ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ!
– ಮೋದಿ ವಿರುದ್ಧ ಸುಧೀರ್ ಕುಮಾರ್ ಮುರೊಳ್ಳಿ ವಾಗ್ದಾಳಿ
– 10 ವರ್ಷದಲ್ಲಿ ದೇಶದಲ್ಲಿ ಸಾವಿರಾರು ಕೋಟಿ ಹಗರಣ
– ಮೋದಿ ಡ್ರೆಸ್, ಇರಾನಿ ತೂಕ ಬಿಟ್ರೆ ದೇಶದ ಅಭಿವೃದ್ಧಿ ಆಗಿಲ್ಲ
– ಬಿಜೆಪಿ, ಬಿಜೆಪಿ ಸ್ನೇಹಿತರ ಪೆನ್ ಡ್ರೈವ್ ಹೊರ ಬರೋದು ಏಕೆ?
NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಿ ಮೋದಿ ಅವರ ಪ್ರಣಾಳಿಕೆಯಂತೆ ಎಂದಿಗೂ ಆಡಳಿತ ನಡೆಸಿಲ್ಲ. ದೇಶದ ಅಭಿವೃದ್ಧಿ ಆಗಿದೆ ಎಂಬಂತೆ ಬಿಂಬಿಸಿಕೊಂಡು ಬಿಜೆಪಿ ಜನರನ್ನು ಮೋಸಕ್ಕೆ ತಳ್ಳುತ್ತಿದೆ. ಮೋದಿ ಗ್ಯಾರಂಟಿ ಕೂಡ ಕಾಂಗ್ರೆಸ್ ಇಂದ ಕದ್ದಿದ್ದು, ಇಡೀ ಭಾರತದ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದ್ದಾರೆ. ಉದ್ಯಮ ಮಾರಿದ್ದಾರೆ. ಇಡೀ ದೇಶದಲ್ಲಿ ಈಗ ಆರಾಜಕತೆ ಸೃಷ್ಟಿ ಆಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೋಳ್ಳಿ ಆರೋಪಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರ ಪ್ರಣಾಳಿಕೆಯಲ್ಲಿ ಹೇಳಿದಂತೆ ಇಡೀ ದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಕ ಮಾಡಿಕೊಂಡು ಸೈನಿಕರಾಗುವ ಯುವ ಜನತೆ ಬದುಕಲ್ಲಿ ಬದುಕಿನ ಆಸೆಯನ್ನೇ ತೆಗೆದಿದ್ದಾರೆ. ಉದ್ಯೋಗ ಸೃಷ್ಟಿ ಮಾಡದೆ ಬರೀ ಇವರ ಸೂಟು ಬೂಟಿಗೆ ಹಣ ಖರ್ಚು ಮಾಡುತ್ತಿದ್ದಾರೆ. ಮೋದಿ ಕೀ ಗ್ಯಾರಂಟಿ ಅವರ ಗ್ಯಾರಂಟಿ ಅಲ್ಲ, ಅದು ಕಾಂಗ್ರೆಸ್ ಕದ್ದಿದ್ದು. ಏಕಚತ್ರಾಧಿಪತಿ ವ್ಯವಸ್ಥೆ ಇಡೀ ದೇಶವನ್ನು ಹಾಳು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡದ ಏಕೈಕ ಪ್ರಧಾನಿ ಮೋದಿ. ಇಲೆಕ್ಟ್ರಾನಿಕ್ ಬಾಂಡ್ ವಿವರ ಕೊಡಿ ದಾಖಲೆ ಕೊಡಿ ಎಂದರೆ ಜೂ.30ರ ಸಮಯ ಪಡೆದಿದ್ದಾರೆ. ಇಡೀ ದೇಶದಲ್ಲಿ ಚರ್ಚೆ ಬದಲು ಮಾಡಲು ಆಮ್ ಆದ್ಮಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಜನರ ಗಮನ ಬೇರೆಡೆ ಸೆಳೆದು ಇವರು ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.
ದೇಶದಲ್ಲಿ ಸಾವಿರಾರು ಕೋಟಿ ಹಗರಣ!
ಮೋದಿ ಅವರ ಎರಡು ಅವಧಿಯಲ್ಲಿ ಲಕ್ಷ ಲಕ್ಷ ಕೋಟಿ ಹಗರಣ ನಡೆದಿದೆ. ಕರೋನಾ ಲಸಿಕೆ ಅವ್ಯವಹಾರ ಮಾಡಿ ಆ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ. ಗುಜರಾತ್ ಲಾಠಿ ಕಿಂಗ್ ಪಿನ್ ಮಾಫಿಯಾದಿಂದ ಹಣ ಪಡೆದಿದ್ದಾರೆ. ಸೇತುವೆ ಕಳಪೆ ಕಾಮಗಾರಿ, ಪಾಕಿಸ್ತಾನ ಸಹಭಾಗಿತ್ವದ ಕಂಪನಿಯಿಂದ ಕಪ್ಪು ಹಣವನ್ನು ಇಲೆಕ್ಟ್ರಾನಿಕ್ ಬಾಂಡ್ ಮೂಲಕ ಪಡೆದಿದ್ದಾರೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.
ಡೂಪ್ಲಿಕೇಟ್ ಕರೋನಾ ಲಸಿಕೆ ಕೊಟ್ಟು ಈಗ ಸೈಡ್ ಎಫೆಕ್ಟ್!
