- ಸರಕಾರದ ಹೊಸ ಆದೇಶ: ಕರೋನಾ 3ನೇ ಅಲೆ ಹಿನ್ನೆಲೆ
NAMMUR EXPRESS NEWS
ಬೆಂಗಳೂರು: ಕರೋನಾ 2ನೇ ಅಲೆಯ ಕಾರಣದಿಂದಾಗಿ ಸಂಘ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಡಿಸೆಂಬರ್ 2021ರ ಅಂತ್ಯದವರೆಗೆ ಮುಂದೂಡಲಾಗಿತ್ತು. ಇದೀಗ ಮತ್ತೆ 3ನೇ ಅಲೆಯಿಂದಾಗಿ ಮಾರ್ಚ್ ತಿಂಗಳವರೆಗೆ ಮುಂದೂಡಲಾಗಿದೆ.
ಪ್ರಸ್ತುತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯನ್ನು ಸಾರ ರಾಜ್ಯದಲ್ಲಿರುವ ಸಂಘ-ಸಂಸ್ಥೆಗಳ ಚುನಾವಣೆ ಉಪಚುನಾವಣೆಗಳನ್ನು ಕೋವಿಡ್ 19 ರ ನಿಯಮಗಳ ಪಾಲನೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವುದು ಕಷ್ಟಸಾಧ್ಯವಾಗಬಹುದು. ಆದ್ದರಿಂದ ಚುನಾವಣೆಗಳು ಜರುಗಿದಲ್ಲಿ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಚುನಾವಣೆ, ಉಪಚುನಾವಣೆಗಳಲ್ಲೂ ಮಾರ್ಚ್ 2022 ರ ಅಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೂ ಮುಂದೂಡುತ್ತಾ ಹಾಗೂ ಈಗಾಗಲೇ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿರುವ ಪ್ರಕರಣಗಳಿಗೂ ಸಹ ಮೇಲಿನ ಕ್ರಮ ಅನ್ವಯವಾಗುವಂತೆ ಆದೇಶ ಮಾಡಲಾಗಿದೆ.