ಅಮೇಥಿ ಕ್ಷೇತ್ರದಲ್ಲಿ ಮಂಜುನಾಥ್ ಭಂಡಾರಿ ಪ್ರಚಾರ
– ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ.ಎಲ್ ಶರ್ಮಾ ಭೇಟಿ
– ಮಂಜುನಾಥ್ ಭಂಡಾರಿ, ಶರ್ಮಾ ಸ್ನೇಹಿತರು
NAMMUR EXPRESS NEWS
ಆಮೇಥಿ: ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಮಂಜುನಾಥ ಭಂಡಾರಿಯವರು ಅಮೇಥಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ.ಎಲ್ ಶರ್ಮಾ ಅವರನ್ನು ಅಮೇಥಿಯಲ್ಲಿ ಭೇಟಿಯಾದರು. ಅವರು ಕಳೆದ 4 ದಶಕಗಳಿಂದ ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಟಾವಂತರಾಗಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಮಂಜುನಾಥ ಭಂಡಾರಿ ಮತ್ತು ಶರ್ಮಾ ಅವರು ಕಳೆದ 3 ದಶಕಗಳಿಂದ ಪರಸ್ಪರ ಪರಿಚಿತರು ಮತ್ತು ಇಬ್ಬರೂ ಪರಸ್ಪರ ಹಿತೈಷಿಗಳು. ಮಂಜುನಾಥ ಭಂಡಾರಿ ಅವರು ಅಮೇಥಿ ಲೋಕಸಭಾ ಚುನಾವಣೆಯಲ್ಲಿ ಎಲ್ ಶರ್ಮಾರವರು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು, ಈ ಹಿಂದೆ ಅಮೇಥಿಯನ್ನು ಗಾಂಧಿ ಕುಟುಂಬದವರು ಪ್ರತಿನಿಧಿಸಿದ್ದರು. ಮಂಜುನಾಥ್ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರಾದ ಬಳಿಕ ರಾಜ್ಯದ ಹಲವು ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ಚುರುಕಾಗಿದ್ದಾರೆ.