ ಕಾಲೇಜು ಕಟ್ಟಡ
- 4 ಕೋಟಿ ವೆಚ್ಚದ ಪೊಲೀಸ್ ಸ್ಟೇಷನ್, ವಸತಿಗೃಹ
- 3 ಕೋಟಿ ವೆಚ್ಚದ ಅಗ್ನಿಶಾಮಕ ಘಟಕ
- 15 ಕೋಟಿ ವೆಚ್ಚದ ಐಟಿಐ ಕಟ್ಟಡ
- 6.5 ಕೋಟಿ ವೆಚ್ಚದ ನಗರೋಸ್ಥಾನ ಕಾಮಗಾರಿ
- 2 ಕೋಟಿ ವೆಚ್ಚದ ರಾಮೇಶ್ವರ ದೇವಸ್ಥಾನದ ಬಳಿ ಕಲ್ಯಾಣ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು.