ಜೆಡಿಎಸ್ ಪಕ್ಷ ಸೇರ್ಪಡೆಯಾದ ಬೊಬ್ಬಿ ರಾಘವೇಂದ್ರ
– ಶಿವಮೊಗ್ಗ ಜೆಡಿಎಸ್ ಕಚೇರಿಯಲ್ಲಿ ಸೇರ್ಪಡೆಯಾದ ಯುವ ಸಂಘಟಕ
NAMMUR EXPRESS NEWS
ಶಿವಮೊಗ್ಗ/ ತೀರ್ಥಹಳ್ಳಿ: ಯುವ ಸಂಘಟಕ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಬೊಬ್ಬಿ ರಾಘವೇಂದ್ರ ಅವರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಟೌನ್ ಅಧ್ಯಕ್ಷ ಎಡನಾಲ ರವಿ ಗೌಡ ಅವರ ನೇತೃತ್ವದಲ್ಲಿ ರಾಘವೇಂದ್ರ ಅವರು ಪಕ್ಷ ಸೇರ್ಪಡೆ ಆಗಿದ್ದಾರೆ. ಈ ವೇಳೆ ಜಿಲ್ಲಾ ನಾಯಕರು, ಜೆಡಿಎಸ್ ನಾಯಕರಾದ ಭೋಜೇಗೌಡ, ಜಿಲ್ಲಾ ಉಪಾಧ್ಯಕ್ಷ ಮೆದೋಳಿಗೆ ರಾಮಸ್ವಾಮಿ, ತೀರ್ಥಹಳ್ಳಿ ಅಧ್ಯಕ್ಷರಾದ ಕಿರಣ್ ಕುಣಜೆ ಪ್ರಭಾಕರ್, ಪ್ರಮುಖರಾದ ವಿನಯ್ ಗೌಡ, ಪ್ರದೀಪ್ ಗೌಡ, ಶರತ್ ಶೆಟ್ಟಿ ಇತರರು ಇದ್ದರು.
ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ
ಬೊಬ್ಬಿ ರಾಘವೇಂದ್ರ ಅವರು ಮಾನವ ಹಕ್ಕು ಸಂರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿದಂತೆ ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರ ಪಕ್ಷ ಸೇರ್ಪಡೆ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.