50 ವರ್ಷದಲ್ಲಿ ಕಾಂಗ್ರೆಸ್ ಎಲ್ಲಾ ಲಸಿಕೆ ಕೊಟ್ಟು ಜನರನ್ನು ಬದುಕಿಸಿದೆ. ಆದರೆ ಕರೋನಾ ಲಸಿಕೆ ಕೊಟ್ಟು ಪ್ರಚಾರವನ್ನು ಬಿಜೆಪಿ ಪಡೆದಿದೆ. ಆದರೆ ಈಗ ಅಡ್ಡ ಪರಿಣಾಮದಿಂದ ಪುನೀತ್ ಅಂತ ಸಾವಿರಾರು ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಲಕ್ಷ ಲಕ್ಷ ಜನರ ಬದುಕು ಹೋಗುತ್ತಿದೆ. ಆದರೆ ಅದೇ ಕಂಪನಿಯಿಂದ ಮೋದಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಮುರೊಳ್ಳಿ ಆರೋಪಿಸಿದರು
ಜನರ ದನಿ ಕೇಳುವ ಏಕೈಕ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಪ್ರೇರಣೆ ಕಿಮ್ಮನೆ ರತ್ನಾಕರ್. ಮೋದಿ, ಅವರು ನೇಮಿಸಿದ್ದ ಉನ್ನತ ಅಧಿಕಾರಿಗಳ ಮಾತನ್ನೇ ಕೇಳುವುದಿಲ್ಲ. ಇನ್ನು ಜನರ ದನಿ ಎಲ್ಲಿ ಕೇಳುತ್ತಾರೆ?
ರಾಷ್ಟ್ರೀಯ ಭದ್ರತೆ ಎಂಬುದು ಅವರ ರಾಜಕೀಯ ದಾಳ. ಮಣಿಪುರದಲ್ಲಿ ಭದ್ರತಾ ವೈಫಲ್ಯ ಅಲ್ಲವಾ? ಪುಲ್ವಮ, ಚೀನಾ ಗಡಿಯಲ್ಲಿ ಏನಾಗಿದೆ? 2014ಕ್ಕಿಂತ ಮೊದಲು ಈ ದೇಶದಲ್ಲಿ ಎಲ್ಲವೂ ಆಗಿತ್ತು. ಈಗ ದೇಶ ಅಭಿವೃದ್ಧಿ ಎನ್ನುವ ಮೋದಿ ತಮ್ಮ ಡ್ರೆಸ್ ಅಭಿವೃದ್ಧಿ ಆಗಿದೆ, ಸ್ಮೃತಿ ಇರಾನಿ ತೂಕ ಹೆಚ್ಚಾಗಿದೆ ಅಷ್ಟೇ ಮತ್ತೇನೂ ಆಗಿಲ್ಲ ಎಂದು ಟೀಕಿಸಿದರು. ಜನರ ನೆಮ್ಮದಿಯೇ ದೇಶದ ಅಭಿವೃದ್ಧಿ, ಜನರ ಬದುಕಿನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಬರೀ ಭಾಷಣ ಅಲ್ಲ, ಮೋದಿಗೆ ಇಂಗ್ಲಿಷ್ ಬರಲ್ಲ, ವಿದೇಶಿ ನಿಯಮ ಅರ್ಥ ಆಗಲ್ಲ. ಬಡವರ ಕಷ್ಟ ಗೊತ್ತಿಲ್ಲ ಎಂದರು.
ಪೆನ್ ಡ್ರೈವ್ ಎಲ್ಲೆಲ್ಲಿತ್ತು?
ಕುಮಾರ ಸ್ವಾಮಿ ಜೇಬಲ್ಲಿ ಇತ್ತು ಪೆನ್ ಡ್ರೈವ್, ರೇವಣ್ಣ ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ಪ್ಲಾನ್ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್. ಹೆಣ್ಣು ಮಕ್ಕಳ ಬದುಕನ್ನು ಹಾಳು ಮಾಡಿರುವ ಆ ಪ್ರಕರಣದ ಬಗ್ಗೆ ಮಾತನಾಡುವುದೇ ಹೇಸಿಗೆ ಎಂದು ಬೇಸರ ವ್ಯಕ್ತಪಡಿಸಿದ ಮುರೊಳ್ಳಿ, ಬಿಜೆಪಿ ಅಂಡ್ ಬಿಜೆಪಿ ಸ್ನೇಹಿತರದ್ದೇ ಪೆನ್ ಡ್ರೈವ್ ಬರೋದು ಏಕೆ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರೇ ಸ್ಟೇ ತರೋದು. ದೇಶದಲ್ಲಿ ಮೋದಿ ಅಂತಹ ಪ್ರಧಾನಿ ಇರುವವರೆಗೆ ಮಹಿಳೆಯರಿಗೆ ಭದ್ರತೆ ಇಲ್ಲ. ಪ್ರಜ್ವಲ್ ಬಗ್ಗೆ ಮಾತನಾಡಲು ಶೋಭಾ, ಸಿ. ಟಿ. ರವಿ ಎಲ್ಲಿ ಹೋದರು. ಅವರೊಬ್ಬ ವಿಕೃತ ವ್ಯಕ್ತಿ ಎಂದರು.
ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ!
ಪತ್ನಿ ಬೆಲೆ ಗೊತ್ತಿಲ್ಲದ ವ್ಯಕ್ತಿ ತಾಳಿ ಬಗ್ಗೆ ಮಾತನಾಡುತ್ತಾರೆ. ದೇಶವನ್ನು ಅಳುವವ ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ ಎಂದು ಕುಟುಕಿದರು. ಗ್ಯಾರಂಟಿಯಲ್ಲಿ ಯಾವುದೇ ಜಾತಿ, ಧರ್ಮ ನೋಡಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ನೀಡಿ ಎಂದರು. ಕಿಮ್ಮನೆ ರತ್ನಾಕರ್, ರಾಜೇಗೌಡ, ಆದರ್ಶ ಹುಂಚದಕಟ್ಟೆ ಇತರರು ಇದ್ದರು.